ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗಂಡ ಹೆಂಡತಿ ತಮ್ಮ ಮನೆಯ ಕೊಠಡಿಯಲ್ಲಿ ಕಿಟಕಿಯೂ ಸಹ ಹಾಕದೇ ಸರಸ ಸಲ್ಲಾಪ Case file for Couple Romance ಮಾಡುತ್ತಿರುವುದು ನಮಗೆ ಕಿರಿಕಿರಿ ಆಗಿದೆ ಎಂದು ಪಕ್ಕದ ಮನೆ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಎಫ್’ಐಆರ್ ಸಹ ದಾಖಲಾದ ವಿಚಿತ್ರ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಗಿರಿನಗರ ಪೊಲೀಸ್ ಠಾಣೆಯಲ್ಲಿ Giri Nagar Police Station, Bangalore ಈ ವಿಚಿತ್ರ ದೂರು ದಾಖಲಾಗಿದ್ದು, ಪೊಲೀಸರು ಎಫ್’ಐಆರ್ ಸಹ ದಾಖಲಿಸಿಕೊಂಡಿದ್ದಾರೆ. ಆವಲಹಳ್ಳಿಯ 44 ವರ್ಷದ ಮಹಿಳೆಯೊಬ್ಬರು ಈ ದೂರನ್ನು ನೀಡಿದ್ದಾರೆ.
ಏನಿದು ವಿಚಿತ್ರ ಪ್ರಕರಣ?
ದೂರು ನೀಡಿರುವ ಮಹಿಳೆ ವಾಸವಿರುವ ಪಕ್ಕದ ಮನೆಯಲ್ಲಿ ದಂಪತಿ ವಾಸವಿದ್ದಾರೆ. ಮಹಿಳೆ ಇದ್ದ ಮನೆ ಬಾಗಿಲಿಗೆ ಪಕ್ಕದ ಮನೆ ಬೆಡ್ ರೂಂ ಇದೆ. ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ಮಾಡುವುದು ತಮಗೆ ವಿಪರೀತ ವಿಪರೀತ ಕಿರಿಕಿರಿಯಾಗಿದೆ ಎಂದು ದೂರಿದ್ದಾರೆ.
Also read: ಬೆಂಗಳೂರು | ಮೆಟ್ರೋ ರೈಲು ಕೆಳಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ | ಶವ ತೆಗೆಯಲು ಹರಸಾಹಸ
ಮಹಿಳೆ. ಅಷ್ಟು ಮಾತ್ರವಲ್ಲ ಮನೆಯ ಕಿಟಕಿ ಬಾಗಿಲು ತೆರೆದಿಟ್ಟು ವಿಕೃತ ವರ್ತನೆ ಮಾಡಿರುವ ಆರೋಪವನ್ನು ಸಹ ಮಾಡಲಾಗಿದೆ. ಆರಂಭದಲ್ಲಿ ದಂಪತಿ ವರ್ತನೆಯಿಂದ ಕಿರಿಕಿರಿ ಅನುಭವಿಸಿದ ಮಹಿಳೆ ಕಿಟಕಿ ಬಾಗಿಲು ಹಾಕಿಕೊಳ್ಳುವಂತೆ ಹೇಳಿದ್ದಾರೆ. ಆದರೆ, ತನ್ನ ಮೇಲೆಯೇ ದಂಪತಿ ಬೆದರಿಕೆ ಹಾಕಿದ್ದು, ಇನ್ನೊಮ್ಮೆ ತಮ್ಮ ವಿಚಾರಕ್ಕೆ ಬಂದರೆ ಅತ್ಯಾಚಾರ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ದಂಪತಿಗೆ ಮನೆ ಮಾಲೀಕ ಸಹ ಸಾಥ್ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆತನನ್ನೂ ಸಹ ಒಳಗೊಂಡಂತೆ ದೂರು ದಾಖಲಾಗಿದೆ.
ದೂರು ಸ್ವೀಕರಿಸಿದ ಪೊಲೀಸರು ಐಪಿಸಿ ಸೆಕ್ಷನ್ 504, 506, 509, 34ರ ಅಡಿ ಎಫ್’ಐಆರ್ ದಾಖಲಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post