No Result
View All Result
Yogada Satsang Society brings out Kannada version on Kriya Yoga today
English Articles

Yogada Satsang Society brings out Kannada version on Kriya Yoga today

by ಕಲ್ಪ ನ್ಯೂಸ್
March 25, 2026
0

Kalpa Media House  |  Dharwad  | Yogada Satsang Society of India has brought out the Kannada version of Kriya Yoga...

Read moreDetails
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
  • Advertise With Us
  • Grievances
  • About Us
  • Contact Us
Wednesday, March 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಡಾ. ಸತ್ಯವತಿಯವರ ಸಾಹಿತ್ಯದ ಸೊಬಗು ಸಹೃದಯರ ಮನಸ್ಸು ಮುಟ್ಟುತ್ತದೆ: ಡಾ. ನಾ. ಗೀತಾಚಾರ್ಯ

ಡಾ. ಎಚ್. ಎ. ಸತ್ಯವತಿ ರವರ 'ದಾಸ ದೀಪ್ತಿ' ಕೃತಿ ಲೋಕಾರ್ಪಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 16, 2023
in ಬೆಂಗಳೂರು ನಗರ
0
ಡಾ. ಸತ್ಯವತಿಯವರ ಸಾಹಿತ್ಯದ ಸೊಬಗು ಸಹೃದಯರ ಮನಸ್ಸು ಮುಟ್ಟುತ್ತದೆ: ಡಾ. ನಾ. ಗೀತಾಚಾರ್ಯ
Share on FacebookShare on TwitterShare on WhatsApp
ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |
ದಾಸಸಾಹಿತ್ಯದ ದಾರಿಯಲ್ಲಿ ಭಾವಾರ್ಥ, ಕಾವ್ಯಾರ್ಥ, ಸೂಚ್ಯಾರ್ಥಗಳನ್ನು ಪ್ರಮಾಣದ ಒರೆಗಲ್ಲಿಗೆ ಹಚ್ಚಿ ಅಲ್ಲಿ ಮೂಡುವ ಬೆಳಕಿನ ಸ್ಪಷ್ಟ ದಾರಿಯಲ್ಲಿ ತಮ್ಮ ಲೇಖನಗಳನ್ನು ಒಡಮೂಡಿಸುವ ಡಾ. ಸತ್ಯವತಿಯವರ ಸಾಹಿತ್ಯದ ಸೊಬಗು ಸಹೃದಯರ ಮನಸ್ಸನ್ನು ಮುಟ್ಟುತ್ತದೆ ಎಂದು ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಾ. ಗೀತಾಚಾರ್ಯ ಅಭಿಪ್ರಾಯಪಟ್ಟರು.
ಬೆಂಗಳೂರಿನ ಹನುಮಂತನಗರದ ಬಾಲಾಜಿ ಕಾಲೇಜಿನಲ್ಲಿ ನಡೆದ ಡಾ.ಎಚ್.ಎ.ಸತ್ಯವತಿ ರವರ ಕೃತಿ ದಾಸ ದೀಪ್ತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾಸಸಾಹಿತ್ಯದ ವಿಚಾರ ವೈಶಿಷ್ಟ್ಯ- ವಿಸ್ಮಯಗಳನ್ನು  ಪ್ರತಿಭಾನ್ವಿತ ಸಾಹಿತಿ, ಇತಿಹಾಸದ, ಶಾಸನಗಳ, ಪ್ರಾಚೀನ ಹಸ್ತಪ್ರತಿಗಳ ದಾಖಲೆಗಳನ್ನು ಪದರ ಪದರ ಬಿಡಿಸಿಟ್ಟು ತಮ್ಮ ಎಲ್ಲ ಬರಹಗಳನ್ನು ಅಧಿಕೃತ ಹಾಗೂ ಮೌಲಿಕ ಮಾಡಬಲ್ಲ ಜಾಣ್ಮೆ. ಸಾಮಾನ್ಯವಾಗಿ ಭಕ್ತಿ, ಮಹಿಮೆ, ಲೀಲೆಗಳಲ್ಲೇ ಮುಳುಗಬಹುದಾದ ವಿಷಯಗಳನ್ನು ಸಹ ವಾಸ್ತವಿಕ ನೆಲೆಗಟ್ಟಿನ ಮೇಲೆ, ಆಧಾರಗಳ ಅಡಿಯಲ್ಲಿ ಸಾಂದ್ರ ನಿರೂಪಣೆಯ ಪುಸ್ತಕವನ್ನಾಗಿ ಮಾಡಿದ್ದಾರೆ ಎಂದರು.
