ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂದು ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ H D Kumaraswamy ಡಿಸಿಎಂ ಡಿ.ಕೆ. ಶಿವಕುಮಾರ್ D K Shivakumar ವಿರುದ್ಧ ವಾಗ್ದಾಳಿ ನಡೆಸಿದರು.
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಬಿಜೆಪಿ ಬಿ ಟೀಂ ಎಂದು ಹೇಳುತ್ತಲೇ ಬಂದಿರಿ. ಅಂದು ನಿಮಗೆ ಅಧಿಕಾರ ಬೇಕು ಎಂಬ ಕಾರಣಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದು ಬೇಡಿಕೊಂಡಿದೆ. ಮೈತ್ರಿ ಆದ ನಂತರ ಸರ್ಕಾರಕ್ಕೆ ಹಾಗೂ ನಮಗೆ ಎಷ್ಟು ತೊಂದರೆ ಕೊಟ್ಟಿರಿ. ಅಂದು ನೀವು ಮಾಡಿದ ಕೃತ್ಯವೇ ನಮ್ಮನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿದೆ ಎಂದರು.

Also read: ಹಿಂದಿನ ಕಾಶ್ಮೀರದಂತೆ ಬೆಂಗಳೂರು ಭಾಸವಾಗುತ್ತಿದೆ | ಪ್ರತಿಭಟನಾಕಾರರ ಆಕ್ರೋಶ
ಜೆಡಿಎಸ್-ಬಿಜೆಪಿ ಮೈತ್ರಿ ಆಗುತ್ತದೆ ಎಂಬುದು ನಮಗೆ ಗೊತ್ತಿತ್ತು. ಆದರೆ, ಇಷ್ಟು ಬೇಗ ಆಗುತ್ತದೆ ಎಂಬುದು ಗೊತ್ತಿರಲಿಲ್ಲ ಎಂದಿರುವ ಡಿಕೆಶಿ ಅವರೇ, ಏನಾಗಿದೆ ಈಗ? ನಿಮ್ಮಂತೆ ಕೆಟ್ಟದಾಗಿ ಎಂದು ನನ್ನನ್ನು ಬಿಜೆಪಿ ನಡೆಸಿಕೊಂಡಿಲ್ಲ. ನಿಮ್ಮೊಂದಿಗೆ ಮೈತ್ರಿಯಿದ್ದಾಗಲೇ ನಮ್ಮ ವಿರುದ್ಧ ನೀವು ಏನು ಕುತಂತ್ರ ಮಾಡಿದ್ದೀರಿ ಎಂದು ನಮಗೆ ತಿಳಿದಿದೆ ಎಂದು ಚಾಟಿ ಬೀಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post