ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಪಶುಸಂಗೋಪನೆ ಇಲಾಖೆಯಿಂದ ಎರವಲು ಸೇವೆ ಮೇಲೆ ತರಳಿರುವ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ಹಿಂಪಡೆಯಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಪಶುಸಂಗೋಪನೆ ಇಲಾಖೆಯಿಂದ ಎರವಲು ಸೇವೆ ಮೇಲೆ ತೆರಳಿರುವ ಸಿಬ್ಬಂಧಿಯನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳಿ ಎಂದು ಪತ್ರ ಬರೆದಿದ್ದರು. ಇಲಾಖೆಯ ಅಧಿಕಾರವಹಿಸಿಕೊಂಡ ನಂತರದಲ್ಲಿ ಪಶುಸಂಗೋಪನೆ ಇಲಾಖೆಯಿಂದ ಎರವಲು ಸೇವೆ ಮೇಲೆ ತೆರಳಿರುವ ಬಹುತೇಕ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ಹಿಂಪಡೆಯಲಾಗಿದೆ. ಇಲಾಖೆಯ ಉಪನಿರ್ದೇಶಕರುಗಳ ಸಭೆ ಕರೆದು ಎಲ್ಲ ಅಗತ್ಯ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಜಾರಿಯಾದ ನಂತರ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದ್ದು ಸಿಬ್ಬಂದಿ ಕೊರತೆಯಿಂದ ಜಾನುವಾರುಗಳ ಆರೈಕೆಯಲ್ಲಿ ತೊಂದರೆ ಆಗಬಾರದು ಎಂದು ವಿಧಾನ ಪರಿಷತ್ ಸಭಾಪತಿ ಸಲಹೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದ್ದರಿಂದ ಪಶುಗಳ ಆರೈಕೆಗೆ ಹೆಚ್ಚಿನ ಸಿಬ್ಬಂದಿಗಳ ಆವಶ್ಯಕೆತೆಯಿದ್ದು ಈ ಮೊದಲಿನಿಂದಲು ಇಲಾಖೆಯಲ್ಲಿ ಪಶುವೈದ್ಯರ ಕೊರತೆಯಿದೆ ಇಂತಹ ಸಮಯದಲ್ಲಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಎರವಲು ಸೇವೆ ಮೇಲೆ ಬೇರೆ ಇಲಾಖೆಗೆ ತೆರಳಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಇದೇ ವೇಳೆ ಗೋಹತ್ಯೆ ನಿಷೇಧವನ್ನು ಸಹ ಪರಿಷತ್ತಿನ ಸಭಾಪತಿ ಹೊರಟ್ಟಿ ಶ್ಲಾಘಿಸಿದ್ದಾರೆ.
ಪತ್ರದ ಮೂಲಕ ಪಶುಸಂಗೋಪನೆ ಇಲಾಖೆಯ ಬಗ್ಗೆ ಕಾಳಜಿ ತೋರಿದ ಬಸವರಾಜ್ ಹೊರಟ್ಟಿ ಅವರು ನೀಡಿದ ಸಲಹೆಗಳನ್ನು ಇಲಾಖೆ ಅಭಿವೃದ್ಧಿ ದೃಷ್ಟಿಯಿಂದ ಪರಿಗಣಿಸಿ ಬೇಕಾದ ಎಲ್ಲ ಅಗತ್ಯೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post