ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅನೈತಿಕ ಸಂಬಂಧ ಹೊಂದಿದ್ದ ವಿಚಾರದಲ್ಲಿ ಪ್ರಶ್ನಿಸಿದ ಕಾರಣ ಕೈಹಿಡಿದ ಪತಿಯನ್ನೇ ಪತ್ನಿ ಇರಿದುಕೊಂದಿರುವ ಘೋರ ಘಟನೆ ಬೆಂಗಳೂರಿನ ಹುಳಿಮಾವು ವ್ಯಾಪ್ತಿಯ ಕಾಲೇಜೊಂದರಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಉಮೇಶ್ ದಾಮಿ (27) ಎಂದು ಗುರುತಿಸಲಾಗಿದ್ದು, ಕೊನೆ ಮಾಡಿದ ಈತನ ಪತ್ನಿಯನ್ನು ಮನಿಷಾ ಎಂದು ಹೇಳಲಾಗಿದೆ.
ಇಲ್ಲಿನ ಕಾಲೇಜೊಂದರಲ್ಲಿ ಈ ದಂಪತಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ರಾತ್ರಿ ಉಮೇಶ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿಕೊಂಡು 12 ಗಂಟೆ ವೇಳೆಗೆ ಮನೆಗೆ ತೆರಳಿದ್ದಾನೆ.
Also read: ಕಲಿತ ಶಿಕ್ಷಣವನ್ನು ಸಮಾಜಮುಖಿ ಅನುಷ್ಠಾನಕ್ಕೆ ವ್ಯಯಿಸಿ: ಕುವೆಂಪು ವಿವಿ ಕುಲಪತಿ ವೆಂಕಟೇಶ್ ಕರೆ
ಈತ ಮನೆಗೆ ತೆರಳಿದ ವೇಳೆ ಉಮೇಶ್ ಪತ್ನಿ ಮನಿಷಾ ಫೋನಿನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಅನುಮಾನ ಹಾಗೂ ಕೋಪಗೊಂಡ ಉಮೇಶ್ ಇದನ್ನು ಪ್ರಶ್ನೆ ಮಾಡಿದ್ದಾನೆ.
ಪತಿ ಪ್ರಶ್ನಿಸಿದ್ದರಿಂದ ಕೋಪಗೊಂಡ ಮನಿಷಾ ಚಾಕುವಿನಿಂದ ಉಮೇಶ್’ಗೆ ಇರಿದಿದ್ದಾಳೆ. ಇದರಿಂದ ತೀವ್ರ ರಕ್ತಸ್ರಾವ ಸಂಭವಿಸಿ, ಆತನ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post