ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೌಲ್ಯ ಶಿಕ್ಷಣದ ಅಗತ್ಯ ಹಾಗೂ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಏಕಾಂಗಿ ಬೈಕ್ ಯಾತ್ರೆಯನ್ನು ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ ಆಯೋಜಿಸಿದೆ.
ಮೈಸೂರಿನ ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ ಸ್ಥಾಪಕರಾದ ನಿತ್ಯಾನಂದ ವಿವೇಕವಂಶಿ ಅವರು ಈ ಏಕಾಂಗಿ ಯಾತ್ರೆ ನಡೆಸಲಿದ್ದು, ಒಂದು ಅದ್ಬುತ ಪರಿಕಲ್ಪನೆಯೊಂದಿಗೆ ಬರೋಬ್ಬರಿ ಮೂರು ಸಾವಿರ ಕಿಲೋ ಮೀಟರ್ ಸಂಚರಿಸುವ ಯೋಜನೆ ಇದಾಗಿದೆ.
17 ದಿನಗಳ ಅವಧಿಯ ಈ ಏಕಾಂಗಿ ಯಾತ್ರೆ ಒಟ್ಟು ಮೂರು ಸಾವಿರ ಕಿಲೋ ಮೀಟರ್ ಸಂಚರಿಸಲಿದೆ. ರಾಜ್ಯದ ಎಲ್ಲ 31 ಜಿಲ್ಲೆಗಳ 75 ಕ್ಕೂ ಹೆಚ್ಚು ಪ್ರೌಢಶಾಲೆಗಳ ಭೇಟಿ ಮತ್ತು ಉಪನ್ಯಾಸ ನಡೆಯಲಿದ್ದು, 10,000 ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದವನ್ನು ನಿತ್ಯಾನಂದ ವಿವೇಕವಂಶಿ ನಡೆಸಲಿದ್ದಾರೆ.
Also read: 15,000 MW renewable energy produced in Karnataka: CM Bommai
ಮೌಲ್ಯ ಶಿಕ್ಷಣ ಕುರಿತಾಗಿ ಜನಾಭಿಪ್ರಾಯ ಮೂಡಿಸಲು ಸಹಕಾರ ಕೋರಿ ರಾಜ್ಯದಾದ್ಯಂತ ಶಿಕ್ಷಣ ಪ್ರೇಮಿಗಳ, ಶಿಕ್ಷಣ ತಜ್ಞರ ಭೇಟಿ, ಮಾತುಕತೆ ನಡೆಯಲಿದ್ದು, ಫೆ. 12ರಿಂದ 23ರವರೆಗೂ ಯಾತ್ರೆ ನಡೆಯಲಿದೆ.
ಪ್ರದಕ್ಷಿಣಂ ಯಾತ್ರೆಗೆ ನೀವು ಯಾವ ರೀತಿ ಸಹಕಾರ ನೀಡಬಹುದು?
- ಉಪನ್ಯಾಸ ಕಾರ್ಯಕ್ರಮಕ್ಕೆ ಶಾಲೆಗಳನ್ನು ಜೋಡಿಸುವುದು.
- ಆ ಕಾರ್ಯಕ್ರಮ ತಯಾರಿಗೆ ಆಯೋಜಕರಾಗಿ ಮತ್ತು ಸ್ವಯಂ ಸೇವಕರಾಗಿ ತೊಡಗಿಕೊಳ್ಳುವುದು.
- ಬೈಕ್ ಯಾತ್ರೆಯಲ್ಲಿ ನಮ್ಮೊಂದಿಗೆ ನೀವೂ ಕೆಲವೊಂದಷ್ಟು ದೂರ ಬೈಕ್ ನಲ್ಲಿ ಪಾಲ್ಗೊಳ್ಳುವುದು.
