ಕಲ್ಪ ಮೀಡಿಯಾ ಹೌಸ್ | ತೆಲಂಗಾಣ |
ರಾಷ್ಟ್ರಪಕ್ಷಿ ನವಿಲಿನ #National bird ಮಾಂಸ ಬಳಸಿ ಅಡುಗೆ #Peacock curry ಮಾಡಿದ್ದ ಆರೋಪದ ಮೇಲೆ ಯೂಟ್ಯೂಬರ್‌ನನ್ನು ಬಂಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕೋಡಂನ ಪ್ರಣಯ್ ಕುಮಾರ್ ಎಂಬಾತ ತಮ್ಮ ಚಾನೆಲ್‌ಗೆ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಲು ರಾಷ್ಟ್ರಪಕ್ಷಿ ನವಿಲಿನ ಕರಿ ಮಾಡುವುದು ಹೇಗೆ ಎಂದು ವಿಡಿಯೋ ಮಾಡಿ ಯೂಟ್ಯೂಬ್ಗೆ #Youtube ಅಪ್ಲೋಡ್ ಮಾಡಿದ್ದಾನೆ.
ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದು, ಈ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಆರೋಪಿ ಇರೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
Also read: ಬೆಂಗಳೂರು | ಟಾಯ್ಲೆಟ್’ನಲ್ಲಿ ಮೊಬೈಲ್ ಇಟ್ಟು ಮಹಿಳೆಯರ ವೀಡಿಯೋ | ಶಿವಮೊಗ್ಗದ ವ್ಯಕ್ತಿ ಬಂಧನ
ನವಿಲು ಮಾತ್ರವಲ್ಲದೆ ಅಡವಿ ಹಂದಿ, ಉಡಾ ಇತ್ಯಾದಿ ಪ್ರಾಣಿಗಳ ಮಾಂಸದಿಂದ ಅಡುಗೆ ಮಾಡಿರುವುದು ಅವರ ಯೂಟ್ಯೂಬ್ನಲ್ಲಿದೆ ಎಂದು ಹೇಳಲಾಗುತ್ತಿದ್ದು, ಅರಣ್ಯಾಧಿಕಾರಿಗಳ ತಂಡ ತಂಗಲ್ಲಪಲ್ಲಿ ಗ್ರಾಮಕ್ಕೆ ಆಗಮಿಸಿ ವ್ಯಕ್ತಿಯ ಮನೆಯಿಂದ ನವಿಲಿನ ಸಾರನ್ನು ವಶಪಡಿಸಿಕೊಂಡರು. ಅದನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಯೂಟ್ಯೂಬರ್‌ನ ರಕ್ತದ ಮಾದರಿ ಹಾಗೂ ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಫೋರೆನ್ಸಿಕ್ಗೆ ಕಳುಹಿಸಲಾಗಿದೆ. ನವಿಲು ಮಾಂಸ ತಿಂದಿರುವುದು ದೃಢವಾದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವಿಲು ರಾಷ್ಟ್ರೀಯ ಪಕ್ಷಿಯಾಗಿದ್ದು ಅದರ ರಕ್ಷಣೆಯನ್ನು ಇಲ್ಲಿ ಕಡೆಗಣಿಸಲಾಗಿದೆ. ಅಲ್ಲದೇ ಅದನ್ನು ಹತ್ಯೆ ಮಾಡಿ ವಿಡಿಯೋ ಮೂಲಕ ಪ್ರಚಾರ ಮಾಡಿರುವ ಆರೋಪದ ಮೇಲೆ ವ್ಯಕ್ತಿಯನ್ನ ಬಂಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post