ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯುಗಾದಿ #Ugadi ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಂಭವವಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಮಧ್ಯ ರೈಲ್ವೆಯು ಗುಂಟೂರು ಮತ್ತು ಎಸ್.ಎಸ್.ಎಸ್. ಹುಬ್ಬಳ್ಳಿ ನಡುವೆ ವಿಶೇಷ ರೈಲುಗಳನ್ನು #Special Train ಓಡಿಸಲು ನಿರ್ಧರಿಸಿದೆ.
ರೈಲಿನ ವಿವರ ಈ ಕೆಳಗಿನಂತಿವೆ:
ರೈಲು ಸಂಖ್ಯೆ 07271 ಗುಂಟೂರು-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು ಮಾರ್ಚ್ 31, 2025 ರಂದು ರಾತ್ರಿ 8:00 ಗಂಟೆಗೆ ಗುಂಟೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 9:20ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.
ರೈಲು ಸಂಖ್ಯೆ 07272 ಎಸ್ಎಸ್ಎಸ್ ಹುಬ್ಬಳ್ಳಿ-ಗುಂಟೂರು ವಿಶೇಷ ರೈಲು ಏಪ್ರಿಲ್ 1, 2025 ರಂದು ಬೆಳಿಗ್ಗೆ 11:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಮರುದಿನ ಬೆಳಗಿನ ಜಾವ 3:00 ಗಂಟೆಗೆ ಗುಂಟೂರು ತಲುಪಲಿದೆ.
Also read: ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ನರ್ಸಿಂಗ್ ಕಾಲೇಜುಗಳಲ್ಲಿ ವಿದೇಶಿ ಭಾಷಾ ತರಬೇತಿ
ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ನರಸರಾವ್ ಪೇಟೆ, ವಿನುಕೊಂಡ, ಮಾರ್ಕಾಪುರ ರೋಡ್, ಕುಂಬಂ, ಗಿಡ್ಡಲೂರು, ನಂದ್ಯಾಳ, ಧೋಣೆ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಭಾನಾಪುರ, ಬನ್ನಿ ಕೊಪ್ಪ, ಗದಗ ಮತ್ತು ಅಣ್ಣಿಗೇರಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
ಈ ರೈಲಿನಲ್ಲಿ ಒಟ್ಟು 22 ಬೋಗಿಗಳಿದ್ದು, ಅವುಗಳಲ್ಲಿ 16 ಸಾಮಾನ್ಯ ದ್ವಿತೀಯ ದರ್ಜೆ, 4 ಚೇರ್ ಕಾರ್ ಮತ್ತು 2 ಸೆಕೆಂಡ್ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳು ಸೇರಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post