No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
  • Advertise With Us
  • Grievances
  • About Us
  • Contact Us
Monday, September 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಗುಣಮಟ್ಟದ ಓದು ಮುಖ್ಯ: ಡಿ.ಪಿ ಅಗರವಾಲ್‌

ಬೆಂಗಳೂರು | ಐಎಎಸ್‌ ಅಕಾಂಕ್ಷಿಗಳೊಂದಿಗೆ ವಿಶೇಷ ಸಂವಾದ

kalpa News by kalpa News
December 2, 2024
in ಬೆಂಗಳೂರು ನಗರ
0
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಗುಣಮಟ್ಟದ ಓದು ಮುಖ್ಯ: ಡಿ.ಪಿ ಅಗರವಾಲ್‌
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಹಲವಾರು ಗಂಟೆಗಳ ನಿರಂತರ ಓದಿಗಿಂತ, ಏಕಾಗ್ರತೆಯಿಂದ ವ್ಯವಸ್ಥಿತವಾದ ಗುಣಮಟ್ಟದ ಓದು ಹಾಗೂ ಅದನ್ನು ಅರ್ಥೈಸಿಕೊಂಡು ಸಮರ್ಥವಾದ ಉತ್ತರ ಬರೆಯುವುದು ಮುಖ್ಯ ಎಂದು ಯುಪಿಎಸ್‌ಸಿ ಅಧ್ಯಕ್ಷರಾಗಿದ್ದ ಡಿ.ಪಿ ಅಗರವಾಲ್‌ ಐಎಎಸ್‌ ಪರೀಕ್ಷೆಯ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.

ಇಂದು ಚಂದ್ರ ಲೇಔಟ್ ನಲ್ಲಿರುವ ಗ್ರೇಸ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ ವತಿಯಿಂದ ಆಯೋಜಿಸಲಾಗಿದ್ದ ಐಎಎಸ್‌ ಅಕಾಂಕ್ಷಿಗಳೊಂದಿಗೆ ವಿಶೇಷ ಸಂವಾದದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ತಂತ್ರಗಳ ಬಗ್ಗೆ ಮಾಹಿತಿ ನೀಡಿದರು.
ನಿರಂತರ ಓದಿಗಿಂತ ಗುಣಮಟ್ಟದ ಓದು ಮುಖ್ಯ:

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಹಲವಾರು ಗಂಟೆಗಳ ನಿರಂತರ ಓದಿನ ಅಗತ್ಯವಿದೆ ಎನ್ನುವುದು ತಪ್ಪು ತಿಳುವಳಿಕೆ. ಹಲವಾರು ಗಂಟೆಗಳ ಕಾಲ ಅಧ್ಯಯನಕ್ಕಿಂತ ಹೆಚ್ಚಾಗಿ ಕೆಲವೇ ಗಂಟೆಗಳ ನಿರಂತರ ಏಕಾಗ್ರತೆ, ವಿಚಲಿತರಾಗದೇ ವಿಷಯದ ಬಗ್ಗೆ ಆಳವಾದ ಅರ್ಥೈಸುವಿಕೆ ಹಾಗೂ ಅದನ್ನ ನಿಮ್ಮದೇ ಆದ ತರ್ಕಬದ್ದವಾಗಿ, ವಿಶ್ಲೇಷಣೆಯ ಉತ್ತರ ಬರೆಯುವುದನ್ನು ರೂಢಿಸಿಕೊಳ್ಳುವುದು ಮುಖ್ಯ. ಎರಡು ಗಂಟೆಗಳ ಪರೀಕ್ಷೆಯಲ್ಲಿ ಒಂದೆಡೆ ಕುಳಿತು ಬರೆಯುವಲ್ಲಿ ಬಹಳಷ್ಟು ಅಭ್ಯರ್ಥಿಗಳು ವಿಫಲರಾಗುತ್ತಾರೆ. ಪ್ರಾರಂಭದ ಕೆಲವು ನಿಮಿಷಗಳ ನಂತರ ವಿಚಲಿತರಾಗಿ ಸಮಯ ವ್ಯರ್ಥ ಮಾಡುವುದನ್ನೂ ಕಂಡಿದ್ದೇನೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎರಡು ಗಂಟೆಗಳ ಕಾಲ ನಿರಂತರವಾಗಿ ಯಾವುದೇ ಅಡಚಣೆ ಇಲ್ಲದೇ ಒಂದು ಸ್ಥಳದಲ್ಲಿ ಏಕಾಗ್ರತೆಯಿಂದ ಅಧ್ಯಯನ ಹಾಗೂ ಅದನ್ನು ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೋಚಿಂಗ್‌ ಸೆಂಟರ್‌ಗಳಲ್ಲಿ ಸಿಗುವ ಮೇಟೀರಿಯಲ್‌ ಜೊತೆಯಲ್ಲಿಯೇ ಸಮಗ್ರ ವಿಷಯ ಅರ್ಥೈಸಿಕೊಳ್ಳಲು ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಆದರೆ, ಉತ್ತರ ಮಾತ್ರ ನಿಮ್ಮದೇ ವಿಶೇಷ ಶೈಲಿಯಲ್ಲಿರಬೇಕೆ ಹೊರತು, ಪುಸ್ತಕದ ಕಾಪಿಯಂತಲ್ಲ ಎಂದು ಕಿವಿ ಮಾತು ತಿಳಿಸಿದರು.

