ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ #Renukaswamy Murder Case ಎ1 ಆರೋಪಿ ಪವಿತ್ರಾ ಗೌಡ #Pavithra Gowda ಜಾಮೀನು ಅರ್ಜಿಯನ್ನು ಸೆಷೆನ್ಸ್ ನ್ಯಾಯಾಲಯ ವಜಾ ಮಾಡಿದ್ದು, ಈಕೆಗೆ ಸದ್ಯಕ್ಕೆ ಜೈಲುವಾಸವೇ ಗತಿಯಾಗಿದೆ.
ಪ್ರಕರಣದ ಮೊದಲನೇ ಆರೋಪಿ ಆಗಿರುವ ಪವಿತ್ರಾ ಗೌಡ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ, ವಾದ ವಿವಾದ ಆಲಿಸಿದ ಸೆಷೆನ್ಸ್ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
Also read: ರೇಣುಕಾಸ್ವಾಮಿ ಕೊಲೆ ಕೇಸ್ | ದರ್ಶನ್’ಗೆ ಮತ್ತೆ ಜೈಲೇ ಗತಿ | ಜಾಮೀನು ಅರ್ಜಿ ವಜಾ
115 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡಗೆ ಇಂದು ಜಾಮೀನು ದೊರೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ನ್ಯಾಯಾಲಯ ಇವರ ಅರ್ಜಿಯನ್ನೇ ವಜಾ ಮಾಡುವ ಮೂಲಕ ಶಾಕ್ ನೀಡಿದ್ದು, ಪವಿತ್ರಾ ಗೌಡಗೆ ಜೈಲುವಾಸವೇ ಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post