ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2022-23ರ ಎಸ್’ಎಸ್’ಎಲ್’ಸಿ ಫಲಿತಾಂಶ SSLC Result ಇಂದು ಪ್ರಕಟಗೊಂಡಿದ್ದು, ರಾಜ್ಯದ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625ಕ್ಕೆ ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಶೇ.96.80ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಚಿತ್ರದುರ್ಗ ಮೊದಲ ಸ್ಥಾನ ಪಡೆದಿದ್ದರೆ, ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಶೇ.83.89 ರಷ್ಟು ಫಲಿತಾಂಶ ದಾಖಲಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.12ರಷ್ಟು ಫಲಿತಾಂಶ ಏರಿಕೆ ಆಗಿದೆ.
ನಾಲ್ವರು ಟಾಪ್ ವಿದ್ಯಾರ್ಥಿಗಳು:
ವಿಜಯಪುರದ ಭೀಮನಗೌಡ
ಬೆಂಗಳೂರಿನ ಭೂಮಿಕಾ ಪೈ
ಸವದತ್ತಿಯ ಅನುಪಮಾ ಶ್ರೀಶೈಲ
ಚಿಕ್ಕಬಳ್ಳಾಪುರದ ಯಶಸ್ ಗೌಡ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post