ಕಲ್ಪ ಮೀಡಿಯಾ ಹೌಸ್ | ಬೆಂಗಳೂರು ಗ್ರಾಮಾಂತರ |
ಮುಂಬರುವ 2023 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ವಿವಿಧ ಚುನಾವಣಾ ಪ್ರಕ್ರಿಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಸುಸೂತ್ರವಾಗಿ ನಿರ್ವಹಿಸಲು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್. ಲತಾ ಆದೇಶ ಹೊರಡಿಸಿದ್ದಾರೆ.
ಮಾನವ ಸಂಪನ್ಮೂಲ ನಿರ್ವಹಣೆ:
ಮತಗಟ್ಟೆ ಸಿಬ್ಬಂದಿಗಳ ಅಗತ್ಯತೆತೆಗೆ ಅನುಗುಣವಾಗಿ ತಹಸೀಲ್ದಾರರಿಂದ ವಿವರಗಳನ್ನು ಪಡೆದು, ಎನ್ಐಸಿ ಮೂಲಕ ದತ್ತಾಂಶ ದಾಖಲಿಸುವುದು. ರ್ಯಾಂಡಮೈಸೇಷನ್ ಕಾರ್ಯದ ಮೇಲ್ವಿಚಾರಣೆ ನಡೆಸುವುದು. ನೋಡಲ್ ಅಧಿಕಾರಿ: ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಗಂಗಾಧರ (ಮೊ.-9844251553)
ತರಬೇತಿ ನಿರ್ವಹಣೆ:
ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಸಿಬ್ಬಂದಿಗೆ ತರಬೇತಿ. ಮಾಸ್ಟರ್ ಟ್ರೇನರ್ ಹಾಗೂ ಮೈಕ್ರೋ ಆಬ್ಸರ್ವರುಗಳ ತರಬೇತಿ, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳಿಗೆ ತಿಳುವಳಿಕೆ. ಪೊಲೀಸ್ ಸಿಬ್ಬಂದಿ ತರಬೇತಿಯೊಂದಿಗೆ ಹೊಂದಾಣಿಕೆ. ತರಬೇತಿ ಸಾಮಗ್ರಿಗಳ ಸಿದ್ದತೆ ಹಾಗೂ ಪೂರೈಕೆ. ನೋಡಲ್ ಅಧಿಕಾರಿ; ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹನುಮಂತಪ್ಪ (ಮೊ.9448350266)
ಚುನಾವಣಾ ಸಾಮಗ್ರಿಗಳ ನಿರ್ವಹಣೆ:
ಚುನಾವಣಾ ನಮೂನೆಗಳು, ಸೂಚನಾ ಪುಸ್ತಕಗಳು ಮುದ್ರಣ ಸಾಮಗ್ರಿಗಳ ವ್ಯವಸ್ಥೆ ಹಾಗೂ ವಿತರಣೆ. ನೋಡಲ್ ಅಧಿಕಾರಿ; ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ್ (ಮೊ.9448211736)
ಸಾರಿಗೆ ನಿರ್ವಹಣೆ:
ಚುನಾವಣೆಗೆ ಅಗತ್ಯವಿರುವ ವಾಹನಗಳ ಮಾಹಿತಿ ಕ್ರೋಢೀಕರಣ ಹಾಗೂ ಏರ್ಪಾಡು. ನೋಡಲ್ ಅಧಿಕಾರಿಗಳು; ನೆಲಮಂಗಲ ಆರ್.ಟಿ.ಓ. ಗುರುಮೂರ್ತಿ (ಮೊ.9449864052), ದೇವನಹಳ್ಳಿಯ ಸಹಾಯಕ ಆರ್.ಟಿ.ಓ.ರಮೇಶ್ ವಿ.ಪಿ. (ಮೊ.9449864043).
ಗಣಕೀಕರಣ, ಸೈಬರ್ ಭದ್ರತೆ ಹಾಗೂ ಐಟಿ ನಿರ್ವಹಣೆ: ಚುನಾವಣಾ ಕಾರ್ಯಕ್ಕೆ ತಂತ್ರಜ್ಞಾನ ಹಾಗೂ ಅಂತರ್ಜಾಲ ನೆರವು. ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್ ನಿರ್ವಹಣೆ. ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟಿಗೆ ಜಿಲ್ಲೆಯ ಮಾಹಿತಿ ಅಪ್ಡೇಟ್ ಮಾಡುವುದು. ವಿವಿಧ ಮೊಬೈಲ್ ಆ್ಯಪ್ ಹಾಗೂ ಸಾಫ್ಟವೇರ್ ಮತ್ತು ಹಾರ್ಡವೇರ್ ನಿರ್ವಹಣೆ. ನೋಡಲ್ ಅಧಿಕಾರಿ; ಜಿಲ್ಲಾ ಎನ್ಐಸಿಯ ಮಾಹಿತಿ ಅಧಿಕಾರಿ ಕಾರ್ತಿಕೇಯನ್ (ಮೊ.9980493855).
