ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನಗರದ ಜಯನಗರದ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅಕ್ಷಯ ತೃತೀಯಾ ದಿನದಂದು ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ವಿಶೇಷವಾಗಿ ಶ್ರೀಗಂಧ ಲೇಪನ ಅಲಂಕಾರ ಮಾಡಲಾಗಿತ್ತು.
ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ:
ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ, ನೆರವೇರಿಸಿ, ಭಕ್ತರ ಕಷ್ಟಕಾರ್ಪಣ್ಯಗಳು ಶೀಘ್ರ ನಿವಾರಣೆಗಾಗಿ ಹಾಗೂ ಲೋಕ-ಕಲ್ಯಾಣಕ್ಕಾಗಿ ಶ್ರೀ ಮಠದಲ್ಲಿ ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ ಹಮ್ಮಿಕೊಳ್ಳಲಾಗಿತ್ತು .
ಸುಬುಧೇಂದ್ರ- ತೀರ್ಥ ಶ್ರೀಪಾದರ ಆದೇಶದಂತೆ ಕೋವಿಡ್ -19 ನಿಯಮ ಪಾಲಿಸಿ ಶ್ರೀಮಠದ ವ್ಯವಸ್ಥಾಪಕ ಆರ್.ಕೆ. ವಾದೀಂದ್ರಾಚಾರ್ಯರು ಹಾಗೂ ಪ್ರಧಾನ ಪೊರೋಹಿತರಾದ ನಂದ ಕಿಶೋರ್ ಆಚಾರ್ಯ ಹಾಗೂ 4 ಅರ್ಚಕರು ಮಾತ್ರ ಈ ವಿಶೇಷ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .
ಈ ಸಂದರ್ಭದಲ್ಲಿ ಅರ್ಚಕರಿಂದ ವಿಶೇಷ ಶ್ರೀ ರಾಘವೇಂದ್ರ- ಅಷ್ಟಾಕ್ಷರ ಜಪ ಪಾರಾಯಣವು ಜರುಗಿತು .
ಅಕ್ಷಯ ತೃತೀಯ ದಿನದಂದು ಗಂಧಲೇಪನ ವೈಶಿಷ್ಟ್ಯ :
ಭಗವಂತನು ತನ್ನ ದೇಹದ ಸುಗಂಧದಿಂದ ಅಕ್ಷಯ ತೃತೀಯ ದಿನದಂದು ಮಂಡೋದರಿಯ ಸೃಷ್ಟಿ ಮಾಡಿದ್ದರಿಂದ ದೇವರಿಗೆ ಗಂಧ ಸಮರ್ಪಣೆ ಮಾಡುವ ಸಂಪ್ರದಾಯ ಇದೆ. ಅಕ್ಷಯ ತೃತೀಯ ಬಗ್ಗೆ ನಮ್ಮ ಪುರಾಣಗಳಲ್ಲಿ ಒಂದಾದ ನಾರದ ಪುರಾಣದಲ್ಲಿ ಉಲ್ಲೇಖವಿದೆ . “ಅಕ್ಷಯ” ಎನ್ನುವುದು ಕ್ಷಯವಾಗದೆ ಇರುವುದು ಎಂದರ್ಥ. ಅಕ್ಷಯ ಅಂದರೆ ಕ್ಷಯರಹಿತ. ವೈಶಾಖ ಶುದ್ಧ ತೃತೀಯ ದಿನದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ.
ಅಕ್ಷಯ ತೃತಿಯದ ಮುಹೂರ್ತದ ಮಹತ್ವ :
ಗೃಹ ಪ್ರವೇಶ , ಮದುವೆ, ಹೊಸ ವ್ಯವಹಾರ, ದಾನ ಧರ್ಮಗಳನ್ನು ಮಾಡಲು ಅಕ್ಷಯ ತೃತೀಯ ಅತ್ಯುತ್ತಮ ದಿನ. ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ. ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು. “ಅಕ್ಷಯ” ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ.
ಇದೊಂದು ಸ್ವಯಂಸಿದ್ಧ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು. ಈ ದಿನ ಮುಹೂರ್ತ ಇಡುವಾಗ ನಕ್ಷತ್ರ, ವಾರ, ತಿಥಿ, ಮುಂತಾದವನ್ನು ನೋಡುವ ಅವಶ್ಯಕತೆ ಇಲ್ಲ.
(ಲೇಖನಕ್ಕೆ ಬೇಕಾದ ಮಾಹಿತಿ ಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಬರೆಯಲಾಗಿದೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post