ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಬಸವನಗುಡಿ, ನ್ಯಾಷನಲ್ ಕಾಲೇಜು, ಎಚ್. ಎನ್. ಮಲ್ಟಿಮೀಡಿಯಾ ಹಾಲ್‌ನಲ್ಲಿ ನ.20ರ ಭಾನುವಾರ ರವಿ ಮಡೋಡಿ ಹಾಗೂ ಪೂರ್ಣಿಮಾ ಹೆಗಡೆಯವರ ’ನಮ್ಮಲ್ಲೆ ಮೊದಲು’(ಲಲಿತ ಪ್ರಬಂಧಗಳ ಸಂಕಲನ) ಹಾಗೂ ’ಅಂತರ್ವೀಕ್ಷಣೆ’ (ಭಗವದ್ಗೀತೆಯ 18 ಅಧ್ಯಾಯಗಳ ಆಶಯದ ಮೇಲೆ ರಚಿಸಲಾದ ಸಣ್ಣ ಕಥೆಗಳು) ಕೃತಿಗಳ ಬಿಡುಗಡೆಯ ಸಮಾರಂಭ ಆಯೋಜಿಸಲಾಗಿದೆ.
ಸಾಹಿತಿ ಜೋಗಿ ಅವರು ಕೃತಿಗಳನ್ನು ಲೋಕಾರ್ಪಾಣೆಗೊಳಿಸಲಿದ್ದು, ಕವಿ ಬಿ.ಆರ್. ಲಕ್ಷ್ಮಣರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ವಿದ್ವಾಂಸರು ಡಾ. ಆನಂದರಾಮ ಉಪಾಧ್ಯ ಹಾಗೂ ಸಾಹಿತಿ ಭಾರತಿ ಹೆಗಡೆ ಕೃತಿಗಳ ಕುರಿತು ಮಾತನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಯಕ್ಷಕಲಾ ಅಕಾಡಮಿ ಬೆಂಗಳೂರು ಇದರ ಬಾಲ ಕಲಾವಿದರಿಂದ ವೀರ ವೃಷಸೇನ ಯಕ್ಷಗಾನ ನಡೆಯಲಿದೆ.
Discussion about this post