ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದ #Renukaswamy Murder Case ವಿಚಾರಣೆ ಪ್ರಗತಿಯಲ್ಲಿರುವಂತೆಯೇ ಎ2 ಆರೋಪಿ ನಟ ದರ್ಶನ್ #Darshan ಹಾಗೂ ಪ್ರದೋಷ್ #Pradosh ಕುರಿತಾಗಿ ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು, ಸಂಚಲನ ಸೃಷ್ಠಿಸಿದೆ.
ಹೌದು… ನಟ ದರ್ಶನ್ ಬಳಿ ಲೈಸೆನ್ಸ್ ಹೊಂದಿರುವ ಅಮೇರಿಕಾ ನಿರ್ಮಿತ ಎರಡು ಪಿಸ್ತೂಲ್’ಗಳಿವೆ ಎಂದು ವರದಿಯಾಗಿದೆ. ಇದೇ ವೇಳೆ ಇನ್ನೊಬ್ಬ ಆರೋಪಿ ಪ್ರದೋಷ್ ಬಳಿಯೂ ಸಹ ಲೈಸೆನ್ಸ್ ಹೊಂದಿರುವ ಒಂದು ಪಿಸ್ತೂಲ್ ಇದೆ ಎಂದು ತಿಳಿದುಬಂದಿದೆ.
ಇದಕ್ಕೂ ಪ್ರಮುಖವಾಗಿ, ದರ್ಶನ್ ಮತ್ತು ಪ್ರದೋಷ್’ಗೆ ಶಸ್ತ್ರಾಸ್ತ್ರ ಠೇವಣಿ ವಿನಾಯ್ತಿಯನ್ನು ಪೊಲೀಸರೇ ನೀಡಿದ್ದಾರೆ ಎಂದೂ ಸಹ ಹೇಳಲಾಗಿದ್ದು, ಖಚಿತ ಮಾಹಿತಿ ತಿಳಿದುಬರಬೇಕಿದೆ.
ಕಳೆದ ಲೋಕಸಭಾ ಚುನಾವಣಾ #Lok Sabha Election ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕು. ಆದರೆ ಗಣ್ಯ ವ್ಯಕ್ತಿಗಳು ಅನಿವಾರ್ಯದ ಕುರಿತು ದಾಖಲೆ ನೀಡಿ ಶಸ್ತ್ರಾಸ್ತ್ರ ವಾಪಸ್ ನೀಡುವಿಕೆಯಿಂದ ವಿನಾಯ್ತಿ ಪಡೆಯಬಹುದಾಗಿದೆ.
Also read: ಪ್ರಜ್ವಲ್ ರೇವಣ್ಣ ಪ್ರಕರಣ | ಮಾಜಿ ಶಾಸಕ ಪ್ರೀತಂ ಗೌಡಗೆ ನೋಟೀಸ್ ಸಾಧ್ಯತೆ | ಕಾರಣವೇನು?
ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್’ಗಳು, ಬ್ಯುಸಿನೆಸ್ ಮನ್’ಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿಗಳಿಗೆ ಮಾತ್ರ ವಿನಾಯ್ತಿ ನೀಡಬಹುದು. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ಇನ್ಸ್’ಪೆಕ್ಟರ್ ವಶಕ್ಕೆ ಪಡೆಯಬೇಕಾಗಿದೆ.
ಆದರೆ, ಅತಿ ಗಣ್ಯರಿಗೆ ನೀಡುವ ವಿನಾಯ್ತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್’ಗೆ ಸಹ ವಿನಾಯ್ತಿ ನೀಡಿ ಕಳೆದ ಮಾರ್ಚ್ 27 ರಂದು ಬೆಂಗಳೂರು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದರು ಎನ್ನಲಾಗಿದೆ.
ಈಗ ನಟ ದರ್ಶನ್ ಮತ್ತು ಪ್ರದೋಷ್ ಪಿಸ್ತೂಲ್’ಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post