ಸ್ವೀಪ್ ಚಟುವಟಿಕೆಗಳು:
ಜಿಲ್ಲೆಯಾದ್ಯಂತ ಮತದಾರರ ಜಾಗೃತಿಗಾಗಿ ವ್ಯವಸ್ಥಿತ ಮತದಾರರ ನೋಂದಣಿ ಮತ್ತು ಮತದಾನದ ಕಾರ್ಯಗಳ ಯೋಜನೆ ಮತ್ತು ಅನುಷ್ಠಾನ. ನೋಡಲ್ ಅಧಿಕಾರಿ; ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ರೇವಣಪ್ಪ (ಮೊ.9480853000)
ಕಾನೂನು ಮತ್ತು ಸುವ್ಯವಸ್ಥೆ: ದೈನಂದಿನ ಕಾನೂನು ಮತ್ತು ಸುವ್ಯವಸ್ಥೆ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸುವುದು ಹಾಗೂ ರದ್ದುಪಡಿಸಿವುದು. ಸೈಬರ್ ಭದ್ರತೆ ಒದಗಿಸುವುದು. ನೋಡಲ್ ಅಧಿಕಾರಿ; ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಂ.ಎಲ್. ಪುರುಷೋತ್ತಮ್ (ಮೊ.9480802402)
Also read: ನ.20ರಂದು ಪತ್ರಕರ್ತ, ಲೇಖಕ, ಹನುಮಂತ. ಮ. ದೇಶಕುಲಕರ್ಣಿ ಅವರ ಶ್ರೀಕಾರ ಕೃತಿ ಬಿಡುಗಡೆ
ಇವಿಎಂ ಹಾಗೂ ವಿವಿಪ್ಯಾಟ್‌ಗಳ ನಿರ್ವಹಣೆ:
ಇಲೆಕ್ಟ್ರಾನಿಕ್ ಮತಯಂತ್ರಗಳು ಹಾಗೂ ವಿವಿಪ್ಯಾಟ್‌ಗಳ ಸಂಗ್ರಹಣೆ, ಲಭ್ಯತೆ, ತಪಾಸಣೆ. ಯಾದೃಚ್ಛಿಕಗೊಳಿಸುವಿಕೆ. ಸಾಗಣೆ, ಮೇಲ್ವಿಚಾರಣೆ ಸಂಬಂಧಿತ ಕಾರ್ಯಗಳು . ನೋಡಲ್ ಅಧಿಕಾರಿ; ಭೂ ದಾಖಲೆಗಳ ಉಪನಿರ್ದೇಶಕ ಹನುಮೇಗೌಡ (ಮೊ.9844346505)
ಮಾದರಿ ನೀತಿ ಸಂಹಿತೆ:
ಜಿಲ್ಲೆಯ ಅಧಿಕಾರಿ, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು, ಮಾಧ್ಯಮ ಮುಂತಾದ ಕಡೆಗಳಿಂದ ಮಾದರಿ ನೀತಿ ಸಂಹಿತೆಗಳ ಅನುಸರಣೆ. ವಿವಿಧ ವರದಿಗಳ ಕ್ರೋಢೀಕರಣ ಹಾಗೂ ರವಾನೆ. ಸಿ-ವಿಜಿಲ್ ದೂರುಗಳ ವಿಲೇವಾರಿ. ಶಿಷ್ಠಾಚಾರ ಪಾಲನೆ. ಕಾನೂನು, ಸುವ್ಯವಸ್ಥೆ ಕುರಿತು ನಿಗದಿತ ನಮೂನೆಯಲ್ಲಿ ದೈನಂದಿನ ವರದಿಗಳನ್ನು ಕಳಿಸುವುದು. ನೋಡಲ್ ಅಧಿಕಾರಿ; ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿನಿರ್ದೇಶಕ ನರೇಂದ್ರಬಾಬು ಎನ್. (ಮೊ.9845248733)
ಚುನಾವಣಾ ವೆಚ್ಚ ಮೇಲ್ವಿಚಾರಣೆ:
ಚುನಾವಣೆ ಘೋಷಣೆ ಮತ್ತು ಅಧಿಸೂಚನೆ ನಡುವಿನ ಅವಧಿಯ ಎಲ್ಲ ಸಾರ್ವಜನಿಕ ಸಭೆ,ಸಮಾವೇಶ, ಸಂಭಾವ್ಯ ಅಭ್ಯರ್ಥಿಗಳ ವಿಡಿಯೋಗ್ರಾಫಿಂಗ್ ಮಾಡಿಸುವುದು. ವಿವಿಧ ಪ್ರಚಾರ ವಸ್ತು ಹಾಗೂ ಚಟುವಟಿಕೆಗಳ ದರ ನಿಗದಿಪಡಿಸುವುದು. ರಾಜಕೀಯ ಪಕ್ಷಗಳ ಎಲ್ಲಾ ವೆಚ್ಚಗಳ ಅಂದಾಜು ವರದಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು. ನೋಡಲ್ ಅಧಿಕಾರಿ; ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸಿ. ಗಂಗಾಧರ (ಮೊ.9480853003)