- ಮೌಲ್ಯ ಶಿಕ್ಷಣ ವಿಚಾರವನ್ನು ಪ್ರಚಾರ ಮಾಡಲು ಪತ್ರಿಕಾ, ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ವರದಿಗಾರರ ಸಂಪರ್ಕವನ್ನು ಏರ್ಪಡಿಸುವುದು.
- ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ಮಕ್ಕಳ ಪುಸ್ತಕಗಳನ್ನು, ಮಕ್ಕಳು ಉಪಯೋಗಿಸಲ್ಪಡುವ ಪೆನ್ನು – ಪೆನ್ಸಿಲ್’ಗಳನ್ನು ದಾನವಾಗಿ ನೀಡುವುದು.
- ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೋಡಿಕೊಳ್ಳುವುದು.
- ಯಾತ್ರೆಯ ಇತರೆ ವೆಚ್ಚದ ಪೈಕಿ ಒಂದಷ್ಟು ಖರ್ಚನ್ನು ವಹಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880649290
ಪ್ರದಕ್ಷಿಣಂ – ವಿವೇಕ ರಾಜ್ಯ ಪರಿಕ್ರಮ ಮಾರ್ಗಸೂಚಿ :
ಫೆಬ್ರವರಿ 12 ರಂದು ಮಂಡ್ಯದ ಅಂಬೇಡ್ಕರ್ ಭವನದಿಂದ ಆರಂಭ
ಫೆ 12 – ಮಂಡ್ಯ
ಫೆ 13 – ಮೈಸೂರು
ಫೆ 13 – ಮಡಿಕೇರಿ
ಫೆ 14 – ದಕ್ಷಿಣ ಕನ್ನಡ
ಫೆ 14 – ಉಡುಪಿ
ಫೆ 15 – ಉತ್ತರ ಕನ್ನಡ
ಫೆ 15 – ಧಾರವಾಡ
ಫೆ 16 – ಬೆಳಗಾವಿ
ಫೆ 16 – ಬಾಗಲಕೋಟ
ಫೆ 17 – ವಿಜಯಪುರ
ಫೆ 17 – ಕಲ್ಬುರ್ಗಿ
ಫೆ 18 – ಬೀದರ್
ಫೆ 18 – ಯಾದಗಿರಿ
ಫೆ 19 – ರಾಯಚೂರು
ಫೆ 19 – ಬಳ್ಳಾರಿ
ಫೆ 20 – ಹೊಸಪೇಟೆ
ಫೆ 20 – ಕೊಪ್ಪಳ
ಫೆ 21 – ಗದಗ
ಫೆ 21 – ಹಾವೇರಿ
ಫೆ 22 – ದಾವಣಗೆರೆ
ಫೆ 22 – ಚಿತ್ರದುರ್ಗ
ಫೆ 23 – ಶಿವಮೊಗ್ಗ
ಫೆ 23 – ಚಿಕ್ಕಮಗಳೂರು
ಫೆ 24 – ಹಾಸನ
ಫೆ 24 – ತುಮಕೂರು
ಫೆ 25 – ಚಿಕ್ಕಬಳ್ಳಾಪುರ
ಫೆ 25 – ಕೋಲಾರ
ಫೆ 26 – ಬೆಂಗಳೂರು ಗ್ರಾಮಾಂತರ
ಫೆ 26 – ಬೆಂಗಳೂರು
ಫೆ 27 – ರಾಮನಗರ
ಫೆ 27 – ಚಾಮರಾಜನಗರ
ಫೆ 28 – ಮೈಸೂರು
ಫೆಬ್ರವರಿ 28ರಂದು ಮೈಸೂರಿನ ರಾಮಕೃಷ್ಣ ಆಶ್ರಮದ ಬಳಿಯ ವಿವೇಕಾನಂದ ಪ್ರತಿಮೆಯ ಬಳಿಯಲ್ಲಿ ಸಂಪನ್ನವಾಗುವುದು.
(ವರದಿ: ಪುನೀತ್ ಜಿ. ಕೂಡ್ಲೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















