ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಸ್ಟರಿ ಟಿವಿ18 ಆಯೋಜನೆಯ ಭಿಹೆರಿಟೇಜ್ ಇಂಡಿಯಾ ರಸಪ್ರಶ್ನೆ ಸ್ಪರ್ಧೆ 2022ರಲ್ಲಿ ಬೆಂಗಳೂರಿನ ಶ್ರೀರವಿಶಂಕರ್ ವಿದ್ಯಾ ಮಂದಿರದ ವಿದ್ಯಾರ್ಥಿಗಳು ತೀವ್ರ ಪೈಪೋಟಿಯ ನಡುವೆಯೂ ಸೆಮಿ ಫೈನಲ್ಸ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಂವರ್ಕ್, ತಂತ್ರಗಾರಿಕೆಯೊಂದಿಗೆ ಅದ್ಭುತ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ನಗರದ ಶ್ರೀ ಕುಮಾರನ್ ಚಿಲ್ಡ್ರನ್ ಹೋಮ್ ಇಂಗ್ಲಿಷ್ ನರ್ಸರಿ ಮತ್ತು ಪ್ರೆÊಮರಿ ಶಾಲೆಯಲ್ಲಿ ನಡೆದ ಪ್ರಾದೇಶಿಕ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿ ಪೈನಲ್ಸ್ ಪ್ರವೇಶಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
2001ರಲ್ಲಿ ಪ್ರಾರಂಭವಾದ ಹೆರಿಟೇಜ್ ರಸಪ್ರಶ್ನೆ ಸ್ಪರ್ಧೆಯು ಇಂದು ಪ್ಯಾನ್ ಇಂಡಿಯಾ ಅಂತರ್ ಶಾಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಗಳಿಗೆ ಮಾನದಂಡವಾಗಿದೆ. ಹಾಗೂ ವಿವಿಧ ಪ್ರತಿಷ್ಠಿತ ಸಿಬಿಎಸ್’ಇ ಶಾಲೆಗಳಿಂದ ಪ್ರತಿಭಾನ್ವಿತ ಹಾಗೂ ತೀಕ್ಷö್ಣಬುದ್ಧಿಮತ್ತೆಯ ಮನಸ್ಸುಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
Also read: ಶಿಕಾರಿಪುರದ ಮಾಳೂರಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಹೇಗಿತ್ತು? ಇಲ್ಲಿದೆ ವರದಿ
ಹೆರಿಟೇಜ್ ರಸಪ್ರಶ್ನೆ ಕಾರ್ಯಕ್ರಮದ ಪ್ರಿಲಿಮಿನರಿ ಎಲಿಮಿನೇಶನ್ ಸುತ್ತಿನಲ್ಲಿ 8049 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾದೇಶಿಕ ಸುತ್ತಿನಲ್ಲಿ 30 ವಿವಿಧ ಶಾಲೆಗಳ 90 ವಿದ್ಯಾರ್ಥಿಗಳು ಭಾಗವಹಿಸಿ ಕ್ವಿಜ್ ಮಾಸ್ಟರ್ ಎಂದೇ ಖ್ಯಾತಿ ಹೊಂದಿರುವ ಮೇಘವಿ ಮಂಜುನಾಥ್ ಅವರ ಸವಾಲಿನ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಬೃಹತ್ ಪ್ರಮಾಣದ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದಲೇ ಈ ಕಾರ್ಯಕ್ರಮದ ಯಶಸ್ಸನ್ನು ಗುರುತಿಸಬಹುದು.
ಬೆಂಗಳೂರು ಶ್ರೀ ರವಿಕುಮಾರ ವಿದ್ಯಾಮಂದಿರ ಶಾಲೆಯ ಆದಿತ್ಯ ಎಸ್. ನಯ್ಯರ್, ಜೀವಿಕಾ ಗಿರಿ ಹಾಗೂ ಪ್ರಣವ್ ಎಂ. ಪಾಟೀಲ್ ವಿಜೇತರು. 30 ಪ್ರತಿಷ್ಠಿತ ಶಾಲೆಗಳ ತಂಡಗಳ ವಿರುದ್ಧದ ತೀವ್ರ ಪೈಪೋಟಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ವಿಜಯಶಾಲಿಯಾಗಿ ಸೆಮಿಫೈನಲ್’ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ರಸಪ್ರಶ್ನೆ ಕಾರ್ಯಕ್ರಮದ ರಾಷ್ಟ್ರಮಟ್ಟದ ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆಯಲು ಶ್ರೀ ರವಿಶಂಕರ್ ವಿದ್ಯಾಮಂದಿರದ ವಿದ್ಯಾರ್ಥಿಗಳು ಸೆಮಿಫೈನಲ್’ನಲ್ಲಿ 3 ಇತರೆ ಶಾಲಾ ತಂಡದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲಿದ್ದಾರೆ. ದೇಶದಾದ್ಯಂತ ಇರುವ ಶಾಲಾ ತಂಡಗಳನ್ನು ರಸಪ್ರಶ್ನೆ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ದೇಶದ 75ನೆಯ ವರ್ಷದ ಸ್ವಾತಂತ್ರ್ಯೋತ್ಸವ ಹಾಗೂ ಇಲ್ಲಿನ ವೈಭವಯುತ ಇತಿಹಾಸವನ್ನು ಸ್ಮರಿಸುವ ಹಾಗೂ ಆಚರಿಸುವ ಉದ್ದೇಶದಿಂದ ರಸಪ್ರಶ್ನೆ ಕಾರ್ಯಕ್ರಮದ ಕೇಂದ್ರ ವಿಷಯವಾಗಿ ಭಿಆಜಾದಿ ಕಾ ಅಮೃತ್ ಮಹೋತ್ಸವಭಿ ಎಂದು ಇಡಲಾಗಿದೆ. ಅಂತರಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು 16 ವಲಯಗಳಲ್ಲಿ ವಿಭಾಗಿಸಲಾಗಿದೆ. ಅದರ ಅಡಿಯಲ್ಲಿ 2683 ಸಿಬಿಎಸ್’ಇ ಶಾಲೆಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post