ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿರುವ ಮಣ್ಣಿನ ಮಾದರಿಯ ವರದಿ ಬರುವವರೆಗೂ ಶೋಧ ಕಾರ್ಯವನ್ನು ಮಾಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ #Dr. G. Parameshwar ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅನಾಮಿಕ ವ್ಯಕ್ತಿ ತೋರಿಸಿರುವ ಗುಂಡಿಗಳಲ್ಲಿ ಮಣ್ಣನ್ನು ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅದರ ವರದಿ ಬರುವವರೆಗೂ ಶೋಧ ಕಾರ್ಯವನ್ನು ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನಾಮಿಕ ತೋರಿಸಿದ ಎಲ್ಲ ಸ್ಥಳಗಳಲ್ಲಿ ಗುಂಡಿ ಅಗೆದಾಗ ಎರಡು ಕಡೆ ಮಾತ್ರ ಅಸ್ಥಿ ಪಂಜರ ದೊರೆತಿದೆ. ಅದನ್ನು ಎಫ್’ಎಸ್’ಎಲ್’ಗೆ ಕಳುಹಿಸಲಾಗಿದೆ. ಆತ ತೋರಿಸಿದ ಉಳಿದ ಜಾಗಗಳಲ್ಲಿ ಮಣ್ಣು ಸಂಗ್ರಹ ಮಾಡಿ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ.
ದೊರೆತಿರುವ ಅಸ್ಥಿ ಪಂಜರದ ವಿವರ ಬರಬೇಕಿದ್ದು, ಮಣ್ಣಿನ ವರದಿಯೂ ಸಹ ಬರಬೇಕಿದೆ. ಆನಂತರವಷ್ಟೇ ತನಿಖೆ ಆರಂಭವಾಗಿದೆ. ಇಲ್ಲಿಯನವರೆಗೂ ಆಗಿರುವುದು ಕೇವಲ ಹುಡುಕಾಟ. ತನಿಖೆ ವರದಿ ಬಂದ ನಂತರ ಆರಂಭವಾಗಲಿದೆ ಎಂದರು.
ಯಾವ ಕಾನೂನಾತ್ಮಕವಾಗಿ ಅನಾಮಿಕ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಿಲ್ಲ ಎಂಬುದನ್ನು ವಿವರಾತ್ಮಕವಾಗಿ ಗೃಹ ಸಚಿವರು ವಿವರಿಸಿದರು.
ತನಿಖೆ ಗಂಭೀರವಾಗಿ ನಡೆಯುತ್ತಿದ್ದು, ಯಾರz್ದೆÃ ಒತ್ತಡಕ್ಕೆ ಮಣಿಯದೇ, ದಿಕ್ಕ ತಪ್ಪದ ರೀತಿಯಲ್ಲಿ ನಡೆಯುತ್ತಿದೆ. ಮುಕ್ತ ಹಾಗೂ ನ್ಯಾಯಸಮ್ಮತವಾದ ತನಿಖೆ ನಡೆಯುತ್ತಿದೆ ಎಂದರು.
ಅವನು ಇಡೀ ಧರ್ಮಸ್ಥಳ #Dharmasthala ಪೂರ್ಣ ತೋರಿಸಿದರೆ ಅಗೆಯುವುದಿಲ್ಲ. ಆತ ಈಗಾಗಲೇ ತೋರಿಸಿರುವ ಸ್ಥಳಗಳಲ್ಲಿ ಉತ್ಖನನ ಆಗಿದೆ. ಆದರೆ, ಆತ ಮತ್ತೆ ಸ್ಥಳ ತೋರಿಸಿದರೆ ಶೋಧ ಕಾರ್ಯ ನಡೆಸಬೇಕೇ ಅಥವಾ ಬೇಡವೇ ಎಂಬುದನ್ನು ಎಸ್’ಐಟಿ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಈ ವಿಚಾರದಲ್ಲಿ ಎಸ್’ಐಟಿ ಅಧಿಕಾರಿಗಳಿಗೆ ಸ್ವಾತಂತ್ರ ನೀಡಲಾಗಿದೆ ಎಂದರು.
ಈಗ ರವಾನೆ ಮಾಡಲಾಗಿರುವ ಮಣ್ಣಿನ ಮಾದರಿಯ ವರದಿ ತನಿಖಾ ತಂಡಕ್ಕೆ ತಲುಪುವವರೆಗೂ ಮತ್ತೆ ಶೋಧ ಕಾರ್ಯ ನಡೆಸುವುದಿಲ್ಲ ಎಂದರು.
ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯ ಕೋಟ್ಯಂತರ ಜನರ ನಂಬಿಕೆಯ ಕ್ಷೇತ್ರವಾಗಿದೆ. ಇದನ್ನು ಅಷ್ಟೇ ಸೂಕ್ಷ್ಮವಾಗಿ ತನಿಖೆ ಮಾಡಬೇಕು. ಹೀಗಾಗಿ, ಈ ವಿಚಾರದಲ್ಲಿ ತನಿಖೆ ಆಗುವವರೆಗೂ ಮಾದ್ಯಮ ಹಾಗೂ ಜನರು ಸಂಯಮ ಹಾಗೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.
ತನಿಖೆ ವರದಿ ಬರುವವರೆಗೂ ಕಾಯಬೇಕಿದೆ. ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ, ಯಾರನ್ನೂ ಸಹ ದೂಷಿಸುವುದಿಲ್ಲ. ಮಧ್ಯಂತರ ವರದಿಯೂ ಸಹ ನಮ್ಮ ಕೈ ಸೇರಿಲ್ಲ. ಹೀಗಾಗಿ, ಪ್ರತಿಪಕ್ಷ ಸಹಕಾರ ನೀಡಬೇಕು ಎಂದರು.
ಆರಂಭದಲ್ಲಿ ಅನಾಮಿಕ ವ್ಯಕ್ತಿ ನೀಡಿದ್ದ ದೂರಿನ ವಿವರವನ್ನು ಗೃಹಸಚಿವರು ಸದನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದರು.
ಆನಂತರ ಎಫ್’ಐಆರ್ ದಾಖಲಿಸಿ, ದಾಖಲೆ ಸಂಗ್ರಹಿಸಿ, ತನಿಖೆ ಆರಂಭಿಸಲಾಯಿತು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, 164 ಅಥವಾ 183 ಬಿಎನ್’ಎಸ್ ಅಡಿ ಹೇಳಿಕೆ ದಾಖಲಿಸಿ, ನ್ಯಾಯಾಧೀಶರ ಆದೇಶದಂತೆ ತನಿಖೆ ಆರಂಭಿಸಲಾಯಿತು.
ಈ ನಡುವೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post