ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಜೆಪಿಯಲ್ಲಿದ್ದುಕೊಂಡು ರಾಯಣ್ಣ ಬ್ರಿಗೇಡ್ #Rayanna Briged ಆರಂಭಿಸಿ ಸಡ್ಡು ಹೊಡೆದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ #K S Eshwarappa ಇದೀಗ ಕ್ರಾಂತಿ ವೀರ ಬ್ರಿಗೇಡ್ #Krantiveera Briged ಎಂಬ ಸಂಘಟನೆಯೊಂದಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಎಲ್ಲಾ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೊಸ ಬ್ರಿಗೇಡ್ ಶುರುವಾಗಿದ್ದು, ಈಶ್ವರಪ್ಪ ಈ ಸಂಘಟನೆಯ ಸಂಚಾಲಕರಾಗಲಿದ್ದಾರೆ. ಹಿಂದುಗಳ ಪರವಾಗಿ ಮತ್ತು ಹಿಂದುಳಿದವರ ಪರವಾಗಿ ಈ ಬ್ರಿಗೇಡ್ ಧ್ವನಿ ಎತ್ತಲಿದೆಯಂತೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದ ಕೆ ಎಸ್ ಈಶ್ವರಪ್ಪ ಬ್ರಿಗೇಡ್ ಕುರಿತಾಗಿ ಮಾಹಿತಿ ಹಂಚಿಕೊಂಡರು. ಫೆಬ್ರವರಿ 4 ರಂದು ಕ್ರಾಂತಿ ವೀರ ಬ್ರಿಗೇಡ್ ಸಂಘಟನೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತದೆ.

ಕ್ರಾಂತಿ ವೀರ ಬ್ರಿಗೇಡ್ ಕುರಿತಾಗಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾಗ ಯಾವುದೇ ಸ್ವಾಮೀಜಿಗಳು ನೇತೃತ್ವ ತೆಗೆದುಕೊಂಡಿರಲಿಲ್ಲ. ಹಿಂದೆ ದೊಡ್ಡವರ ಮಾತು ಕೇಳುವ ಅಭ್ಯಾಸ ನನಗೆ ಅವತ್ತು ಇತ್ತು, ಇವತ್ತು ಇಲ್ಲ. ಅಂದು ದೊಡ್ಡವರ ಮಾತು ಕೇಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದ್ದೆ. ಇಂದು ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ. ಇದು ಯಾವುದೇ ಪಕ್ಷದ ಬ್ರಿಗೇಡ್ ಆಗಿಲ್ಲ. ಬಿಜೆಪಿಯಲ್ಲಿನ ಅಸಮಾಧಾನಿತರು, ಸಮಾಧಾನಿತರು ನಮ್ಮ ಜೊತೆ ಅಂತಾ ಇಲ್ಲಿ ಪ್ರಶ್ನೆ ಇಲ್ಲ. ಫೆಬ್ರವರಿ 4 ಎಲ್ಲವೂ ವೇದಿಕೆ ಮೇಲೆ ಗೊತ್ತಾಗುತ್ತದೆ ಎಂದರು.
Also read: ಸಿದ್ದರಾಮಯ್ಯರನ್ನು ನಟಿ ಜಯಂತಿ ಏನೆಂದು ಕರೆಯುತ್ತಿದ್ದರು ಗೊತ್ತಾ? ಇಲ್ಲಿದೆ ಸ್ವಾರಸ್ಯಕರ ವಿಚಾರ
ನಾನು ಅಂದು ಹೇಳಿದ್ದು ಇಂದು ಬಿಜೆಪಿಯಲ್ಲಿ ಚರ್ಚೆ ಆಗ್ತಿದೆ!
ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಈಶ್ವರಪ್ಪ, ನಾನು ಲೋಕಸಭಾ ಚುನಾವಣೆಗೆ ನಿಲ್ಲುವ ವೇಳೆ ಯಾವ ಕಾರಣಕ್ಕೆ ನಿಲ್ಲುತ್ತಿದ್ದೇನೆ ಎಂದು ಹೇಳಿದ್ದೆ. ನಾನು ಯಾವ ವಿಚಾರ ಹೇಳಿದ್ದೇನೋ ಅದೇ ವಿಚಾರವಾಗಿಯೇ ಇಂದು ಬಿಜೆಪಿಯಲ್ಲಿ ಚರ್ಚೆ ಆಗುತ್ತಿದೆ. ಇದು ತಾತ್ಕಾಲಿಕ ಗೊಂದಲ ಬಗೆಹರಿಯುತ್ತದೆ ಎಂದು ಪರೋಕ್ಷವಾಗಿ ಕುಟುಕಿದರು.
ಮುಂದಿನ ರಾಜಕೀಯ ನಡೆದ ಕುರಿತಾದ ಪ್ರಶ್ನೆಗೆ, ನನ್ನನ್ನು ಬಿಜೆಪಿ ಹೈಕಮಾಂಡ್ ಸೇರಿಸಲು ಯೋಚನೆ ಮಾಡಿದರೆ, ಹೋಗಬೇಕಾ ಅಂತಾ ನಾನೂ ಯೋಚನೆ ಮಾಡಬೇಕು. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷವನ್ನು ಸೇರ್ಪಡೆ ಆಗುವುದಿಲ್ಲ, ಬಿಜೆಪಿ ನನ್ನ ತಾಯಿ. ಇದೀಗ ಆರಂಭ ಆಗಲಿರುವ ಕ್ರಾಂತಿ ವೀರ ಬ್ರಿಗೇಡ್ ಬಿಡಿ ಎಂದು ಮೋದಿ ಯಾವುದೇ ಕಾರಣಕ್ಕೂ ಹೇಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಕಾರಿಪುರದಲ್ಲಿ ವಿಜಯೇಂದ್ರ ಅವರ ಗೆಲುವು ನಮ್ಮ ಭಿಕ್ಷೆ ಅಂತಾ ಡಿ.ಕೆ. ಶಿವಕುಮಾರ್ ಹೇಳಿದ್ದರು. ನಾನು ವರುಣಾದಲ್ಲಿ ನಿಂತಿದ್ದರೆ ಸಿದ್ದರಾಮಯ್ಯ ಕಥೆ ಏನಾಗುತ್ತಿತ್ತು ಅಂತಾ ವಿಜಯೇಂದ್ರ ಹೇಳಿದ್ದಾರೆ. ಅಂದರೆ ನಾನೇ ಗೆಲ್ಲಿಸಿದೆ ಅಂತಾ ತಾನೇ ಅರ್ಥ? ಇದು ಹೋಂದಾಣಿಕೆ ರಾಜಕೀಯ ಅಲ್ಲದೇ ಇನ್ನೇನು?
ರಾಜಕೀಯ ಬೆತ್ತಲೆ ಇದಾಗಿದೆ ಎಂದು ಬಿಎಸ್ವೈ ಕುಟುಂಬದ ಬಗ್ಗೆ ಅಸಮಾಧಾನ ಹೊರಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post