ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರೀ ಕುತುಹೂಲ ಕೆರಳಿಸಿದ್ದ ಸಿಎಂ ಬೊಮ್ಮಾಯಿ ನೇತೃತ್ವದ ಮಹತ್ವದ ಸಭೆ ಮುಕ್ತಾಯವಾಗಿದ್ದು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್, ಟಫ್‌ರೂಲ್ಸ್ ಹೇರದೆ ಇರಲು ನಿರ್ಧಾರಕ್ಕೆ ಬರಲಾಗಿದೆ.
ಸಿಎಂ ಸಭೆಯ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಹಾಗೂ ಟಫ್‌ರೂಲ್ಸ್ ಜಾರಿ ಮಾಡುವುದಿಲ್ಲ. ಶುಕ್ರವಾರದವರೆಗೂ ಈಗಿರುವ ನಿಯಮಗಳೇ ಮುಂದುವರೆಯಲಿದ್ದು, ಅಂದು ನಡೆಯಲಿರುವ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಶುಕ್ರವಾರದವರೆಗೂ ಶಾಲಾ-ಕಾಲೇಜುಗಳ ರಜೆ ಮುಂದುವರೆಯಲಿದ್ದು, ಜ.೨೫ರ ವೇಳೆಗೆ ಸೋಂಕು ಹೆಚ್ಚಾಗಬಹುದು ಎನ್ನಲಾಗಿದೆ. ಒಂದು ವೇಳೆ ಸೋಂಕು ಇಳಿಮುಖಗೊಂಡರೆ ತತಕ್ಷಣವೇ ಈಗಿರುವ ನಿಯಮಾವಳಿಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದರು.
ರಾಜ್ಯದ ಜನರ ಆರೋಗ್ಯ ನಮಗೆ ಮುಖ್ಯವಾಗಿದ್ದು, ಕಠಿಣ ನಿಯಮಾವಳಿಗಳಿಂದ ಜನರಿಗೆ ತೊಂದರೆಕೊಡುವುದು ನಮಗೆ ಇಷ್ಟವಿಲ್ಲ. ಹೀಗಾಗಿ ತಜ್ಞರ ವರದಿ ಆಧರಿಸಿ ಶುಕ್ರವಾರ ರಾಜ್ಯದ ಜನತೆಗೆ ಸಿಹಿ ಸುದ್ಧಿ ನೀಡಲು ಪ್ರಯತ್ನಿಸುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post