ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಐಎಸ್’ಎಲ್ ಒಂದು ಪ್ರತಿಷ್ಠಿತ ಕಾರ್ಖಾನೆಯಾಗಿದ್ದು, ಎಲ್ಲ ಪ್ರಯತ್ನ ಮಾಡಿ ಇದನ್ನು ಉಳಿಸಿಕೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ವಿಐಎಸ್’ಎಲ್ ಉಳಿಸಲು ನಿರ್ಣಯ ಕೈಗೊಳ್ಳುವಂತೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ವಿಧಾನಸಭೆಯಲ್ಲಿ ಸಚಿವರು ಉತ್ತರ ನೀಡಿದ್ದಾರೆ.
ವಿಐಎಸ್’ಎಲ್ ಪ್ರತಿಷ್ಠಿತ ಕಂಪೆನಿಯಗಿದ್ದು, ಸರ್ಕಾರ ಇದರ ಪರವಾಗಿದೆ. ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಶಯವೂ ಸಹ ಕಾರ್ಖಾನೆ ಉಳಿಸುವುದಾಗಿದೆ. ಸರ್ಕಾರ ಇದರ ಪರವಾಗಿದ್ದು, ಎಲ್ಲ ಪ್ರಯತ್ನ ಮಾಡಿ ಶ್ರಮ ವಹಿಸಿ ಉಳಿಸಿಕೊಳ್ಳುತ್ತೇವೆ ಎಂದರು.
ವಿಐಎಸ್’ಎಲ್’ಗಾಗಿ ನನ್ನದೇ ಕ್ಷೇತ್ರದಲ್ಲಿ ನಾಲ್ಕು ಎಕರೆ ಮೈನಿಂಗ್ ಜಾಗ ನೀಡಲಾಗಿದ್ದು, ಸರ್ಕಾರ ಇವರ ಸಂಪರ್ಕದಲ್ಲಿದೆ. ಹೇಗಾದರೂ ಮಾಡಿ ಕಾರ್ಖಾನೆಯನ್ನು ಉಳಿಸಿಕೊಂಡು, ಮುಂದುವರೆಸಿಕೊAಡು ಹೋಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post