ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ) ಕಡ್ಡಾಯಗೊಳಿಸಿರುವುದರಿಂದ, ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕೋದ್ಯಮಕ್ಕೆ ಹೊಸ ಸಮಸ್ಯೆ ಶುರುವಾಗಿದೆ. ವಿದ್ಯುತ್ ವಿತರಣಾ ಕಂಪನಿಗಳು (ಬೆಸ್ಕಾಂ ಎಸ್ಕಾಂ ಇತರೆ) ವಿದ್ಯುತ್ ಸಂಪರ್ಕ ನೀಡುವುದಕ್ಕೆ ನಿರಾಕರಿಸುತ್ತಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಆದೇಶವು ಕಟ್ಟಡ ಮಾಲಿಕರ ಜೊತೆಗೆ ಇಂಧನ ಇಲಾಖೆಗೂ ಸಂಕಷ್ಟ ತಂದೊಡ್ಡಿದೆ. ಓಸಿ ಕಡ್ಡಾಯದಿಂದ 2 ಲಕ್ಷಕ್ಕೂ ಹೆಚ್ಚು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದು ಮಂಗಳವಾರ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ 3 ಲಕ್ಷಕ್ಕೂ ಅಧಿಕ ಜನರು ಮನೆ/ಕಟ್ಟಡ ನಿರ್ಮಾಣ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರವೇ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಜವಬ್ದಾರಿ ಹೊಂದಿದ್ದು, ಈಗಿನ ಕಾಲಘಟ್ಟದಲ್ಲಿ ವಿದ್ಯುತ್ ಸೌಲಭ್ಯವೂ ಗಾಳಿ-ಬೆಳಕಿನಷ್ಟೆ ಅತ್ಯಗತ್ಯವಾದ ಮೂಲಭೂತ ಅವಶ್ಯಕತೆಯಾಗಿದೆ.
ಬಡವರು-ಜನಸಾಮನ್ಯರು ತಮ್ಮ ಸಾಮರ್ಥ್ಯಕ್ಕಾನುಗುಣವಾಗಿ ತಮ್ಮ ಬಿ-ಖಾತೆ ನಿವೇಶನಗಳಲ್ಲಿ ನಿರ್ಮಿಸಿಕೊಂಡಿರುವ ಸಣ್ಣ ಮನೆಗಳಿಗೂ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದೆ ಇರುವುದು, ದುರಂತವೇ ಸರಿ. ಸದರಿ ಆದೇಶಕ್ಕೂ ಮುನ್ನ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಆದೇಶ ಹೊರಡಿಸುವುದು ಹಾಗೂ ದೊಡ್ಡ-ದೊಡ್ಡ ಬೃಹತ್ ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡ ಹೊರತು ಪಡಿಸಿ ಇನ್ನಿತರ ಕಟ್ಟಡಗಳಿಗೆ ಯಾವುದೇ ಅಡೆತಡೆಗಳಿಗಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈ ಕೂಡಲೇ ಸೂಕ್ತ ವ್ಯವಸ್ಥೆ ಮಾಡುವುದು, ಅಗತ್ಯವಿದ್ದಲ್ಲಿ ನ್ಯಾಷನಲ್ ಬಿಲ್ಡಿಂಗ್ ಕೋಡ್ 2016ರ ಆದೇಶಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ದಿ:25-06-25ರಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದ್ದು ಈ ನಿರ್ದೇಶನದಲ್ಲಿ Hence, buildings and matters like norms for Floor Area Ratio/Floor Space Index, set back, ground coverage, parking, green area, fire regulation etc. as well as other aspects covered in National building Code are within the exculsive legislative and executive jurisdiction of the states. ಎಂದು ತಿಳಿಸಿರುವಂತೆ ಪ್ರಸ್ತುತ ಇರುವ ಕಾಯ್ದೆಗೆ ತಿದ್ದುಪಡಿ ತಂದು ಜನಸಾಮನ್ಯರ ಮತ್ತು ಬಡವರ ಹಿತ ಕಾಪಡುವಂತೆ ಶೂನ್ಯವೇಳೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post