ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತನ್ನ ಅಭಿಮಾನಿಗಳಿಗಾಗಿ ನಟನೋರ್ವ ಟ್ಯಾಟು ಹಾಕಿಸಿಕೊಳ್ಳುವುದು ಅತಿ ಅಪರೂಪ. ಬಹುಶಃ ಚಿತ್ರೋದ್ಯಮದ ಇತಿಹಾಸದಲ್ಲಿ ಅಭಿಮಾನಿಗಳ ಪ್ರೀತಿಯನ್ನು ಹಚ್ಚೆಯ ಮೂಲಕ ತಮ್ಮ ಹೃದಯಕ್ಕೆ ಹತ್ತಿರವಾಗಿಸಿಕೊಂಡವರಲ್ಲಿ ನಟ ದರ್ಶನ್ Actor Darshan ಮೊದಲಿಗರು ಇರಬಹುದೆನೋ!
ನನ್ನ ನಲ್ಮೆಯ ಸೆಲೆಬ್ರಿಟಿಗಳಿಗೆ ಒಂದು ಸಣ್ಣ ಗೌರವಾರ್ಪಣೆ ❤️
A small tribute to all my loyal and royal celebrities 🙏
ನಿಮ್ಮ ದಾಸ ದರ್ಶನ್https://t.co/dlJQ3kCuuz
— Darshan Thoogudeepa (@dasadarshan) February 10, 2023
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಎದೆ ಮೇಲೆ ‘ನನ್ನ ಸೆಲೆಬ್ರಿಟೀಸ್’ ಎಂದು ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ. ಹಾಗೂ ತಾವು ಟ್ಯಾಟು ಹಾಕಿಸಿಕೊಳ್ಳುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ.
ನಟ ದರ್ಶನ್ ತಮಗಾಗಿ ಹಾಕಿಸಿಕೊಂಡಿರುವ ಟ್ಯಾಟು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ನಿಮ್ಮ ಅಭಿಮಾನಿಯಾಗಿದ್ದಕ್ಕೂ ಸಾರ್ಥಕವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಪಾಲಿಗೆ ನೀವು ದೇವ್ರಿಗಿಂತ ಹೆಚ್ಚಾದ್ರಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಸಿನಿಮಾ ನಟನಿಗಾಗಿ ಆತನ ಅಭಿಮಾನಿಗಳು ತಮ್ಮ ಕೈ ಮೇಲೆ, ಎದೆ ಮೇಲೆ ಟ್ಯಾಟು ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ತೋರಿಸಿಕೊಳ್ಳುವುದು ಸಾಮಾನ್ಯ. ಆದರೆ ತನ್ನ ಅಭಿಮಾನಿಗಳಿಗಾಗಿ ನಟನೋರ್ವ ಟ್ಯಾಟು ಹಾಕಿಸಿಕೊಳ್ಳುವುದು ಅತಿ ಅಪರೂಪ. ಅದರಲ್ಲೂ ಸ್ಟಾರ್ ನಟರು ತಮ್ಮ ಅಭಿಮಾನಿಗಳ ಹೆಸರನ್ನು ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳುವುದು ವಿರಳ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post