ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಾಮಾನ್ಯವಾಗಿ ಗಣೇಶೋತ್ಸವದಲ್ಲಿ ವಿವಿಧ ಘಟನಾವಳಿಗಳು ಹಾಗೂ ಸಂದೇಶ ಸಾರುವ ಮಾದರಿಗಳನ್ನು ರೂಪಿಸುತ್ತಾರೆ. ಆದರೆ, ಇಲ್ಲೊಂದು ಕಡೆಯಲ್ಲಿ ಚಂದ್ರಯಾನ-3ರ Chandrayaana-3 ಪ್ರಯಾಣದ ಅದ್ಬುತ ಮಾದರಿಯಲ್ಲಿ ತಯಾರಿಸಲಾಗಿದೆ.
ಹೌದು… ಈ ಮಾದರಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಈ ಗಣೇಶೋತ್ಸವ Ganeshothsava ಎಲ್ಲಿಯದು ಎಂಬುದು ತಿಳಿದುಬಂದಿಲ್ಲ.
ಗಣೇಶ ಪ್ರತಿಷ್ಠಾಪನೆಯ ಜೊತೆಯಲ್ಲಿ ಈ ಚಂದ್ರಯಾನ-3ರ ಮಾದರಿಯನ್ನು ರೂಪಿಸಲಾಗಿದೆ. ಚಂದ್ರಯಾನ-3ರ ರಾಕೇಟ್ ಉಡಾವಣೆ, ಭೂಮಿಯ ಕಕ್ಷೆಯಿಂದ ಬೇರ್ಪಡುವುದು, ಚಂದ್ರನ ಕಕ್ಷೆಯನ್ನು ಸೇರಿ, ಚಂದ್ರನ ಸುತ್ತಲೂ ಸುತ್ತುವುದು ಆನಂತರ ವಿಕ್ರಂ ಲ್ಯಾಂಡರ್ Vikram Lander ಲ್ಯಾಂಡ್ ಆಗುತ್ತದೆ. ನಂತರ ಪ್ರಜ್ಞಾನ್ ರೋವರ್ ಲ್ಯಾಂಡರ್’ನಿಂದ Prgnan Rover Lander ಹೊರಕ್ಕೆ ಚಂದ್ರನ ಮೇಲೆ ಚಲಿಸುವ ದೃಶ್ಯಗಳನ್ನು ಅತ್ಯಂತ ಸುಂದರವಾಗಿ ರೂಪಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.
Also read: ಊರಿಗೆ ಬಂದ ಕಾಡುಪಾಪ: ಪತ್ತೆಯಾಗಿದ್ದೆಲ್ಲಿ ಗೊತ್ತಾ?
ಈ ಮಾದರಿಯ ಸಂಪೂರ್ಣ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post