ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸರಳಾ ರಂಗನಾಥ್ ರಾವ್ ಸ್ಮಾರಕ ಪ್ರತಿಷ್ಠಾನ ವತಿಯಿಂದ ಕವಿತಾ ಪ್ರಕಾಶನ ಸಹಯೋಗದಲ್ಲಿ ಲೇಖಕಿ ಭಾಗೀರಥಿ ಹೆಗಡೆ ಅವರ ಕಾಲಾಂತರ ಕಾದಂಬರಿ ಕೃತಿಗೆ ಸರಳಾ ರಂಗನಾಥ ರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಎನ್ ಆರ್ ಕಾಲೊನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮವನ್ನು ಸುಪ್ರಸಿದ್ಧ ಕಥೆಗಾರರಾದ ಮಾವಿನಕೆರೆ ರಂಗನಾಥನ್ ದೀಪ ಬೆಳಗಿ ಉದ್ಘಾಟಿಸಿದರು. ಕವಿ, ಸಾಹಿತಿ ಮತ್ತು ಸರಳಾ ರಂಗನಾಥ್ ರಾವ್ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರು ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿನ್ನೆಯ ನಾಳೆಗಳು, ಅಂತರ್ಯಾನ ಪುಸ್ತಕಗಳು ಲೋಕಾರ್ಪಣೆಗೊಂಡವು.
ಸರಳಾ ರಂಗನಾಥ್ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಜಿ. ಎನ್. ರಂಗನಾಥ್ ರಾವ್ ಹಾಗೂ ಗಣೇಶ್ ಅಮೀನಗಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಪ್ರಸಿದ್ಧ ಕವಯತ್ರಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್. ಎಲ್. ಪುಷ್ಪ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ಕಥೆಗಾರ ಮಾವಿನಕೆರೆ ರಂಗನಾಥನ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
‘ಅಂತರ್ಯಾನ’ ಕುರಿತು ಖ್ಯಾತ ವಿಮರ್ಶಕಿ ಶ್ರೀಮತಿ ಆಶಾದೇವಿ ಅಭಿಪ್ರಾಯ ಮಂಡಿಸಿದರು. ನಿನ್ನೆಯ ನಾಳೆಗಳು ಪುಸ್ತಕ ಕುರಿತು ಖ್ಯಾತ ಕವಿ, ಕಥೆಗಾರ ಚಿಂತಾಮಣಿ ಕೊಡ್ಲೆಕೆರೆ ಮಾತುಗಳನ್ನಾಡಿದರು. ವಿಮರ್ಶಕಿ ಎಲ್. ಜಿ. ಮೀರಾ ಅಭಿನಂದನಾ ಭಾಷಣ ಮಾಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