Also read: ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ | ದೇಶಕ್ಕೆ ಯಾರಾದರೂ ಚಿನ್ನ ತನ್ನಿ: ಸಿಎಂ ಕರೆ

ಯುಪಿಎಸ್ಸ್‌ಸಿ ಯಶಸ್ಸಿಗೆ ಯಾವುದೇ ಸಿದ್ದ ಸೂತ್ರಗಳು ಇಲ್ಲ:

ಪ್ರತಿ ವರ್ಷ ಸರಿಸುಮಾರು 6 ಲಕ್ಷ ಆಕಾಂಕ್ಷಿಗಳು ಎದುರಿಸುವ ಪರೀಕ್ಷೆಯಲ್ಲಿ ಯಶಸ್ಸುಗಳಿಸುವುದು ಕೇವಲ 1000 ಮಾತ್ರ. ಇದನ್ನು ಸಾಧಿಸಲು ಯಾವುದೇ ಸಿದ್ದ ಸೂತ್ರಗಳಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ವಿಶೇಷ ತಯಾರಿಯಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುತ್ತಾರೆ. ಜಗತ್ತಿನಲ್ಲಿ ಕೇಳಿ ಬರುವ ಇತರ ಸೂತ್ರಗಳನ್ನ ಆಧರಿಸುವುದಕ್ಕಿಂತ ನಿಮ್ಮ ಸಾಮರ್ಥ್ಯ ವೃದ್ದಿಸಿಕೊಳ್ಳುವತ್ತ ಹೆಚ್ಚಿನ ಗಮನ ನೀಡಿ ಎಂದರು.
ಜ್ಞಾನಾರ್ಜನೆಯ ಜೊತೆಯಲ್ಲೇ ಪರೀಕ್ಷೆಯ ಒತ್ತಡವನ್ನು ನಿರ್ವಹಿಸುವಷ್ಟು ಆರೋಗ್ಯವೂ ಮುಖ್ಯ:

ಅಧ್ಯಯನ ಮಾಡುವ ಭರಾಟೆಯಲ್ಲಿ ಹಲವರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸುತ್ತಾರೆ. ಪರೀಕ್ಷೆಯ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಅಧ್ಯಯನ ಎಷ್ಟು ಮುಖ್ಯವೋ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಕೂಡಾ ಅಷ್ಟೇ ಮುಖ್ಯ. ಇಡೀ ದಿನವನ್ನು ಕೇವಲ ಅಧ್ಯಯನಕ್ಕೆ ಮೀಸಲು ಇಡದೇ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಬೆಳೆಸಿಕೊಳ್ಳುವತ್ತ ಗಮನ ನೀಡಬೇಕು.

ಪರಿಕ್ಷೆಯ ಓದಿನ ಜೊತೆಯಲ್ಲಿಯೇ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಇನ್ನಿತರ ವಿಷಯಗಳ ಬಗ್ಗೆ ತಿಳುವಳಿಕೆಯೂ ಮುಖ್ಯ:
ಕೇವಲ ಪರೀಕ್ಷೆಗಾಗಿ ಓದು ಯುಪಿಎಸ್‌ಸಿ ಪರೀಕ್ಷೆಯ ಒಂದು ಹಂತವನ್ನು ದಾಟಿಸಬಹುದು. ಆದರೆ, ಪ್ರಿಲಿಮ್ಸ್‌, ಮೇನ್ಸ್‌ ಹಾಗೂ ಸಂದರ್ಶನ ಮೂರು ಹಂತಗಳನ್ನು ಯಶಸ್ಸು ಸಾಧಿಸಲು ನಿಮ್ಮದೇ ಆದ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಮುಖ್ಯ. ಯುಪಿಎಸ್‌ಸಿ ಪರೀಕ್ಷೆ ಎದುರಿಸುವ ಆಯ್ಕೆ ಮಾಡಿದಿಂದಲೇ ಒಂದು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ನಿರಂತರ ದಿನಪತ್ರಿಕೆಗಳ ಓದು, ನಮ್ಮ ದೇಶ ವಿದೇಶದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ತಿಳುವಳಿಕೆ, ಹಲವಾರು ವಿಷಯಗಳ ಬಗ್ಗೆ ವಿಶ್ಲೇಷಿಸುವ ತರ್ಕಬದ್ದ ಆಲೋಚನೆಗಳನ್ನು ಮಾಡುವ ಸಾಮರ್ಥ್ಯ ವೃದ್ದಿಗೆ ಆದ್ಯತೆ ನೀಡಬೇಕು ಎಂದರು.
ಇಂಗ್ಲೀಷ್‌ನಲ್ಲಿ ಪರೀಕ್ಷೆ ಬರೆದು ಕನ್ನಡದಲ್ಲಿಯೂ ಸಂದರ್ಶನ ಎದುರಿಸಬಹುದು:

