ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಂಗ್ರೆಸ್ ಸರ್ಕಾರವು ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಬಯ್ಯುವುದು ಬಿಟ್ಟರೆ ತಾವು ಮಾಡಿದ ಅಭಿವೃದ್ಧಿ ಕಾರ್ಯ ಏನೆಂದು ತಿಳಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು CM Siddaramaiah ಸುಳ್ಳಿನ ಆರ್ಥಿಕತೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ R Ashok ಟೀಕಿಸಿದರು.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು Basavaraja Bommai ತಂದಿದ್ದ ರೈತ ವಿದ್ಯಾನಿಧಿ, ಬಿ.ಎಸ್. ಯಡಿಯೂರಪ್ಪನವರು B S Yadiyurappa ತಂದಿದ್ದ ಕಿಸಾನ್ ಸಮ್ಮಾನ್ ರದ್ದು ಮಾಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿಲ್ಲ. 5 ಸಾವಿರ ರೂ. ನಿಂದ 50 ಸಾವಿರ ರೂ. ವರೆಗೆ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು1,200 ರೂ.ಗೆ ಇಳಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ನೀರಾವರಿ, ಲೋಕೋಪಯೋಗಿ ಇಲಾಖೆಯಿಂದ ಹಣ ಕಡಿತಗೊಳಿಸಲಾಗಿದೆ. ಈ ಬಗ್ಗೆಯೂ ಸರ್ಕಾರ ಉತ್ತರ ನೀಡಿಲ್ಲ. ರೈತರಿಗೆ ನೀಡುವ ಸಹಾಯಧನದ ಬಗ್ಗೆಯೂ ಪ್ರತಿಕ್ರಿಯೆ ನೀಡದೆ ಕಾಗೆ ಗುಬ್ಬಕ್ಕ ಕಥೆ ಹೇಳಲಾಗುತ್ತಿದೆ. ಇದೇ ಸಿದ್ದರಾಮಯ್ಯ ಅವರ ಎಕನಾಮಿಕ್ಸ್, ಸುಳ್ಳು ಎಕನಾಮಿಕ್ಸ್ ಎಂದರೆ ಅದು ಸಿದ್ದು ಎಕನಾಮಿಕ್ಸ್ ಎಂದು ಟೀಕಿಸಿದರು.
Also read: ಘೋಷ ವಾಕ್ಯ ಬದಲು | ಮಕ್ಕಳ ತಿಳಿಮನಸ್ಸಿನಲ್ಲಿ ಕಲ್ಲು ಹಾಕುವ ನೀಚ ಕೆಲಸ | ಬಿಜೆಪಿ ಕಿಡಿ
ಬಿಜೆಪಿ ಸರ್ಕಾರ ಇದ್ದಾಗ ಸರ್‌ಪ್ಲಸ್ ಬಜೆಟ್ ಇದ್ದರೆ, ಕಾಂಗ್ರೆಸ್ ಸರ್ಕಾರದಿಂದ ಅದು ಹೋಪ್‌ಲೆಸ್ ಬಜೆಟ್ ಆಗಿದೆ. 1.5 ಲಕ್ಷ ಕೋಟಿ ರೂ. ಸಾಲ ಪಡೆದಿದ್ದು, ಎಲ್ಲ ಕಡೆ ಹಣ ಶೂನ್ಯವಾಗಿದೆ. 90% ಸಾಲ ಮಾಡಿರುವುದು ಕಾಂಗ್ರೆಸ್ ಸರ್ಕಾರಗಳೇ. ಸಿದ್ದರಾಮಯ್ಯನವರು ಒಂದೇ ವರ್ಷದಲ್ಲಿ ಸಾಲವನ್ನು 1 ಲಕ್ಷ ಕೋಟಿ ರೂ. ದಾಟಿಸಿದ್ದಾರೆ. ನೀರಾವರಿಗೆ ಒಂದೇ ಒಂದು ಯೋಜನೆ ನೀಡಿಲ್ಲ. ಅಭಿವೃದ್ಧಿ ಕುರಿತು ಮಾತನಾಡದೆ ಕೇವಲ ಸಂತೆ ಭಾಷಣ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಬೀದಿಯಲ್ಲಿ ನಿಂತು ಸುಳ್ಳು ಟೀಕೆ ಮಾತ್ರ ಮಾಡುತ್ತಿದ್ದಾರೆ ಎಂದರು.
ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ Nirmala Seetharaman ಅವರು ಸಂಸತ್ತಿನಲ್ಲೇ ಇದಕ್ಕೆ ಉತ್ತರ ನೀಡಿದ್ದಾರೆ. ಅದರಲ್ಲಿ ತಪ್ಪಿದ್ದರೆ ಹಕ್ಕುಚ್ಯುತಿ ಮಂಡನೆ ಮಾಡಬೇಕಿತ್ತು. ಅದನ್ನು ಬಿಟ್ಟು ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಬಯ್ಯುವುದು ಬಿಟ್ಟರೆ ತಾವು ಅಭಿವೃದ್ಧಿ ಮಾಡಿದ್ದೇವೆಂದು ಹೇಳಿಲ್ಲ. ಉನ್ನತ ಮಟ್ಟದಲ್ಲಿದ್ದ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ಒಯ್ದಿದ್ದಾರೆ ಎಂದು ಹರಿಹಾಯ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post