ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಿತ್ತಳೆ ಹಣ್ಣುಗಳನ್ನು ಮಾರಿ ತನ್ನ ಪುಟ್ಟ ಊರು ಹರೇಕಳದಲ್ಲಿ ಶಾಲೆ ಆರಂಭಿಸಿ ಬಡ ಮಕ್ಕಳ ಪಾಲಿಗೆ ಬೆಳಕಾದ ಅಕ್ಷರ ಸಂತ ಹಾಜಬ್ಬರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.


ತನ್ನಂತೆ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಒಂದೇ ಆಸೆಯಿಂದ ತನ್ನ ಮನೆ- ಮಠ ಮತ್ತು ಮನೆಯವರನ್ನು ಬಿಟ್ಟು ಮಂಗಳೂರು ನಗರದಲ್ಲಿ ತಲೆಯ ಮೇಲೆ ಕಿತ್ತಳೆ ಹಣ್ಣುಗಳ ಬುಟ್ಟಿಯಿಟ್ಟು ಬೀದಿಗಳನ್ನು ಸುತ್ತಿ ನಗರದ ಉರಿ ಬಿಸಿಲು, ಗಾಳಿ ಮಳೆ ಲೆಕ್ಕಿಸದೆ ಕಿತ್ತಳೆ ಹಣ್ಣುಗಳನ್ನು ಮಾರಿ ತನ್ನ ಪುಟ್ಟ ಊರು ಹರೇಕಳದಲ್ಲಿ ಶಾಲೆ ಆರಂಭಿಸಿ ದೀಪದ ಬತ್ತಿಯಂತೆ ತಾನು ಕರಗಿ ಹೋದರೂ ಬಡ ಮಕ್ಕಳ ಪಾಲಿಗೆ ಬೆಳಕಾದ ಅಕ್ಷರ ಸಂತ ಹಾಜಬ್ಬರಿಗೆ ನವದೆಹಲಿಯ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















