ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಮೊದಲ ಬಾರಿಗೆ ಪ್ರಕರಣ ದಾಖಲಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಬೆಂಗಳೂರಿನ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆಯೊಂದು ನಡೆದಿದ್ದು, ಪ್ರೀತಿ ಮಾಡಿದ ಮೇಲೆ ಮದುವೆಯಾಗಬೇಕಾದರೆ ಮತಾಂತರ ಆಗಲೇಬೇಕೆಂದು ಯುವತಿಯನ್ನುಬಲವಂತವಾಗಿ ಮತಾಂತರ ಮಾಡಿದ್ದವನ ವಿರುದ್ಧ ಪ್ರಕರಣ ದಾಖಲಾಗಿದೆ.
ಸೈಯದ್ ಮೋಹಿನ್(24) ಎಂಬಾತನೇ ಈ ಕಾಯ್ದೆಯಡಿಯ ಮೊದಲ ಆರೋಪಿಯಾಗಿದ್ದಾನೆ.

ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ 15 ವರ್ಷಗಳಿಂದ ಕುಟುಂಬವೊಂದು ವಾಸವಿದೆ. ಈ ಕುಟುಂಬದ ಯುವತಿ ಇದೇ ಬಡಾವಣೆಯಲ್ಲಿರುವ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಪ್ರತಿಯಾದ ಮೇಲೆ ನಿನ್ನನ್ನು ಮದುವೆಯಾಗಬೇಕಾದರೆ ಮತಾಂತರ ಆಗಬೇಕು ಎಂದು ಒತ್ತಡ ಹೇರಿದ್ದಾನೆ. ಇದಕ್ಕೆ ಮಣಿದ ಯುವತಿ ಮತಾಂತರವೂ ಸಹ ಆಗಿದ್ದಾಳೆ.
Also read: ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿ ಮಟನ್ ಶಾಪ್’ನಲ್ಲಿ ಅನುಮಾನಾಸ್ಪದವಾಗಿ ಸಾವು
ಆದರೆ, ಆನಂತರ ಯುವತಿ ಕಾಣೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಪೋಷಕರು ದೂರು ನೀಡಿದ್ದರು. ಯುವತಿಯನ್ನು ಪತ್ತೆಹಚ್ಚಿ ಕರೆತರುವಾಗ ಆಕೆ ಬುರ್ಕಾ ಧರಿಸಿದ್ದನ್ನು ಕಂಡು ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕವೇ ಯಶವಂತಪುರ ಠಾಣೆ ವ್ಯಾಪ್ತಿಯ ಮಸೀದಿಗೆ ಕರೆದೊಯ್ದು ಮತಾಂತರ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಮತಾಂತರ ನಿಷೇಧ ಕಾಯ್ದೆ ಸೆಕ್ಷನ್ 5ರ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.











Discussion about this post