ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ನಸೀರ್ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ.
ವಿಚಾರಣಾಧೀನ ಕೈದಿಗಳನ್ನ ತನ್ನ ರೂಮಿಗೆ ಹಾಕಿಸಿಕೊಂಡು ಬಿಸಿನೆಸ್ ಮಾಡ್ತಿದ್ದ ಉಗ್ರ ನಸೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ದಿನಕ್ಕೆ 4-5 ಸಾವಿರ ದುಡ್ಡು ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ.
ಉಗ್ರರಿಗೆ ನಿಗದಿಯಾಗಿರೊ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಬೇರೆ ಕಡೆ ಸಹ ಓಡಾಟ ನಡೆಸುತ್ತಿದ್ದ ನಸೀರ್, ಹೊರಗಡೆಯಿಂದ ಡ್ರೈ ಫ್ರೂಟ್ಸ್, ಬಟ್ಟೆ, ಸ್ವೀಟ್ಸ್ ತರಿಸಿಕೊಂಡು ಜೈಲಿನ ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬ ಅನೇಕ ರಹಸ್ಯಗಳು ಸಿಬಿಐ ತನಿಖೆ ವೇಳೆ ಬಯಲಾಗಿದೆ.
Also read: ಗ್ರಾಮಸ್ಥರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ
ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಶಂಕಿರಿಂದ 45 ಸಜೀವ ಗುಂಡುಗಳನ್ನ ಪತ್ತೆ ಮಾಡಿ ಸೀಜ್ ಮಾಡಿದ್ದಾರೆ. 45 ಗುಂಡುಗಳ ಪೈಕಿ 15 ಸಜೀವ ಗುಂಡುಗಳು ಪೊಲೀಸರು ಬಳಸುವ ಗುಂಡುಗಳು ಎಂದು ತಿಳಿದುಬಂದಿದೆ.
303 ಹಾಗೂ 9 ಎಂಎಂನ ಸಜೀವ ಗುಂಡುಗಳು ಪತ್ತೆಯಾಗಿದ್ದು, ಇದು ಪೊಲೀಸರು ಹಾಗೂ ಮಿಲಿಟರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್ ನಂತಹ ಅರೆಸೇನಾ ಪಡೆಗಳು ಕೂಡ ಈ ಬುಲೆಟ್‌ಗಳನ್ನ ಬಳಕೆ ಮಾಡುತ್ತವೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post