ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ ಕೊಲೆ ಪ್ರಕರಣ #Renukaswamy Murder Case ತನಿಖೆ ಪೂರ್ಣಗೊಂಡಿದ್ದು ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ವರಿದಿಯಾಗಿದೆ.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಖುದ್ದು ಚಾರ್ಜ್‌ಶೀಟ್ ಡ್ರಾಫ್ಟ್ ಕಾಪಿ ಮೇಲೆ ನಿಗಾ ಇಟ್ಟಿದ್ದಾರೆ ಎನ್ನಲಾಗಿದ್ದು, ಬಹುತೇಕ ಪ್ರಕರಣದಲ್ಲಿ ಚಾಜ್ಶೀðಟ್ನಲ್ಲಿರುವ ಲೋಪ ವಿಚಾರವನ್ನು ವಕೀಲರು ಪ್ರಸ್ತಾಪ ಮಾಡಿ ಆರೋಪಿಗಳನ್ನು ಪಾರು ಮಾಡುತ್ತಾರೆ. ಈ ಕಾರಣಕ್ಕೆ ಕಾನೂನು ತಜ್ಞರಿಂದ ಸಲಹೆ ಪಡೆದು ಆರೋಪ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
Also read: ಸಂಸ್ಕೃತ ಸರಳ, ಸುಂದರ ಸುಲಭವಾದ ಭಾಷೆ: ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ
ಹೆಡ್ ಆಫ್ ದಿ ಚಾರ್ಜ್‌ಶೀಟ್ ಹೇಗಿರಬೇಕು? ಪ್ರಕರಣದಲ್ಲಿನ ಸಾಕ್ಷಿಗಳ ಹೇಳಿಕೆ ಎಲ್ಲಿ ಹಾಕಬೇಕು? ಡಿಜಿಟಲ್ ಸಾಕ್ಷ್ಯಗಳನ್ನು ಹೇಗೆ ನಮೂದಿಸಬೇಕು? ಹೀಗೆ ಎಲ್ಲಾ ಅಂಶಗಳಲ್ಲೂ ಪೊಲೀಸರು ಜಾಗರೂಕತೆ ವಹಿಸಿದ್ದು, ಎಸ್‌ಐಟಿ ಪೊಲೀಸರು ಚಾರ್ಜ್‌ಶೀಟ್ ಪೂರ್ಣಗೊಳಿಸುತ್ತಿದ್ದಾರೆ. ಆರೋಪ ಪಟ್ಟಿಯನ್ನು 2-3 ಬಾರಿ ಕಾನೂನು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post