ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಂ ಲ್ಯಾಂಡರ್’ನಿಂದ VikramLander ರೋವರ್ ಹೊರಕ್ಕೆ ಬಂದು ಚಂದ್ರನ Moon ಮೇಲೆ ಪದಾರ್ಪಣೆ ಮಾಡಿದ್ದು, ಈ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
ಈ ಕುರಿತಂತೆ ಚಿತ್ರಗಳನ್ನು ಬಿಡುಗಡೆ ಮಾಡಿರುವ ಇಸ್ರೋ, ISRO ರೋವರ್ ಲ್ಯಾಂಡರ್’ನಿಂದ RoverLander ಕೆಳಕ್ಕೆ ಇಳಿದಿದ್ದು, ಭಾರತವು ಚಂದ್ರನ ಮೇಲೆ ನಡೆದಾಡಿತು. ಶೀಘ್ರದಲ್ಲೇ ಹೆಚ್ಚಿನ ವಿವರ ಹಂಚಿಕೊಳ್ಳುವುದಾಗಿ ಹೇಳಿದೆ.
ಇದಕ್ಕೂ ಮುನ್ನಾಚಂದ್ರಯಾನ-3 ಮಿಷನ್ ನ Chandrayaana-3 ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲ್ಮೈ ನಲ್ಲಿ ಇಳಿಯುವಾಗ ಸೆರೆ ಹಿಡಿಯಲಾದ ನಾಲ್ಕು ಫೋಟೋಗಳನ್ನು ಇಸ್ರೋ ಹಂಚಿಕೊಂಡಿತ್ತು.
ಚಂದ್ರನ ಮೇಲೆ ಭಾರತದ ಶಾಶ್ವತ ಹೆಜ್ಜೆ ಗುರುತು
ಇನ್ನು, ವಿಕ್ರಂ ಲ್ಯಾಂಡರ್’ನಿಂದ ಹೊರ ಬಂದಿರುವ ಪ್ರಜ್ಞಾನ್ ರೋವರ್ PragnanRover ಚಂದ್ರನ ಮೇಲೆ ಹೆಜ್ಜೆಯಿಟ್ಟಿದ್ದು, ಇದು ಹೋದೆಡೆಯೆಲ್ಲಾ ಭಾರತದ INDIA ಶಾಶ್ವತ ಗುರುತನ್ನು ಮೂಡಿಸಲಿದೆ.
ರೋವರ್ ವೆಹಿಕಲ್’ಗಳು ಬೇರೆ ಗ್ರಹಗಳಿಗೆ ಹೋದಾಗ ಓಡಾಡಿಕೊಂಡು ಬರುತ್ತವೆ. ಆದರೆ ನಮ್ಮ ಪ್ರಜ್ಞಾನ್ ಕೇವಲ ಓಡಾಡುವುದಿಲ್ಲ. ತಾನು ಓಡಾಡಿದ ಅಷ್ಟೂ ಜಾಗಕ್ಕೂ ಭಾರತದ ರಾಷ್ಟ್ರ ಧ್ವಜ IdianNationalFlag ಹಾಗೂ ಭಾರತ ಸರ್ಕಾರ ಅಧಿಕೃತ ಲಾಂಛನವನ್ನು ಮೂಡಿಸಲಿದೆ.
ಪ್ರಜ್ಞಾನ್ ರೋವರ್’ನ ಎಲ್ಲ ಚಕ್ರಗಳಲ್ಲಿ ಭಾರತದ ರಾಷ್ಟ್ರ ಧ್ವಜ ಹಾಗೂ ಭಾರತದ ಸರ್ಕಾರದ ಅಧಿಕೃತ ಲಾಂಛನ IndianNationalEmblem (ನಾಲ್ಕು ಮುಖದ ಸಿಂಹ)ವನ್ನು ರೂಪಿಸಲಾಗಿದೆ. ರೋವರ್ ಸಾಗಿದ ಜಾಗದಲ್ಲೆಲ್ಲಾ ಇದು ಆಳವಾದ ರೀತಿಯಲ್ಲಿ ಇದರ ಗುರುತನ್ನು ಮೂಡಿಸುತ್ತದೆ.
ಚಂದ್ರನ ಮೇಲೆ ಯಾವುದೇ ರೀತಿಯ ಗುರುತು ಮೂಡಿದರೂ ಅದು ಎಂದಿಗೂ ಅಳಿಸದ ರೀತಿಯಲ್ಲಿ ಅಲ್ಲಿನ ವಾತಾವರಣ ಇದೆ. ಹೀಗಾಗಿ, ರೋವರ್ ಮೂಡಿಸುವ ದೇಶದ ಗುರುತನ್ನು ಶಾಶ್ವತವಾಗಿ ಮೂಡಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post