ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜಾಜಿನಗರ ಕ್ಷೇತ್ರದ ಕೋವಿಡ್ ನಿಯಂತ್ರಣ ಕ್ರಮಗಳು ಪರಿಸ್ಥಿತಿ ಕುರಿತು ಅವಲೋಕನ ಸಭೆಯನ್ನು ಇಂದು ನಡೆಸಿದ ಸಚಿವ ಸುರೇಶ್ ಕುಮಾರ್ ತುರ್ತುಕ್ರಮಗಳಿಗೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಚಿಹ್ನೆ ಇರುವ ಸೋಂಕಿತರಿಗೆ ಆಸ್ಪತ್ರೆಗಳಿಗೆ ಸೇರಿಸುವುದು, ಹೋಂ ಐಸೋಲೇಶನ್ ನಲ್ಲಿರುವ ಸೋಂಕಿತರಿಗೆ ಔಷಧಿ ಒದಗಿಸುವುದು, ಅಂಬುಲೆನ್ಸ್ ವ್ಯವಸ್ಥೆ ಮಾಡುವುದೂ ಸೇರಿದಂತೆ ಈ ಸಂಬಂಧ ಉದ್ಭವವಾಗುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಬೇಕೆಂದು ನಿರ್ದೇಶಿಸಿದ ಸಚಿವರು ಪ್ರತಿಯೊಂದು ಕಾರ್ಯಕ್ಕೂ ಓರ್ವ ಅಧಿಕಾರಿಯನ್ನು ನಿಯೋಜಿಸಲು ಸೂಚಿಸಿದರು.
ಪೋರ್ಟಬಲ್ ಆಕ್ಸಿಜನ್ ಯೂನಿಟ್ ಗಳನ್ನು ಹೊಂದುವುದು, ಪ್ರತಿಯೊಂದು ಹೋಂ ಐಸೋಲೇಶನ್ ನಲ್ಲಿರುವ ಕುಟುಂಬವನ್ನು ಪ್ರತಿದಿನ ಸಂಪರ್ಕಿಸಿ ಅವರ ಯೋಗಕ್ಷೇಮ ವಿಚಾರಿಸಲು ವ್ಯವಸ್ಥೆಯನ್ನು ನಿರ್ವಹಿಸುವುದು, ಮೇ ಒಂದರಿಂದ ಹದಿನೆಂಟು ವರ್ಷಗಳ ಮೇಲಿರುವ ಪ್ರತಿ ನಾಗರೀಕರಿಗೆ ವ್ಯಾಕ್ಸಿನೇಷನ್ ಹಾಕಲು ಬೇಕಾದ ಸಕಲ ಸಿದ್ಧತೆ ನಡೆಸಲು ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ವಲಯದ ಜಂಟಿ ಆಯುಕ್ತರು, ಕ್ಷೇತ್ರದ ಆರೋಗ್ಯ ಅಧಿಕಾರಿ, ಬಿಬಿಎಂಪಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ವಯಂಸೇವಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post