ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿ ವಿಜೇತರಾದ ನಿವೃತ್ತ ಐಎಫ್’ಎಸ್ ಅಧಿಕಾರಿ ಎಸ್‌ಜಿ ನೆಗಿನ್ಹಾಲ್(92) ವಿಧಿವಶರಾಗಿದ್ದಾರೆ.
ಖ್ಯಾತ ನಿವೃತ್ತ ಐಎಫ್‌ಎಸ್ ಅಧಿಕಾರಿ, ಬೆಂಗಳೂರು ನಗರದ ಹಸಿರೀಕರಣದಲ್ಲಿ, ಉದ್ಯಾನನಗರಿ ಎಂಬ ಬಿರುದಿಗೆ ಪ್ರಮುಖ ಕಾರಣೀಭೂತರಾದ ಎಸ್‌ಜಿ ನೆಗಿನ್ಹಾಲ್ ಭಾನುವಾರ ನಸುಕಿನ ಜಾವ ನಿಧನರಾಗಿದ್ದಾರೆ.
ಬೆಂಗಳೂರನ್ನು ಗಾರ್ಡನ್ ಸಿಟಿಯಾಗಿ ಬದಲಾಯಿಸುವಲ್ಲಿ ನೆಗಿನ್ಹಾಲ್ ಪ್ರಮುಖ ಪಾತ್ರ ವಹಿಸಿದ್ದರು. 1980ರ ದಶಕದಲ್ಲಿ ಬೆಂಗಳೂರು ನಗರ ತನ್ನ ಹಸಿರು ನೋಟವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿತ್ತು. ನಗರೀಕರಣ, ಆಧುನೀಕರಣ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಹೊಸ ಲೇ ಔಟ್’ಗಳು ತಲೆಯೆತ್ತುತ್ತಿದ್ದವು.
ಇವರ ನಿಧನಕ್ಕೆ ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸದಸ್ಯರು ಸಂತಾಪ ಸೂಚಿಸಿದ್ದಾರೆ.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post