No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Tuesday, June 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಯಾರು ವೈದಿಕರು, ಯಾರು ಅವೈದಿಕರು? ರಾಘವೇಶ್ವರ ಶ್ರೀ ಅದ್ಬುತವಾಗಿ ವಿವರಿಸಿದ್ದಾರೆ ಓದಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 3, 2024
in ಉತ್ತರ ಕನ್ನಡ
0
ಯಾರು ವೈದಿಕರು, ಯಾರು ಅವೈದಿಕರು? ರಾಘವೇಶ್ವರ ಶ್ರೀ ಅದ್ಬುತವಾಗಿ ವಿವರಿಸಿದ್ದಾರೆ ಓದಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ವೇದಗಳನ್ನು ಆಧರಿಸಿ ಬದುಕು ಕಟ್ಟಿಕೊಂಡವನು ವೈದಿಕ. ಅದಲ್ಲದಿದ್ದವನು ಅವೈದಿಕ. ಗೃಹಸ್ಥರು ಪ್ರತಿಯೊಬ್ಬರೂ ನಿತ್ಯ ವೇದಾಧ್ಯಯನ ಮಾಡಬೇಕು ಎನ್ನುವುದು ಶಂಕರರ ಅನುಜ್ಞೆ. ವೈದಿಕರು ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದ ಪ್ರವರ್ತಕರಾಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ #Raghaveshwara Shri ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 44ನೇ ದಿನವಾದ ಸೋಮವಾರ ನಡೆದ ವೈದಿಕ ಸಮಾವೇಶದಲ್ಲಿ ಆಶೀರ್ವಚನ ನೀಡಿದರು. ವೇದಗಳು ತೋರುವ ದಾರಿಯಲ್ಲಿ ಮುನ್ನಡೆಬೇಕು. ಆ ಮೂಲಕ ನಾವು ಬದುಕು ಕಟ್ಟಿಕೊಳ್ಳಬೇಕು. ಅದನ್ನು ಚಾಚೂ ತಪ್ಪದೇ ಆಚರಿಸುವುದು ಈಶ್ವರನ ಸೇವೆ. ವೈದಿಕರು ಗೃಹಸ್ಥರಲ್ಲಿ ಧಾರ್ಮಿಕ ಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಬಣ್ಣಿಸಿದರು.
ಇಂದು ವೈದಿಕರ ಬದುಕು ವೇದಗಳನ್ನು ಆಧರಿಸಿದೆ. ವೇದಗಳನ್ನು, ಕರ್ಮಕಾಂಡಗಳನ್ನು ಅಧ್ಯಯನ ಮಾಡಿದ ಸಣ್ಣ ಗುಂಪು ಮಾತ್ರ ಸಮಾಜದಲ್ಲಿದೆ. ಕಾಲಪ್ರವಾಹದಲ್ಲಿ ಸಿಲುಕಿ ಎಲ್ಲರೂ ಇದರಿಂದ ವಿಮುಖರಾಗಿದ್ದಾರೆ. ಸಣ್ಣ ಗುಂಪಾದರೂ ಅದನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.

ವೇದವೃತ್ತಿ ಬಗ್ಗೆ ಹೆಮ್ಮೆ ಇರಲಿ. ಜೀವನಗಳನ್ನು ದೇವರ ಜತೆ ಸಂಪರ್ಕಿಸುವ ಸೇತುಗಳು ನೀವು. ಇದು ದೇಶಕ್ಕೆ ನೀಡುವ ಅತಿದೊಡ್ಡ ಕೊಡುಗೆ. ಹೆಚ್ಚಿನ ಶ್ರದ್ಧೆಯಿಂದ ಇವುಗಳನ್ನು ಮಾಡಿ. ಸಮಗ್ರ ಅಧ್ಯಯನ ಮಾಡಿ, ಕರ್ಮಜ್ಞಾನಿಗಳಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿ ಎಂದು ವೈದಿಕರಿಗೆ ಕರೆ ನೀಡಿದರು. ವೈದಿಕರು ಇದಕ್ಕೆ ಬೇಕಾದ ಜ್ಞಾನ ಹಾಗೂ ನಿಷ್ಠೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಗುರುಪೀಠಕ್ಕೂ- ವೈದಿಕರ ನಡುವೆ ದೃಢಬಾಂಧವ್ಯ ಅನಾದಿ ಕಾಲದಿಂದಲೂ ಇದೆ. ವೈದಿಕರು ಗುರುಪೀಠದ ಮೇಲೆ ಅಪಾರ ಶ್ರದ್ಧೆ, ಭಕ್ತಿ ಇರಿಸಿಕೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸಮಾಜದಲ್ಲಿ ವೇದಗಳ ಬೆಳಕು ಜನರ ಬದುಕನ್ನು ಬೆಳಗಿಸಬೇಕು ಎಂದು ಆಶಿಸಿದರು.
ಧರ್ಮ, ವೇದ, ಗುರುಪೀಠದ ಜತೆಗಿರಿ. ಮಠಕ್ಕೂ ಶಿಷ್ಯರಿಗೂ, ಶಿಷ್ಯರಿಗೂ ದೇವರಿಗೂ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ವೇದಗಳನ್ನು ಕಲಿಸುವ ಗುರುಕುಲಗಳನ್ನು ಮುನ್ನಡೆಸುವುದು ವೈದಿಕರ ಜವಾಬ್ದಾರಿಯಾಗಬೇಕು. ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ವೇದ ಕಲಿಕೆಗೆ ಉತ್ತೇಜಿಸಬೇಕಾದ ಅಗತ್ಯವಿದೆ ಎಂದು ಬಣ್ಣಿಸಿದರು.

ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ಅಮಾವಾಸ್ಯೆ ಆಧ್ಯಾತ್ಮಕ್ಕೆ ಅತ್ಯಂತ ಪ್ರಶಸ್ತ ಕಾಲ. ಅಂದು ಸೂರ್ಯಚಂದ್ರರ ಸಮಾಗಮವಾಗುತ್ತದೆ. ಅಮಾವಾಸ್ಯೆ ಎಂದ ಮಾತ್ರಕ್ಕೆ ಕೆಟ್ಟದು ಎಂಬ ಭಾವನೆ ಬೇಡ. ಪ್ರಕೃತಿ ಮತ್ತು ಪುರುಷನ ಸಮಾಗಮದ ಸಂಕೇತ ಅದು ಎಂದು ವಿವರಿಸಿದರು.

ಕೋಪ, ಗಾಬರಿ, ಶೋಕದಿಂದ ಮನೋರೋಗಗಳು ಬರಬಹುದು. ಆದಿಯಿಂದ ವ್ಯಾಧಿ. ಆದಿ ಎಂದರೆ ಮನಸ್ಸು. ಮನಸ್ಸಿನ ತುಮುಲ ಹಲವು ರೋಗಗಳಿಗೆ ಕಾರಣವಾಗುತ್ತದೆ. ರಾಜಸಭಾವಗಳು ತೀವ್ರವಾದಾಗ ರೋಗವಾಗಿ ಮುಕ್ತಾಯವಾಗುತ್ತದೆ. ಪ್ರೀತಿ, ದಯೆ, ಶಾಂತಿ, ತ್ಯಾಗಗಳು ಸಾತ್ವಿಕ ಭಾವಗಳಾಗಿದ್ದು, ಇವು ನಮಗೆ ಶಕ್ತಿ ತುಂಬುತ್ತವೆ ಎಂದು ವಿಶ್ಲೇಷಿಸಿದರು.

ಆಗಂತುಕ ರೋಗಗಳು ಶಾಪ, ಅಭಿಚಾರ, ಘಾತಾದಿಗಳಿಂದ ಬರಬಹುದು. ಷಷ್ಠಗ್ರಹದಿಂದ ಇದನ್ನು ಚಿಂತನೆ ಮಾಡಬಹುದು. ಒಬ್ಬರ ತೀವ್ರವಾದ ನೋವು ಕೂಡಾ ಶಾಪವಾಗುತ್ತದೆ. ಮುನಿಗಳೇ ಶಾಪ ಕೊಡಬೇಕೆಂದೇನಿಲ್ಲ. ಒಂದು ಪ್ರಾಣಿಗೆ ನಾವು ನೋವು ನೀಡಿದರೆ, ಅದು ಶಾಪವಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದರು. ಅಭಿಚಾರ ಅಥವಾ ಮಾಟ ಕೂಡಾ ಕೆಲವೊಮ್ಮೆ ರೋಗಕ್ಕೆ ಕಾರಣವಾಗಬಹುದು. ಆತ್ಮಹಿತಕ್ಕಾಗಿ, ಪರಹಿತಕ್ಕಾಗಿ ಮತ್ತು ಪರಪೀಡೆಗಾಗಿಯೂ ಉಪಾಸನೆಗಳನ್ನು ಮಾಡಬಹುದು. ಪರಪೀಡನೆಗೆ ಮಾಡುವ ಉಪಾಸನೆ ಒಳ್ಳೆಯದಲ್ಲ. ಇದರಲ್ಲೂ ಮಹಾಭಿಚಾರ ಮತ್ತು ಕ್ಷುದ್ರಾಭಿಚಾರ ಎಂಬ ಎರಡು ವರ್ಗಗಳಿವೆ. ದೇವತೆಗಳನ್ನು ಕೆಟ್ಟ ವಿಚಾರಕ್ಕಾಗಿ ಉಪಾಸನೆ ಮಾಡುವುದು ಮಹಾಭಿಚಾರ ಎನಿಸುತ್ತದೆ. ಕೆಡುಕು ಉಂಟುಮಾಡುವ ಕ್ಷುದ್ರದೇವತೆಯ ಉಪಾಸನೆ ಕ್ಷುದ್ರಾಭಿಚಾರ ಎನಿಸಿಕೊಳ್ಳುತ್ತದೆ ಎಂದರು.

http://kalpa.news/wp-content/uploads/2024/04/VID-20240426-WA0008.mp4

ಕರ್ನಾಟಕ ರಾಜ್ಯ ಸಂಸ್ಕøತ ವಿವಿಯಿಂದ ಗೌರವ ಡಾಕ್ಟರೇಟ್‍ಗೆ ಭಾಜನರಾದ ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳನ್ನು ಹವ್ಯಕ ಮಹಾಮಂಡಲ ವತಿಯಿಂದ ಸನ್ಮಾನಿಸಲಾಯಿತು. ಅವರನ್ನು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣೀಯಮ್ ಸಹಿತ ವಿವಿಧ ಸ್ತೋತ್ರಗಳನ್ನು ಆನ್‍ಲೈನ್ ಮೂಲಕ ನಿರಂತರವಾಗಿ ಕಲಿಸುತ್ತಾ ಬಂದಿರುವ ಬೆಳ್ಳಾರೆಯ ಮಹಾಲಿಂಗ ಭಟ್ ಕುರುಂಬುಡೇಲು ಅವರ ವ್ಯಕ್ತಿತ್ವವನ್ನು ಮೊಡಪ್ಪಾಡಿ ರಾಮಚಂದ್ರ ಭಟ್ ಅನಾವರಣಗೊಳಿಸಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ 400ಕ್ಕೂ ಹೆಚ್ಚು ವೈದಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವೈದಿಕ ಪ್ರಧಾನ ಮಹೇಶ್ ಭಟ್ ಚೂಂತಾರು, ಧರ್ಮಕರ್ಮ ವಿಭಾಗದ ರಾಮಕೃಷ್ಣ ಭಟ್ ಕೂಟೇಲು, ಕೇಶವ ಭಟ್ ಕೂಟೇಲು, ಅಮೈ ಶಿವಪ್ರಸಾದ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaveshwara shriUttara Kannadaಗೋಕರ್ಣಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯತೆ

Next Post

ದರ್ಶನ್ ಅಂಡ್ ಗ್ಯಾಂಗ್ ಕುಣಿಕೆ ಮತ್ತಷ್ಟು ಬಿಗಿ? ಕಮಿಷನರ್ ದಯಾನಂದ್ ಕೊಟ್ಟ ಸುಳಿವೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ದರ್ಶನ್ ಅಂಡ್ ಗ್ಯಾಂಗ್ ಕುಣಿಕೆ ಮತ್ತಷ್ಟು ಬಿಗಿ? ಕಮಿಷನರ್ ದಯಾನಂದ್ ಕೊಟ್ಟ ಸುಳಿವೇನು?

ದರ್ಶನ್ ಅಂಡ್ ಗ್ಯಾಂಗ್ ಕುಣಿಕೆ ಮತ್ತಷ್ಟು ಬಿಗಿ? ಕಮಿಷನರ್ ದಯಾನಂದ್ ಕೊಟ್ಟ ಸುಳಿವೇನು?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಐಎಲ್‍ಐಎಫ್ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಆಯ್ಕೆ

ಐಎಲ್‍ಐಎಫ್ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಆಯ್ಕೆ

June 16, 2026
ವಿಐಎಸ್‍ಎಲ್, ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಒತ್ತಾಯಿಸಿ ಜೂ.20ರಂದು ಪ್ರತಿಭಟನೆ

ವಿಐಎಸ್‍ಎಲ್, ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಒತ್ತಾಯಿಸಿ ಜೂ.20ರಂದು ಪ್ರತಿಭಟನೆ

June 16, 2026
Shivamogga Mahanagara Palike

ಮಹಾನಗರ ಪಾಲಿಕೆ ಆಯುಕ್ತರ ಜೊತೆ ನಾಳೆ ಮುಖಾಮುಖಿ

June 16, 2026
Blood Donation Camp Successfully Organised at Mysuru Division

ಸಮಾಜದ ಒಳಿತಿಗಾಗಿ ರಕ್ತದಾನ ಅತ್ಯವಶ್ಯ: ಮುದಿತ್ ಮಿತ್ತಲ್ 

June 16, 2026
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL