ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಂತಾರ ಬೆಡಗಿ ಸಪ್ತಮಿ ಗೌಡ ಬಾಲಿವುಡ್ ಸಿನಿಮಾಗಾಗಿ ತಮ್ಮ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದು, ಹೊಸ ಫೋಟೋಗಳಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಸ್ಲಿಮ್ ಆಗಿರುವ ಫೋಟೋಗಳನ್ನು ಸಪ್ತಮಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು, ಇವರ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಕಪ್ಪು ಬಣ್ಣದ ವೆಸ್ಟರ್ನ್ ಡ್ರೆಸ್’ನಲ್ಲಿ ನಟಿ ಸಪ್ತಮಿ ಗೌಡ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದು ಸರಿಯಾಗಿ ತೂಕ ಇಳಿಸಿರುವುದು ಗೊತ್ತಾಗುತ್ತದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಮುಂಬರುವ ಸಿನಿಮಾದಲ್ಲಿ ನಾಯಕ ನಟಿಯ ಪಾತ್ರದಲ್ಲಿ ನಟಿ ಸಪ್ತಮಿ ಗೌಡ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ದಿ ವ್ಯಾಕ್ಸಿನ್ ವಾರ್ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಮಾತ್ರವಲ್ಲದೇ ಸಾಕಷ್ಟು ಸಿನಿಮಾಗಳು ನಟಿ ಸಪ್ತಮಿ ಗೌಡ ಅವರ ಕೈಯಲ್ಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post