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಕೇವಲ ಇಂಗ್ಲೀಷ್‌ ಭಾಷೆಯೇ ಆಗಬೇಕಾಗಿಲ್ಲ. ಆಯ್ಕೆ ಮಾಡಿಕೊಳ್ಳಬಹುದಾದ ಎಲ್ಲಾ ಭಾಷೆಗಳಿಗೂ ಸಮಾನ ಮಾನ್ಯತೆ ಸಿಗುತ್ತದೆ. ಆದರೆ ಆಕಾಂಕ್ಷಿಗಳು ಆಯ್ಕೆ ಮಾಡುವ ಭಾಷೆಯಲ್ಲಿ ಉತ್ತರ ಬರೆಯುವ ಹಾಗೂ ಉತ್ತಮ ಸಂವಹನ ಮಾಡುವ ಸಾಮರ್ಥ್ಯ ಇರಬೇಕು. ಪರೀಕ್ಷೆಯನ್ನು ಇಂಗ್ಲೀಷ್‌ನಲ್ಲಿ ಬರೆದು ಸಂದರ್ಶನವನ್ನು ಕನ್ನಡದಲ್ಲಿಯೂ ನೀಡಬಹುದು. ಹಲವಾರು ಅವಕಾಶಗಳಿದ್ದು ಅವುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ಪರೀಕ್ಷೆಯಲ್ಲಿ ಬರೆಯುವ ಉತ್ತರ, ಪ್ರಶ್ನೆಗೆ ಅನುಗುಣವಾಗಿ ವಿಶ್ಲೇಷಣೆ ಮಾಡುವ ತರ್ಕಬದ್ದವಾಗಿ ವಾದ ಮಂಡಿಸುವಂತಿರಬೇಕೆ ಹೊರತು, ಯಾರನ್ನೋ ಮೆಚ್ಚಿಸುವಂತಹದ್ದಲ್ಲ. ಇದು ಸಂದರ್ಶನಕ್ಕೂ ಅನ್ವಯವಾಗುತ್ತದೆ. ತಮಗೆ ತಿಳಿದಿರುವ ಉತ್ತರವನ್ನು ಉತ್ತಮವಾಗಿ ನಿಮ್ಮದೇ ಆದ ಶೈಲಿಯಲ್ಲಿ ಪ್ರಸುತಪಡಿಸಬೇಕು. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದರು.

ಆಕಾಂಕ್ಷಿಗಳ ಹಲವಾರು ಪ್ರಶ್ನೆಗಳೀಗೆ ಉತ್ತರಿಸುವ ಮೂಲಕ ಆಕಾಂಕ್ಷಿಗಳನ್ನು ಪ್ರೋತ್ಸಾಹಿಸಿದರು.

ಗ್ರೇಸ್ ಐಎಎಸ್ ಕೋಚಿಂಗ್ ಸೆಂಟರ್ ನ ನಿರ್ದೇಶಕರಾದ ಸಂಜು ಸಿಂಗ್ ಮಾತನಾಡಿ, ಸಂಸ್ಥೆಯಲ್ಲಿ ಲಭ್ಯವಿರುವ ಹಲವಾರು ಕೋಚಿಂಗ್ ಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮ ದಲ್ಲಿ ಗ್ರೇಸ್ ಐಎಎಸ್ ಸಂಸ್ಥೆಯ ಮಾರ್ಗದರ್ಶಕರಾದ ಸಂಜು ಸಿಂಗ್ ಚೌಹಾಣ್, ಧ್ರುವ ಕುಮಾರ್ ಮತ್ತು ಗೌರವ್ ಗುಪ್ತಾ ಸೇರಿದಂತೆ ನೂರಾರು ಆಕಾಂಕ್ಷಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4
Tags: BangaloreKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_Kannadaಬೆಂಗಳೂರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ | ದೇಶಕ್ಕೆ ಯಾರಾದರೂ ಚಿನ್ನ ತನ್ನಿ: ಸಿಎಂ ಕರೆ

Next Post

ಕೊಡಗಿನಲ್ಲಿ ರೆಡ್ ಅಲರ್ಟ್ | ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

kalpa News

kalpa News

Next Post
ಶಿವಮೊಗ್ಗ | ಸಾಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ

ಕೊಡಗಿನಲ್ಲಿ ರೆಡ್ ಅಲರ್ಟ್ | ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Leave a Reply Cancel reply

Your email address will not be published. Required fields are marked *

No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL