ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶದಾದ್ಯಂತ ಎನ್’ಐಎ NIA ದಾಳಿ ಬೆನ್ನಲ್ಲೇ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದು, ಸುಮಾರು 60ಕ್ಕೂ ಅಧಿಕ ಪಿಎಫ್’ಐ ಹಾಗೂ ಎಸ್’ಡಿಪಿಐ PFI, SDPI ಮುಖಂಡರನ್ನು ಬಂಧಿಸಿದ್ದಾರೆ.
ಇಂದು ನಸುಕಿನ 3 ಗಂಟೆ ವೇಳೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಹಲವು ಮುಖಂಡರೂ ಸೇರಿದಂತೆ 40ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಉಗ್ರವಾದ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳ ಆಯೋಜನೆ, ಉಗ್ರವಾದ ಚಟುವಟಿಕೆಗಳಿಗೆ ಪ್ರೇರೇಪಣೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಹಲವಾರ ಆರೋಪಗಳನ್ನು ಪಿಎಫ್’ಐ ಮೇಲೆ ಮಾಡಲಾಗಿದೆ.
Also read: ರಾಷ್ಟ್ರದಲ್ಲಿ ಮತ್ತೆ ಎನ್’ಐಎ ದಾಳಿ: 100ಕ್ಕೂ ಅಧಿಕ ಪಿಎಫ್’ಐ, ಎಸ್’ಡಿಪಿಐ ಕಾರ್ಯಕರ್ತರ ಬಂಧನ
ಮೂಲಗಳ ಪ್ರಕಾರ ಬೀದರ್’ನಲ್ಲಿ ಪಿಎಫ್’ಐ ಜಿಲ್ಲಾಧ್ಯಕ್ಷಅಬ್ದುಲ್ ಕರೀಂ, ಎಸ್’ಡಿಪಿಐ ಜಿಲ್ಲಾ ಕಾರ್ಯದರ್ಶಿ ಶೇಕ್ ಮಕ್ಸೂದ್ ವಶಕ್ಕೆ ಪಡೆಯಲಾಗಿದ್ದು, ಚಿತ್ರದುರ್ಗದಲ್ಲಿ ಪಿಎಫ್’ಐ ಮುಖಂಡ ಅಫನ್ ಅಲಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಅಂತೆಯೇ ಬಾಗಲಕೋಟೆಯಲ್ಲಿ 7 ಪಿಎಫ್‌ಐ ಕಾರ್ಯಕರ್ತರು, ಚಾಮರಾಜನಗರದಲ್ಲಿ ಪಿಎಫ್’ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.











Discussion about this post