ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ Former PM H.D. Devegowda ನಿವಾಸದಲ್ಲಿಂದು ಭೇಟಿಯಾಗಿ ಆರೋಗ್ಯ ವಿಚಾರಿಸಿ ಆಶೀರ್ವಾದಿಸಿದರು.
ಇಳಿ ವಯಸ್ಸಿನಲ್ಲೂ ಎಚ್.ಡಿ.ದೇವೇಗೌಡರು ಶ್ರೀ ಜಗದ್ಗುರುಗಳವರ ಪಾದಕ್ಕೆ ಪ್ರಣಾಮಗಳನ್ನು ಸಲ್ಲಿಸಿ ಸ್ವಾಗತಿಸಿದರು. ಶ್ರೀ ಜಗದ್ಗುರುಗಳವರು ಮಾಜಿ ಪ್ರಧಾನಿಗಳಿಗೆ ಏಲಕ್ಕಿ ಹಾರ, ಶಾಲು ಹೊದಿಸಿ, ಹಣ್ಣುಗಳ ಬುಟ್ಟಿಯನ್ನು ನೀಡಿ ಆರೋಗ್ಯ ಪೂರ್ಣರಾಗಿ ಕರುನಾಡಿನ ಧ್ಯೇಯಕ್ಕೆ ಮತ್ತೊಷ್ಟು ಕ್ರೀಯಾಶೀಲರಗಿ ಯುವ ನೇತಾರರಿಗೆ ರಾಜಕೀಯ ಮಾರ್ಗದರ್ಶನ ಆಶೀರ್ವಾದಿಸಿದರು.

1970-80 ರ ದಶಕದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸಾಸಲು ಮತ್ತು ಸಿರಿಗೆರೆಯ ಮಠದಲ್ಲಿ ಹಲವಾರು ಬಾರಿ ಭೇಟಿ ಮಾಡಿ ರಾಜಕೀಯ ಮಾರ್ಗದರ್ಶನ ನೀಡುವಂತೆ ಪ್ರಾರ್ಥಿಸಿದ್ದಾಗಿ, ಶ್ರೀಗಳ ಸಾಮಾಜಿಕ ಕಳಕಳಿಗೆ ಆಗಿನ ತಲೆಮಾರಿನ ರಾಜಕೀಯ ಧುರೀಣರಲ್ಲಿ ಎದುರಾಡುವ ಸಾಮರ್ಥ್ಯ ಇರಲಿಲ್ಲ, ಇದಕ್ಕೆ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಘಟನೆಯೇ ಸಾಕ್ಷಿಯಾಗಿದೆ. ತರಳಬಾಳು ಹುಣ್ಣಿಮೆ ಮಹೋತ್ಸವವು ಭಾವೈಕ್ಯತೆಯ ಸಂಗಮವಾಗಿ ಈ ನಾಡಿಗೆ ಮಾದರಿಯಾದ ಸಮಾರಂಭ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ದೋಷಗಳನ್ನು ಸರಿಪಡಿಸಲು ತಾವು ಶ್ರಮಿಸಿ,ತಮ್ಮ ಮಾರ್ಗದರ್ಶನದಲ್ಲಿ ಹೊರ ತಂದ ಭೂಮಿ ಆನ್ಲೈನ್ ತಂತ್ರಾಂಶವು ಕಂದಾಯ ಇಲಾಖೆಯ ಮೂಲಕ ನೀಡುವ ನೆರೆ,ಬರ ಪರಿಹಾರಕ್ಕೆ ಯಾವುದೇ ಲಂಚರಹಿತವಾಗಿ ರೈತ ಫಲಾನುಭವಿಗಳಿಗೆ ಡಿಬಿಟಿಯ ಮೂಲಕ ಸಹಸ್ರಾರು ಕೋಟಿ ರೂಪಾಯಿಗಳು ತಲುಪುತ್ತಿರುವುದು ದೇಶಕ್ಕೆ ಮಾದರಿಯಾದ ಕಾರ್ಯವಾಗಿದ್ದು, ಕರ್ನಾಟಕದಲ್ಲಿ 2018 ರಲ್ಲಿಯೇ ಈ ಕಾರ್ಯ ಕೈಗೂಡಿದ್ದು ಸ್ಮರಣೀಯವಾದುದೆಂದು ಗೌಡರು ಅಭಿಪ್ರಾಯ ಪಟ್ಟರು.
ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೆಲವು ದಿನಗಳವರೆಗೆ ವಿರಾಮ ನೀಡಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದ ಶ್ರೀ ಜಗದ್ಗುರುಗಳವರು, “ನಿಮ್ಮ ಈ ಹೋರಾಟದ ಕಿಚ್ಚು ದೇಶದ ಯುವ ಪೀಳಿಗೆಗೆ ಸ್ಪೂರ್ತಿಯಾಗುವ ಆಶಯ ನಮ್ಮದಾಗಿದೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ಆಗಮನವು ಸಂತಸ ತಂದಿತ್ತು. ಗೌಡರ ಕುಟುಂಬವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post