ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendra Swamy Mutt ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ನ.14ರ ಗುರುವಾರ ಸಂಜೆ 7:30ಕ್ಕೆ ಶ್ರೀ ರಾಹುಲ್ ಕೆ. ರವೀಂದ್ರನ್ ಇವರು ಹರಿನಾಮ ಸಂಕೀರ್ತನೆ ನಡೆಸಿಕೊಡಲಿದ್ದು, ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಎಸ್. ಶಶಿಧರ್ ಮತ್ತು ಮೃದಂಗ ವಾದನದಲ್ಲಿ ಶ್ರೀನಿವಾಸ್ ಅನಂತರಾಮಯ್ಯ ಸಹಕರಿಸಲಿದ್ದಾರೆ ಎಂದು ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.
ದಾಸವಾಣಿ ಕಾರ್ಯಕ್ರಮ
ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ನ.14ರ ಗುರುವಾರ ಸಂಜೆ 7ಕ್ಕೆ ಕು. ವಾಣಿಶ್ರೀ ರಾಮಕೃಷ್ಣ ಇವರಿಂದ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿದ್ದು, ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಅಭಯ್ ಸಂಪಿಗೆತಯ ಮತ್ತು ಮೃದಂಗ ವಾದನದಲ್ಲಿ ಆರ್. ಸುಧನ್ವ ಸಾಥ್ ನೀಡಲಿದ್ದಾರೆ ಎಂದು ಗೊಗ್ಗಿ ಕೃಷ್ಣಾಚಾರ್ ತಿಳಿಸಿದ್ದಾರೆ.
Also read: ಶಿವಮೊಗ್ಗ | ರಸ್ತೆ ಬಿಟ್ಟು ಡಿವೈಡರ್ ಏರಿದ ಸಾರಿಗೆ ಬಸ್ | ತಪ್ಪಿದ ದೊಡ್ಡ ಅನಾಹುತ

ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ಸಾಥ್ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post