ಸಂಸ್ಕೃತ ಪ್ರಾಧ್ಯಾಪಕ ಡಾ. ವಾದಿರಾಜ ಹೋತ್ರಿ ಮಾತನಾಡಿ, ಸತ್ಯವತಿಯವರ ಈ ಪುಸ್ತಕದ ಲೇಖನಗಳು ಶಿಸ್ತೀಯ ಹಾಗೂ ಶಾಸ್ತ್ರೀಯ ಗುಣಮಟ್ಟದಿಂದ ಕೂಡಿವೆ. ಒಂದೊಂದು ಲೇಖನವನ್ನು ಓದಿದಾಗಲೂ ಹೊಮ್ಮುವ ಪರಿಮಳಭಾವ, ದಾಸಸಾಹಿತ್ಯವನ್ನು ಪೂರ್ಣ ಆಸ್ವಾದಿಸಬೇಕೆಂಬ ಹಂಬಲದತ್ತ ತಂದು ನಿಲ್ಲಿಸುತ್ತದೆ. ದಾಸಸಾಹಿತ್ಯ ಕ್ಷೇತ್ರದಲ್ಲಿ ಮೂರು ದಶಕಗಳಿಂದಲೂ ಅಧ್ಯಯನ, ವಿಶ್ಲೇಷಣೆ ಹಾಗೂ ಪೃಥಕ್ಕರಣಗಳಲ್ಲಿ ತೊಡಗಿಕೊಂಡು, ಸಂಶೋಧನಾ ಮಾರ್ಗದಲ್ಲಿ ಹಲವಾರು ಅಮೂಲ್ಯ ಲೇಖನಗಳನ್ನು ನೀಡಿರುವ ಡಾ. ಸತ್ಯವತಿ ಅಭಿನಂದನೀಯರು ಎಂದು ತಿಳಿಸಿದರು.
ಡಾ. ಆರ್. ವಾದಿರಾಜು ಮಾತನಾಡಿ, ಹನ್ನೊಂದು ತಿಂಗಳ ಮಗುವಾಗಿದ್ದಾಗಲೇ ಪೋಲಿಯೋ ಜ್ವರಕ್ಕೆ ಬಲಿಯಾಗಿ, ಎರಡೂ ಕಾಲುಗಳು ಶಕ್ತಿಗುಂದಿ, ನಡೆಯುವ ಶಕ್ತಿಯನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಕಳೆದುಕೊಳ್ಳಲಿಲ್ಲ .ಬದಲಾಗಿ  ದೈವಕ್ಕೆ ಶರಣಾಗಿ, ಭಕ್ತಿಯ ಮಾರ್ಗದಲ್ಲಿ  ನಡೆಯುತ್ತಿರುವ ಡಾ  ಸತ್ಯವತಿಯವರ ಈ ಕೃತಿ ಶೈಕ್ಷಣಿಕ ಗಾಂಭೀರ್ಯವನ್ನು ಕಂಡುಕೊಂಡಿದೆ, ಈ ಪುಸ್ತಕದುದ್ದಕ್ಕೂ ನಾವು ನೋಡಬಹುದಾದ ದೇಸೀ ದೃಷ್ಟಿಕೋನ ಹಾಗೂ ಭಾಷಾಪ್ರೌಢಿಮೆ ಯಿಂದಾಗಿ ಇದಕ್ಕೊಂದು ಅಕಡೆಮಿಕ್ ಘನತೆ ಒದಗಿ ಬಂದಿದೆ ಎಂದು ತಿಳಿಸಿದರು.
ಪ್ರೊ ಸಿದ್ದಾನಂದ ಮಾತನಾಡಿ, ಡಾ. ಸತ್ಯವತಿ. ಮೂರು ದಶಕಗಳಿಗೂ ಮೀರಿ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ. ಸಾರ್ಥಕ ಸಮರ್ಥ ಸಾಹಿತಿಗಳಾಗಿ, ಸಂಘಟನಾ ಚತುರರಾಗಿ ಡಾ. ಸತ್ಯವತಿ ಪಡೆದಿರುವ ಅನುಭವ, ನೀಡಿರುವ ಕೊಡುಗೆ ಅನುಪಮವಾದುದು. ಕನ್ನಡ ಸಾಹಿತ್ಯ ಚರಿತ್ರೆಯ ರೂಪಶಿಲ್ಪಿ, ಮೇರು ವಿದ್ವಾಂಸ ಡಾ. ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ ಡಾ. ಸತ್ಯವತಿ ಅವರು ಚೌಂಡರಸನ ಬಗ್ಗೆ ಮಾಡಿರುವ ಸಂಶೋಧನಾ ಸಂಪ್ರಬಂಧ ಇಂದಿಗೂ ಮೌಲಿಕ ಹಾಗೂ ಮಹತ್ವದ ಡಾಕ್ಟರೇಟ್ ಪ್ರಬಂಧಗಳಲ್ಲಿ ಒಂದೆಂದು ಪರಿಗಣಿತವಾಗಿದೆ ಎಂದರು.

ಹಂಪಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ, ರಾಜ್ಯಮಟ್ಟದ ಅನೇಕ ಸಾಹಿತ್ಯಿಕ ವಿಚಾರ ಸಂಕಿರಣಗಳು ಹಾಗೂ ವಿದ್ಯಾರ್ಥಿ ಕವಿಗೋಷ್ಠಿಗಳ ಆಯೋಜನೆ, ಆಧುನಿಕ ಮನಸ್ಸುಗಳಿಗೆ ಮುಟ್ಟಬಲ್ಲ, ತಟ್ಟಬಲ್ಲ ಸಂವೇದನಾ ಬರಹದಿಂದಾಗಿ ಡಾ.ಸತ್ಯವತಿ ಸಮಕಾಲೀನ ದಾಸಸಾಹಿತ್ಯ ಸಂದರ್ಭದಲ್ಲಿ ಮಹತ್ವದ ಲೇಖಕಿಯೆನಿಸಿದ್ದಾರೆ ಎಂದು ತಿಳಿಸಿದರು.

ಸಂಸ್ಕೃತ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಉಮೇಶ್ ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.

ಕೃತಿ ಕುರಿತು: 
‘ದಾಸದೀಪ್ತಿ’  ಈ ಕೃತಿ ಡಾ. ಸತ್ಯವತಿ ಅವರ ದಾಸಚಿಂತನೆಯ ಘನ ವಿಚಾರಗಳ ಸಂಶೋಧನಾ ಫಲಶೃತಿಯಾಗಿ ಪ್ರಕಟವಾಗಿದೆ. ವಿಠಲ, ಪುಂಡಲೀಕ, ಚಂದ್ರಭಾಗಾನದಿ ಕುರಿತ ಇಲ್ಲಿನ ಲೇಖನಗಳು, ದಾಸ ಪರಂಪರೆಯ ಮೇಲೆ ವಿಠಲ ಹೇಗೆ ಅದ್ಭುತ ಛಾಪು ಮೂಡಿಸಿದ ಎನ್ನುವ ವಿಚಾರವನ್ನು ಬಿಚ್ಚಿಡುತ್ತಲೇ, ವಿಠಲ ಶಬ್ಧದ ವ್ಯಾಪ್ತಿ, ಹರಹು, ವಿಗ್ರಹ ವೈಶಿಷ್ಟ್ಯ, ವಿಠಲ ಪರಂಪರೆ, ಸಾಹಿತ್ಯ ತೋಟದಲ್ಲಿ ಅರಳಿದ ವಿಠಲ,’ ತುತ್ತಿನ ಅನ್ನದ, ಮಜ್ಜಿಗೆ ಹಿಟ್ಟಿ’ನ ವಿಠೋಬಾ ಹೇಗಾದ ಎನ್ನುವ ಸ್ವಾರಸ್ಯ ವಿವರಗಳಲ್ಲಿ ಅರ್ಥಪೂರ್ಣವಾಗಿ ಪಲ್ಲವಿಸಿದೆ. ಪುರಂದರರ ಹಾಡುಗಳಲ್ಲಿ ಬರುವ ‘ಪ್ರಾಣಿ ‘ ಗಳ ಪ್ರತಿಮೆ ಹಾಗೂ ಕನಕದಾಸರ ಕೀರ್ತನೆಗಳಲ್ಲಿ ಬರುವ ‘ ಆಹಾರ’ ಪರಿಕಲ್ಪನೆ ತುಂಬಾ ಸ್ವಾದಿಷ್ಟವಾಗಿದ್ದು , ಸ್ವಾರಸ್ಯಕರ ವಿಚಾರಗಳನ್ನು ಹೊರಹೊಮ್ಮಿಸುತ್ತವೆ. ಅತಿಮುಖ್ಯವಾಗಿ ‘ದಾಸಸಾಹಿತ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯ’ ಲೇಖನವು ಇಡೀ ಸಮುದಾಯದ ಆರೋಗ್ಯಕ್ಕೆ ಅಗತ್ಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಬೆಂಗಳೂರು
Share196Tweet123Send
Previous Post

