ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ #Prajwal Revanna ಅವರನ್ನು ಆರು ದಿನ ವಿಶೇಷ ತನಿಖಾ ತಂಡ (Special Investigation Team) ಗೆ ವಹಿಸಲಾಗಿದೆ.
ಈ ಕುರಿತಂತೆ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದ್ದು, ಆರು ದಿನ ಎಸ್’ಐಟಿ ಕಸ್ಟಡಿಗೆ ವಹಿಸಲಾಗಿದೆ.
ವೈದ್ಯಕೀಯ ಪರೀಕ್ಷೆಯ ನಂತರ ಪೊಲೀಸರು 42ನೇ ಎಸಿಎಂಎಂನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ವೇಳೆ ಎಸ್’ಐಟಿ 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಮಧ್ಯಾಹ್ನದ ನಂತರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ 6 ದಿನ ಎಸ್’ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದೆ.
Also read: ಪರಿಷತ್ ಚುನಾವಣೆ | ಸ್ವತಂತ್ರವಾಗಿ ಸ್ಪರ್ಧಿಸಿರುವ ನನ್ನನ್ನು ಗೆಲ್ಲಿಸಿ | ಮುಜಾಹಿದ್ ಸಿದ್ದೀಕಿ ಮನವಿ
ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಜರ್ಮನಿಯಲ್ಲಿದ್ದ ಪ್ರಜ್ವಲ್ ರೇವಣ್ಣ ನಿನ್ನೆ ತಡರಾತ್ರಿ ಸುಮಾರು 12.35 ರ ವೇಳೆಗೆ ಮ್ಯೂನಿಕ್’ನಿಂದ ಬೆಂಗಳೂರಿಗೆ ಬಂದಿಳಿದರು. ವಿಮಾನದ ಬಳಿ ತೆರಳಿ ಸಿಐಎಸ್’ಎಫ್ ಅಧಿಕಾರಿಗಳ ತಂಡ ಅವರನ್ನು ವಶಕ್ಕೆ ಪಡೆದು, ಎಸ್’ಐಟಿಗೆ ಹಸ್ತಾಂತರ ಮಾಡಿತ್ತು.
ಎಸ್‌ಐಟಿ ಕಚೇರಿಯಲ್ಲೆ ರಾತ್ರಿ ಕಳೆದ ಪ್ರಜ್ವಲ್ ಅವರನ್ನು ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post