ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೀನು ಮನೆಗೆ ವಾಪಾಸ್ ಬರದೇ ಇದ್ದರೆ ನಾನು ಸಾಯ್ತೀನಿ ಸಾಯ್ತೀನಿ ಎಂದು ದೂರವಾದ ಪತ್ನಿಗೆ ವೀಡಿಯೋ ಕಾಲ್’ನಲ್ಲಿ ಹೆದರಿಸಲು ಮುಂದಾಗಿದ್ದ ಪತಿಯೊಬ್ಬ ಅಕಸ್ಮಾತಾಗಿ ನಿಜಕ್ಕೂ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿಯ ಬಾಗಲಗುಂಟೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಬಿಹಾರ ಮೂಲದ ಅಮಿತ್(28) ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಬಿಹಾರ ಮೂಲದ ಅಮಿತ್ 10 ವರ್ಷದ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಈತ ವಾಸವಿದ್ದ ನಿವಾಸದ ಸಮೀಪವೇ ವಾಸವಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ, ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು.
Also read: ಮೇ 18-20 ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ | ದಕ್ಷಿಣದ ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಆದರೆ ಪತ್ನಿ ಇತ್ತೀಚೆಗೆ ನರ್ಸಿಂಗ್ ಕೋರ್ಸ್’ಗೆ ಸೇರಿದ್ದು, ಪತಿಗೆ ಹೆಚ್ಚಿನ ಸಮಯ ನೀಡುತ್ತಿರಲಿಲ್ಲ ಎಂದು ಪತಿ ಹಲವು ಬಾರಿ ತನ್ನ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದನು ಎನ್ನಲಾಗಿದೆ.
ಪತ್ನಿ ಸದಾ ಫೋನ್ ಕರೆಯಲ್ಲಿ ಇರುತ್ತಿದ್ದು, ಇದರಿಂದಲೇ ಗಂಡ ಹೆಂಡತಿ ಮಧ್ಯೆ ವಿರಸ ಏರ್ಪಟ್ಟಿದೆ. ಹೀಗಾಗಿ ಪತ್ನಿ ಪತಿಯನ್ನು ಬಿಟ್ಟು ದೂರ ವಾಸ ಮಾಡುತ್ತಿದ್ದಳು ಎನ್ನಲಾಗಿದೆ.
ದೂರವಾದ ಪತ್ನಿಯನ್ನು ಮನೆಗೆ ಮರಳಿ ಬರುವಂತೆ ಪದೇ ಪದೇ ಕರೆ ಮಾಡಿ ಮನವಿ ಮಾಡುತ್ತಿದ್ದ. ಆದರೆ ಆಕೆ ಮರಳಿ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಅಮಿತ್ ತನ್ನ ಪತ್ನಿಗೆ ಆತ್ಮಹತ್ಯೆ ಮಾಡುಕೊಳ್ಳುವೆ ಎಂದು ಹೆದರಿಸಲು ಮುಂದಾಗಿದ್ದಾನೆ. ಬಳಿಕ ವೀಡಿಯೋ ಕಾಲ್ ಮಾಡಿ ನೇಣು ಹಾಕಿಕೊಳ್ಳುವಂತೆ ಮಾಡಲು ಹೋಗಿದ್ದಾನೆ. ಆದರೆ ಕುಣಿಕೆ ನಿಜವಾಗಿಯೂ ಬಿಗಿಯಾಗಿದ್ದು, ಸಾವಿನ ನಾಟಕ ನಿಜವಾಗಿ ಹೋಗಿ, ಆತ ಸಾವನ್ನಪ್ಪಿದ್ದಾನೆ.
ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post