ಕರ್ನಾಟಕ ಬಜೆಟ್‌ 2023-24: ಚುನಾವಣೆಗೆ ಬೊಮ್ಮಾಯಿ ಸರಕಾರದ ಗೆಲುವಿನ ದಾಳ?

Next Post

ಅನ್ನದಾತರಿಗೆ ಬಂಪರ್: ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ ಘೋಷಿಸಿದ ಸಿಎಂ ಬೊಮ್ಮಾಯಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅನ್ನದಾತರಿಗೆ ಬಂಪರ್: ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ ಘೋಷಿಸಿದ ಸಿಎಂ ಬೊಮ್ಮಾಯಿ

ಅನ್ನದಾತರಿಗೆ ಬಂಪರ್: ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ ಘೋಷಿಸಿದ ಸಿಎಂ ಬೊಮ್ಮಾಯಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯ | ಮೃದಂಗ ವಿದ್ವಾಂಸ ವಾಸುದೇವರಾವ್ ಅಭಿಮತ

ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯ | ಮೃದಂಗ ವಿದ್ವಾಂಸ ವಾಸುದೇವರಾವ್ ಅಭಿಮತ

March 25, 2026
ಮೂಡುಬಿದಿರೆಯ ನ್ಯೂ ವೈಬ್ರೆಂಟ್ – ಅರಬಿಂದೋ ಪಿಯು ಕಾಲೇಜು ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ

ಮೂಡುಬಿದಿರೆಯ ನ್ಯೂ ವೈಬ್ರೆಂಟ್ – ಅರಬಿಂದೋ ಪಿಯು ಕಾಲೇಜು ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ

March 25, 2026
ಮಾ.26 | ಸಿಎ ವಿದ್ಯಾರ್ಥಿಗಳಿಗಾಗಿ ಐಸಿಎಐ ರೀಡಿಂಗ್ ರೂಂ ಲೋಕಾರ್ಪಣೆ

ಮಾ.26 | ಸಿಎ ವಿದ್ಯಾರ್ಥಿಗಳಿಗಾಗಿ ಐಸಿಎಐ ರೀಡಿಂಗ್ ರೂಂ ಲೋಕಾರ್ಪಣೆ

March 25, 2026
ಮಾ.26ರಂದು ಶಿವ ಸಂಕಲ್ಪ ಮಹಿಳಾ ಘಟಕದ ಉದ್ಘಾಟನೆ | ರಾಣಿ ಚೆನ್ನಮ್ಮಾಜಿ ಸ್ಮರಣೋತ್ಸವ

ಮಾ.26ರಂದು ಶಿವ ಸಂಕಲ್ಪ ಮಹಿಳಾ ಘಟಕದ ಉದ್ಘಾಟನೆ | ರಾಣಿ ಚೆನ್ನಮ್ಮಾಜಿ ಸ್ಮರಣೋತ್ಸವ

March 25, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಗುಡ್ ನ್ಯೂಸ್ | ಮಂಗಳೂರು-ಸೂರತ್ ವಿಶೇಷ ರೈಲು ಸೇವೆ ಖಾಯಂ: ರೈಲ್ವೆ ಇಲಾಖೆ ಆದೇಶ

March 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL