ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜನತಾ ಜಲಧಾರೆ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡ ನಂತರ ಜೆಡಿಎಸ್, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ‘ಜನತಾ ಸೇವಕ’ ಎಂಬ ವಿನೂತನ ಕಾರ್ಯಕ್ರಮ ಮಾಡಲು ನಿರ್ಧರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ Former CM H D Kumaraswamy ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, “ಜನತಾ ಸೇವಕ ವಾಹನ” ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ 15 ವಾಹನಗಳು ಸಂಚಾರ ಮಾಡುತ್ತವೆ. ಒಂದು ತಿಂಗಳು ವಾಹನ ಸಂಚಾರ ಮಾಡಿ ಜನರ ಸಮಸ್ಯೆ ಬಗ್ಗೆ ಜನಾಭಿಪ್ರಾಯ ಮೂಡಿಸುತ್ತೇವೆ ಎಂದು ತಿಳಿಸಿದರು.
ಜೂ.22ರಂದು ಜನತಾ ಸೇವಕ ಕಾರ್ಯಕ್ರಮಕ್ಕೆ ಚಾಲನೆ:
ಬೆಂಗಳೂರು ನಗದಲ್ಲಿರುವ ಸಮಸ್ಯೆಗಳ ಬಗ್ಗೆ ಅರಿಯಲು ಹಾಗೂ ಜನಾಭಿಪ್ರಾಯ ಮೂಡಿಸಲು ಜನತಾ ಸೇವಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜೂನ್ 22ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೆಚ್ ಡಿಕೆ ಮಾಹಿತಿ ನೀಡಿದರು.
Also read: ಜೂ. 20, 21ರಂದು ಪ್ರಧಾನ ಮಂತ್ರಿಯವರ ರಾಜ್ಯ ಪ್ರವಾಸ: ಸಮರ್ಪಕ ಸಿದ್ಧತೆಗೆ ಸಿಎಂ ಸೂಚನೆ
ಜನತಾ ಸೇವಕ ಎಂಬ ವಾಹನದ ಮೂಲಕ ಬೆಂಗಳೂರು ಪ್ರವಾಸ ಮಾಡಲಾಗುತ್ತದೆ. 15 ವಾಹನಗಳು ನಗರದ ಗಲ್ಲಿ, ಗಲ್ಲಿಗೂ ಹೋಗುತ್ತವೆ. ಜನರಿಗೆ ನಾವೇನು ಕೊಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡುತ್ತಿರುವ ಬಗ್ಗೆ ತಿಳಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಮುಂದಿನ ಚುನಾವಣೆಯಲ್ಲಿ 12-13 ಸ್ಥಾನ ಗೆಲ್ಲಲು ಚಾಲೆಂಜ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ 123 ಗುರಿ ಹೇಗೆ ಮುಟ್ಟುತ್ತೇನೆಂಬುದು ನಿಮಗೆ ಗೊತ್ತಾಗುತ್ತದೆ ಎಂದು ಮಾಧ್ಯಮದವರಿಗೆ ಹೇಳಿದರು.
ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ:
ಯಾರ ಕೈಯಲ್ಲೂ ಜೆಡಿಎಸ್ ಅನ್ನು ಮುಗಿಸಲು ಸಾಧ್ಯವಿಲ್ಲ. ಲಕ್ಷಾಂತರ ಕಾರ್ಯಕರ್ತರು ಇದ್ದಾರೆ ಎಂದರು.
ವಿಧಾನ ಪರಿಷತ್ ನದು ಏನಾಯಿತು. ಎಲ್ಲಿ ಸಿದ್ದರಾಮಯ್ಯ ನವರದ್ದು ವರ್ಕ್ ಆಯ್ತು?. 2023 ಕ್ಕೆ ಕಾಂಗ್ರೆಸ್ ನ ಕೊನೆ ದಿನಗಳು ಬರುತ್ತವೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕೊನೆಯ ದಿನಗಳು ಪ್ರಾರಂಭವಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ವಾಗ್ದಾಳಿ ನಡೆಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post