ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾರ್ಚ್ 9ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ Second PUC Exam ತೆರಳುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿ ಕೆಎಸ್’ಆರ್’ಟಿಸಿ ಘೋಷಣೆ ಮಾಡಿದೆ.
ಮಾರ್ಚ್ 9ರಿಂದ 29ರವರೆಗೂ ನಡೆಯಲಿರುವ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದ್ದು, ಪ್ರವೇಶ ಪತ್ರವನ್ನು ನಿರ್ವಾಹಕರಿಗೆ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಪರೀಕ್ಷಾ ದಿನದಂದು ಕೇಂದ್ರಗಳಿಗೆ ತೆರಳಲು ಹಾಗೂ ಮನೆಗೆ ಮರಳಲು ಉಚಿತ ಪ್ರಯಾಣದ ಅವಕಾಶಗಳಿದ್ದು, ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳ ಕೋರಿಕೆ ನಿಲುಗಡೆ ನೀಡುವಂತೆ ಚಾಲಕ ಹಾಗೂ ನಿರ್ವಾಹಕರಿಗೆ ಸಂಸ್ಥೆ ಸೂಚಿಸಿದೆ.
Also read: ಈ ಜ್ವರಕ್ಕೆ ಆಂಟಿ ಬಯೋಟಿಕ್ಸ್ ನೀಡದಿರಿ: ವೈದ್ಯರಿಗೆ ಐಎಂಎ ಸಲಹೆ ನೀಡಿದ್ದು ಯಾಕೆ?
ಯಾವ ಬಸ್’ಗಳಲ್ಲಿ ಸಂಚರಿಸಬಹುದು?
ಕೆಎಸ್’ಆರ್’ಟಿಸಿಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್’ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಸಂಚರಿಸಲು ಅವಕಾಶವಲ್ಲಿ ಸಂಸ್ಥೆ ಕಲ್ಪಿಸಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















