ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರೀಯ ಹೆದ್ದಾರಿಯಲ್ಲಿ #National Highway ನೆಲಮಂಗಲ ಬಳಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಬೃಹತ್ ಕಂಟೇನರ್ ಉರುಳಿಬಿದ್ದ ಪರಿಣಾಮ ಹೊಸ ಕಾರೊಂದು ಅಪ್ಪಚ್ಚಿಯಾಗಿ, #Container Overturned On Car ಆರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ ಬಳಿಯ ತಾಳೆಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲೇ ಆರು ಮಂದಿ ಸಾವಿಗೀಡಾಗಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಂಟೇನ ಚಾಲಕನ ನಿಯಂತ್ರಣ ತಪ್ಪಿದೆ. ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ನಡೆದಿದೆ. ಕಂಟೇನರ್ ಕಾರಿನ ಮೇಲೆ ಉರುಳಿಬಿದ್ದಿದ್ದು, ಕಾರು ಬಹುತೇಕ ಅಪ್ಪಚ್ಚಿಯಾಗಿದೆ.
Also read: ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ: ಶಾಸಕ ಡಾ. ಧನಂಜಯ ಸರ್ಜಿ ಕಿವಿಮಾತು
ಕಾರಿನ ಒಳಗಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ದೃಶ್ಯಗಳು ಮನಕಲುಕುವಂತಿತ್ತು.
ಮೃತರನ್ನು 6 ಮಂದಿ ವಿಜಯಪುರ ಮೂಲದ ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಎಂದು ಗುರುತಿಸಲಾಗಿದೆ.
ಬೃಹತ್ ಕ್ರೇನ್’ಗಳನ್ನು ಬಳಿಸಿ ಕಂಟೇನರನ್ನು ಎತ್ತಿ, ಅಪ್ಪಚ್ಚಿಯಾದ ಕಾರಿನೊಳಗಿದ್ದ ಮೃತದೇಹಗಳನ್ನು ಸಾರ್ವಜನಿಕರ ನೆರವಿನೊಂದಿಗೆ ಪೊಲೀಸರು ಹೊರತೆಗೆದಿದ್ದಾರೆ.
ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 10 ಕಿಲೋಮಿಟರ್ ಉದ್ದದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post