ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇತ್ತೀಚಿನ ವರ್ಷಗಳಲ್ಲಿ ಹಲವು ಗಂಭೀರ ಸಮಸ್ಯೆಗಳಿಂದ ಕನ್ನಡ ಚಿತ್ರರಂಗ ನಲುಗುತ್ತಿದೆ. ಅಪಾರ ಸಾವು ನೋವು, ಕಷ್ಟನಷ್ಟಗಳಿಂದ ಕಂಗೆಟ್ಟ ಸ್ಯಾಂಡಲ್ ವುಡ್ #Sandalwood ಉಳಿವಿಗೆ ಆ.13,14ರಂದು ಹೋಮಹವನ ಮಾಡಲು ಕನ್ನಡ ಚಲನಚಿತ್ರ ಕಲಾವಿದರ ಸಂಘ ತೀರ್ಮಾನಿಸಿದೆ.
ಕೋವಿಡ್ #Covid ಸಾಂಕ್ರಾಮಿಕ ಬಳಿಕ ಹಲವು ಕಲಾವಿದರು ಪ್ರಾಣಕಳೆದುಕೊಂಡಿದ್ದಾರೆ, ಕೆಲವರು ಜೈಲು ಪಾಲಾಗಿದ್ದಾರೆ. ಕನ್ನಡ ಚಿತ್ರರಂಗ ಅಪಾರ ನಷ್ಟ ಅನುಭವಿಸುತ್ತಿದ್ದು ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಉಳಿವಿಗೆ ದೇವರ ಮೊರೆ ಹೋಗಲು ಕನ್ನಡ ಕಲಾವಿದರ ಸಂಘ ತೀರ್ಮಾನಿಸಿದೆ.

Also read: ಯೂಟ್ಯೂಬ್ ವೀಕ್ಷಣೆ ಹೆಚ್ಚಿಸಿಕೊಳ್ಳಲು ರಾಷ್ಟ್ರಪಕ್ಷಿ ಕೊಂದು ಅಡುಗೆ ಮಾಡಿದ ಭೂಪ: ಈಗ ಪೊಲೀಸರ ಅತಿಥಿ
ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಒಂದು ಸಲ್ಯೂಷನ್ ಬೇಕಾಗಿದೆ. ನಾವು ಅನೇಕ ಸಲ ಜನರ ಬಳಿ ಮನವಿ ಮಾಡಿದ್ದೇವೆ. ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿ ಏನಾಗ್ತಿದೆ ಅನ್ನೋದು ಗೊತ್ತಿದೆ. ಹಿಂದೆ ಎಲ್ಲಾ ಭಾಷೆಯ ಚಿತ್ರ ಬಿಡುಗಡೆ ಆಗ್ತಿದ್ದವು, ಅದು ಕಡಿಮೆ ಇತ್ತು. ಆದರೆ ಇವತ್ತು ಸುನಾಮಿ ರೀತಿ ಎಲ್ಲ ಚಿತ್ರಗಳು ಬರ್ತಾ ಇವೆ. ಎಲ್ಲ ಭಾಷೆಯ ಸೂಪರ್ ಡೂಪರ್ ಚಿತ್ರ ತಂದು ರಿಲೀಸ್ ಮಾಡ್ತಿದ್ದಾರೆ. ಇದು ವ್ಯಾಪಾರ. ನಾನು ಅದರ ಬಗ್ಗೆ ಮಾತನಾಡೊಲ್ಲ. ಆದರೆ ಅದರ ಪರಿಣಾಮದಿಂದ ಇವತ್ತು ಕನ್ನಡ ಚಿತ್ರರಂಗ ಪಾತಾಳಕ್ಕೆ ಹೋಗ್ತಾ ಇದೆ. ಅದನ್ನು ಉಳಿಸಿಕೊಳ್ಳೋಕೆ ಈ ಪೂಜೆ ನಡೆಸುತ್ತಿದ್ದೇವೆ ಎಂದರು.

ನಾನು ಗಟ್ಟಿಮುಟ್ಟಾಗಿ ಚೆನ್ನಾಗಿದ್ದಾಗ ಪೂಜೆ ಪುನಸ್ಕಾರದ ಬಗ್ಗೆ ನಿರ್ಲಕ್ಷ್ಯ ಮಾಡ್ತಿದ್ದೆ. ಆದರೀಗ ವಯಸ್ಸು 75 ಆದ್ಮೇಲೆ ಗೊತ್ತಾಗ್ತಿದೆ. ಗಣಪತಿ ಹೋಮ, ಸರ್ಪದೋಷ ಪರಿಹಾರ ಮಾಡ್ತಿದ್ದೇನೆ. ಆಗಸ್ಟ್ 13,14ರಂದು ಕನ್ನಡ ಚಿತ್ರರಂಗದ ಕಲಾವಿದರ ಸಂಘದಲ್ಲಿ ಚಿತ್ರರಂಗದ ಏಳಿಗೆಗಾಗಿ ಹೋಮ ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post