ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆರ್‌ಸಿಬಿ ವಿಜಯೋತ್ಸವದ #RCB Victory Celebration ಸಂದರ್ಭದಲ್ಲಿ ಕಾಲ್ತುಳಿತದಿಂದ 11 ಮಂದಿ ಅಮಾಯಕರ ಸಾವಿಗೆ ಕಾರಣವಾಗಿರುವ ಈ ಸರ್ಕಾರಕ್ಕೆ ನಾಚಿಕೆ, ಮರ್ಯಾದೆ, ನೈತಿಕತೆ ಇದ್ದರೆ, ಸಂಬಂಧ ಪಟ್ಟವರು ರಾಜೀನಾಮೆ ನೀಡಬೇಕು. ಪ್ರಕರಣದ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಆಗಹಿಸಿದ್ದಾರೆ.
ಕಾಲ್ತುಳಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಲ್ತುಳಿತದಲ್ಲಿ ಹನ್ನೊಂದು ಜನ ಸಾವನಪ್ಪಿರುವಂತದ್ದು ಹಲವಾರು ಜನ ಗಾಯಗೊಂಡಿರುವುದು ಅತ್ಯಂತ ದುಖದ ಸಂಗತಿ ಈ ವಿಚಾರದಲ್ಲಿ ಬಹುತೇಕವಾಗಿ ಕರ್ನಾಟಕದ ನಾಗರಿಕರಿಗೆ ಕೋಪ ಬಂದಿದೆ. ಒಂದು ಸರ್ಕಾರ ಕ್ರಿಕೆಟ್ ವಿಜಯೋತ್ಸವ ನಿಯಂತ್ರಣ ಮಾಡಲು ಆಗುವುದಿಲ್ಲ ಎಂದರೆ ಇಡ್ಲಿ ಕರ್ನಾಟಕವನ್ನು ಹೇಗೆ ನಿಯಂತ್ರಣ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಗಾಯಾಳುಗಳನ್ನು ಸಾರ್ವಜನಿಕರೇ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲು ಪ್ರಯತ್ನ ಮಾಡಿದ್ದಾರೆ. ಹಿರಿಯ ಪೊಲಿಸರು ನಿಷ್ಕ್ರಿಯವಾಗಿ ನಿಂತಿದ್ದರು. ಈ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸಾವು ವ್ಯರ್ಥವಾಗಬಾರದು. ಮತ್ತು ಇದು ನಮ್ಮ ಕರ್ನಾಟಕಕ್ಕೆ ಕಳಂಕವಾಗಿದೆ. ವಿಶ್ವ ಕಪ್ ಗೆದ್ದಾಗ ಮುಂಬೈನಲ್ಲಿ ಇಪ್ಪತ್ತೈದು ಕಿಲೋ ಮೀಟರ್ ವಿಜಯೋತ್ಸವ ಆಚರಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಿಂದಿನ ಘಟನೆಗಳಿಂದ ಪಾಠ ಕಲಿಯಬೇಕು. ನಮ್ಮ ಅವಧಿಯಲ್ಲಿಯೂ ಪುನಿತ್ ರಾಜಕುಮಾರ್ ಅವರ ನಿಧನದ ಸಂದರ್ಭದಲ್ಲಿ ನಾವು ರಾಜಕುಮಾರ್ ಅವರ ನಿಧನದ ಸಂದರ್ಭದಲ್ಲಿ ಆಗಿದ್ದ ಘಟನೆಯನ್ನು ಮನಗಂಡು ಎರಡು ದಿನಗಳ ಕಾಲ ವ್ಯವಸ್ಥಿತವಾಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿ ಬೆಳಗಿನ ನಾಲ್ಕು ಗಂಟೆಗೆ ಗೌರವಯುತವಾಗಿ ಅವರ ಅಂತ್ಯ ಸಂಸ್ಕಾರ ಮಾಡಿದ್ದೇವು ಎಂದು ನೆನಪಿಸಿಕೊಂಡರು.

ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಗಾಯ ಆಗಿದೆ ಎಂದು ಹೇಳಿದರೂ. ಪೊಲೀಸರು ಮತ್ತೆ ಹೊಡೆದಿದ್ದಾರೆ ಎಂದು ಗಾಯಾಳು ಹೇಳಿದರು. ಒಟ್ಟಾರೆ, ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಕಾರ್ಯಕ್ರಮ ಆಯೋಜನೆಯಲ್ಲಿ ಯಾವ ಹಿರಿಯ ಅಧಿಕಾರಿಗಳಿದ್ದಾರೆ. ಯಾವ ರಾಜಕಾರಣಿ ಇದ್ದಾರೆ. ಅವರೆಲ್ಲರ ಮೇಲೆ ಕ್ರಮ ಆಗಬೇಕು. ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಈ ಘಟನೆಯ ಬಗ್ಗೆ ಮುಖ್ಯಮಂತಿಗಳ ಹೇಳಿಕೆ ನಿರಾಶಾದಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಡಾ.ಸುಧಾಕರ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post