ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪಿಎಸ್ ಐ ನೇಮಕಾತಿ ಅವ್ಯವಹಾರದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ Minister Ashwath Narayan ಮತ್ತು ಅವರ ಸಂಭಂದಿ ಭಾಗಿಯಾಗಿರುವ ಕುರಿತು ಸಾಕ್ಷಿಗಳನ್ನು ಒದಗಿಸಲಿ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ Minister Gopalaiah ವಿರೋಧ ಪಕ್ಷಗಳ ನಾಯಕರನ್ನು ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದೇ ಕೆಲವರು ಮಾಡಿರುವ ಪಿತೂರಿ ಇದು.ಪುರಾವೆಗಳು ಇದ್ದರೆ ಅವರು ನ್ಯಾಯಾಲಯಕ್ಕೆ ಹೋಗಲಿ ಎಂದರು.
ಈ ಹಿಂದಿನ ಸರ್ಕಾರದಲ್ಲಿ ಇದೇ ರೀತಿ ನಡೆದಿರುವ ನೇಮಕಾತಿ ಅಕ್ರಮಗಳ ಬಗ್ಗೆಯೂ ತನಿಖೆಯಾಗಬೇಕು. ಈಗಾಗಲೇ ಬಂಧಿತನಾಗಿರುವ ತುಮಕೂರು ಯುವಕ ಮತ್ತು ಆತನ ಸಹೋದರ ನಾವು ಅಶ್ವಥ್ ನಾರಾಯಣ್ ಅವರನ್ನು ನೋಡಿಯೇ ಇಲ್ಲ ಎನ್ನುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಶ್ವಥ್ ನಾರಾಯಣ ಅವರು ಭಾಗಿಯಾಗಿರುವ ಕುರಿತು ಸಾಕ್ಷಿ ಇದ್ದರೆ ನೀಡಲಿ ಎಂದು ಒತ್ತಾಯಿಸಿದರು.
ರಾಗಿ ಖರೀದಿ ಕೇಂದ್ರದಲ್ಲಿ ಕಾಣುವ ದಲ್ಲಾಳಿಗಳ ವಿರುದ್ದ ಕಾನೂನು ಕ್ರಮ:
ರಾಗಿ ಖರೀದಿ ಕೇಂದ್ರಗಳಲ್ಲಿ ಮಧ್ಯ ವರ್ತಿಗಳು ಮತ್ತು ದಲ್ಲಾಳಿಗಳು ಕಂಡು ಬಂದರೆ ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ರಾಜ್ಯದ ರಾಗಿ ಬೆಳೆಗಾರರ ಹಿತ ಕಾಪಾಡಲು ಈಗಾಗಲೇ ಮುಖ್ಯ ಮಂತ್ರಿಗಳು ಕೇಂದ್ರ ಆಹಾರ ಖಾತೆ ಸಚಿವರೊಂದಿಗೆ ಮಾತನಾಡಿ ಒಪ್ಪಿಗೆ ಪಡೆದಿದ್ದು, ಶ್ರೀಘ್ರದಲ್ಲೆ ರಾಗಿ ಖರೀದಿ ಆರಂಭವಾಗಲಿದೆ ಎಂದರು.
Also read: ಕೈಗಾರಿಕೋದ್ಯಮಿಯಾಗಲು ಯುವ ಉದ್ಯಮಿಗಳು ಧೈರ್ಯದಿಂದ ಮುಂದೆ ಬರಬೇಕು
ಹೆಚ್ಚು ರಾಗಿ ಬೆಳೆಯುವ ಹಾಸನ, ಹಳೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಭಾಗದ ರಾಗಿ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಖರೀದಿ ಕೇಂದ್ರ ಮಧ್ಯ ವರ್ತಿಗಳು, ದಲ್ಲಾಲರು ಕಂಡು ಬಂದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಮತ್ತೆ ಎರಡು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಅವರು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post