ಮತಪತ್ರ, ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್:
ಮತ ಪತ್ರಗಳ ಸಕಾಲಿಕ ಸಾಗಣೆ, ಸರಿಯಾದ ಸಂಗ್ರಹಣೆ, ಎಣಿಕೆಗಾಗಿ ಭದ್ರತಾ ಕೊಠಡಿಗಳಿಗೆ ಹಿಂದಿರುಗಿದ ಮತ ಪತ್ರಗಳ ವ್ಯವಸ್ಥೆ. ಇಟಿಪಿಬಿಎಸ್ ಸಂಬಂಧಿತ ವಿಷಯಗಳ ನಿರ್ವಹಣೆ. ನೋಡಲ್ ಅಧಿಕಾರಿ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶ್ರೀಕಂಠ ಎನ್ (ಮೊ.9448999325)
ಮಾಧ್ಯಮ ಹಾಗೂ ಎಂಸಿಎಂಸಿ:
ಚುನಾವಣಾ ಸಂಬಂಧಿತ ಮಾಹಿತಿ, ಸೂಚನೆಗಳು, ಪತ್ರಿಕಾ ಪ್ರಕಟಣೆಗಳು, ಮಾಧ್ಯಮಗಳಿಗೆ ಮಾಹಿತಿ ವಿನಿಮಯ ಪೇಡ್ ನ್ಯೂಸ್‌ಗಳ ಮೇಲೆ ನಿಗಾ. ದೈನಂದಿನ ನಿಗದಿತ ನಮೂನೆಗಳ ವರದಿ ನೀಡುವುದು. ನೋಡಲ್ ಅಧಿಕಾರಿ; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಮಂಜುನಾಥ ಡೊಳ್ಳಿನ (ಮೊ.9480654365)
ಸಂವಹನ ಯೋಜನೆ
ಜಿಲ್ಲಾ ಸಂವಹನ ಯೋಜನೆ, ಅಂಕಿ-ಅಂಶಗಳ ಕ್ರೋಢೀಕರಣ, ಮತದಾನ ಕೇಂದ್ರಗಳ ಪಟ್ಟಿಗೆ ಅನುಮೋದನೆ ಪಡೆಯುವುದು. ನೋಡಲ್ ಅಧಿಕಾರಿ; ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಆರ್. ನಾಗರಾಜು (ಮೊ.9341347440)
ಮತದಾರರ ಪಟ್ಟಿ ಪರಿಷ್ಕರಣೆ: ಮತದಾರರ ದಾಖಲಾತಿಗಳಾಗಿ ನಿರಂತರ ಸಮನ್ವಯ. ಮತದಾರರ ಗುರುತಿನ ಚೀಟಿ ವಿತರಣೆ, ಮತಗಟ್ಟೆಗಳಲ್ಲಿ ವರ್ಣಮಾಲೆಗಳ ಲಭ್ಯತೆ ಮತ್ತಿತರ ಕಾರ್ಯಗಳು. ನೋಡಲ್ ಅಧಿಕಾರಿ; ಎತ್ತಿನಹೊಳೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಎಂ.ಗಂಗಪ್ಪ (ಮೊ.9845457614)
ದೂರು ನಿರ್ವಹಣೆ-ಸಹಯವಾಣಿ:
ದೂರುನಿರ್ವಹಣಾ ಕೇಂದ್ರ, ಕಂಟ್ರೋಲ್ ರೂಮ್ ಮೇಲ್ವಿಚಾರಣೆ, ದೂರುಗಳ ಸಕಾಲಿಕ ವಿಲೇವಾರಿ ಮತ್ತು ಪರಿಹಾರ ಖಚಿತಪಡಿಸಿಕೊಳ್ಳುವುದು. 1950 ಸಹಾಯವಾಣಿ ನಿರ್ವಹಣೆ. ನೋಡಲ್ ಅಧಿಕಾರಿ; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಮೋದ್ (ಮೊ.7259705464)
ವೀಕ್ಷಕರ ಲೈಸನಿಂಗ್:
ಎಲ್ಲಾ ಚುನಾವಣಾ ವೀಕ್ಷಕರ ಆಗಮನ, ನಿರ್ಗಮನ, ವಸತಿ, ಸಾರಿಗೆ, ಸಂಪರ್ಕ, ಮುದ್ರಣ, ಲೇಖನ ಸಾಮಗ್ರಿಗಳು ಮತ್ತಿತರ ಏರ್ಪಾಡು ಮಾಡುವುದು. ನೋಡಲ್ ಅಧಿಕಾರಿ; ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ನಾಗರಾಜ್ (ಮೊ.8884385699)
2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅಧಿಕಾರಿಗಳು, ಚುನಾವಣೆಯ ಕೆಲಸ, ಕಾರ್ಯಗಳಿಗೆ ಆದ್ಯತೆ ನೀಡಬೇಕು. ಭಾರತ ಚುನಾವಣಾ ಆಯೋಗವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post