ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಪಿಎಫ್’ ಹಾಗೂ ಎಸ್’ಡಿಪಿಐ ಈ ಮಟ್ಟಕ್ಕೆ ಬೆಳೆಯಲು ಮಾಜಿ ಸಿಎಂ ಸಿದ್ಧರಾಮಯ್ಯ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ Nalin Kumar Kateel ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಿದ್ಧರಾಮಯ್ಯ Siddaramaiah ಅವಧಿಯಲ್ಲೇ ರಾಜ್ಯದಲ್ಲಿ ಪಿಎಫ್’ಐ ಹಾಗೂ ಎಸ್’ಡಿಪಿಐ ಕಾರ್ಯಕರ್ತರು ಬಲವಾಗಿ ಬೆಳೆದರು. ಸಿದ್ದರಾಮಯ್ಯ ಕುಮ್ಮಕ್ಕಿನಿಂದಲೂ ಈ ಸಂಘಟನೆಗಳು ಇಷ್ಟು ಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎಂದು ಚಾಟಿ ಬೀಸಿದ್ದಾರೆ.
ಸದ್ಯ ಈ ಸಂಘಟನೆಗಳನ್ನು ನಿಷೇಧ ಮಾಡಲು ಅಗತ್ಯವಿರುವ ಸಾಕ್ಷಿ ಸಂಗ್ರಹ ನಡೆದಿದೆ. ಅಧಿಕಾರಿಗಳು ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ನಮ್ಮ ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡಿದ್ದು, ಸಾಕಷ್ಟು ಸಾಕ್ಷಿ ದೊರೆತ ನಂತರ ನಿಷೇಧ ನಿಶ್ಚಿತ ಎಂದಿದ್ದಾರೆ.
Also read: ಪಿಎಫ್’ಐ, ಎಸ್’ಡಿಪಿಐಗೆ ಶಾಕ್! ರಾಜ್ಯದ 15 ಜಿಲ್ಲೆಗಳಲ್ಲಿ ಪೊಲೀಸ್ ದಾಳಿ, 40ಕ್ಕೂ ಹೆಚ್ಚು ಮಂದಿ ಬಂಧನ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















