Read - 2 minutes
ಭೀಷ್ಮ ಕೌರವರ ಪರವಾಗಿ ಸೈನ್ಯದ ನೇತೃತ್ವ ವಹಿಸಲು ಮುಂದಾದಾಗ ಪಾಂಡವರ ತಂಡಕ್ಕೆ ಭಯ ಭೀತಿ ಉಂಟಾಗುತ್ತದೆ. ಆಗ ಕೃಷ್ಣ ಮತ್ತು ಅರ್ಜುನ ಭೀಷ್ಮರ ಬಳಿ ತೆರಳಿ ಧರ್ಮ ಸಂಸ್ಥಾಪನೆಗಾಗಿ ನಿಮ್ಮನ್ನು ಕೊಲ್ಲುವುದು ಅನಿವಾರ್ಯವಾಗಿದೆ ಆ ಮಾರ್ಗವನ್ನು ತಿಳಿಸಲು ಕೇಳಿಕೊಂಡರು. ಆಗ ಭೀಷ್ಮರೆ ಶಿಖಂಡಿಯನ್ನು ಕರೆ ತಂದು ತನ್ನನ್ನು ಸಂಹಾರ ಮಾಡುವಂತೆ ಸಲಹೆ ನೀಡಿದರು. ಈ ರೀತಿಯಲ್ಲಿ ಮಹಾಭಾರತ ಕೃತಿಯಲ್ಲಿ ಸಾಕಷ್ಟು ಧರ್ಮ, ಕಾನೂನೂ, ಸತ್ಯದ ವಿಚಾರವನ್ನು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಕಥೆಯ ರೂಪದಲ್ಲಿ ತಿಳಿ ಹೇಳಲಾಗಿದೆ ಎಂದು ನುಡಿದರು.
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಾಭಾರತದಲ್ಲಿ ಕಾನೂನೂ ಮತ್ತು ನ್ಯಾಯ ಪದ್ಧತಿಗಳ ಬಗ್ಗೆ ಸಾಕಷ್ಟು ಹೇಳಲಾಗಿದೆ. ಕೆಟ್ಟದ್ದು ಎಂದಿಗೂ ಗೆಲ್ಲಲ್ಲು ಸಾಧ್ಯವಿಲ್ಲ ಮತ್ತು ಒಳಿತು ಮಾಡುವವರು ಸಚ್ಚಾರಿತ್ರ್ಯ ಉಳ್ಳವರು ಎಂದಿಗೂ ಸೋಲುವುದಿಲ್ಲ ಎನ್ನುವುದು ಅದರಿಂದ ಸಾಬೀತಾಗಿದೆ. ಆದರೆ ಧರ್ಮದ ಹಾದಿ ಸಾಕಷ್ಟು ಕಷ್ಟ ಕಾರ್ಪಣ್ಯದಿಂದ ಕೂಡಿದೆ ಎಂದು ಪಾಂಡವರನ್ನು ಉಲ್ಲೇಖಿಸಿ ಹೇಳಲಾಗಿದೆ ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ವೆಂಕಟಾಚಲಯ್ಯ ಹೇಳಿದರು.
ನಗರದ ಎನ್.ಆರ್ ಕಾಲನಿಯ ಶ್ರೀರಾಮ ದೇವರ ದೇವಸ್ಥಾನದಲ್ಲಿ ಶ್ರೀಮನ್ ಮಹಾಭಾರತ ವೈಶಿಷ್ಟ್ಯ ಮತ್ತು ಶ್ರೀ ಕಾಳಹಸ್ತೀಶ್ವರ ಶತಕ ಕೃತಿಗಳ ಲೋಕಾರ್ಪಣಾ ಸಮಾರಂಭ ನಡೆಯಿತು. ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ. ಎನ್ ವೆಂಕಟಾಚಲಯ್ಯ ಮಹಾಭಾರತ ತಲೆಮಾರುಗಳ ಕಾಲ ಅನ್ವಯವಾಗುವ ಮಹಾ ಗ್ರಂಥವಾಗಿದೆ. ಸಾಕಷ್ಟು ಕೃತಿಗಳು ಮತ್ತು ವ್ಯಾಖ್ಯಾನ ಗಳು ಬಂದಿವೆ. ಆದರೆ ಈ ಕುರಿತು ತೆಲುಗು ಮೂಲದ ಲೇಖಕ ಉಪ್ಪುಲೂರಿ ಕಾಮೇಶ್ವರ ರಾವ್ ಅವರ ಕೃತಿ ಕೂಡ ಉತ್ಕೃಷ್ಟ ಸಾಹಿತ್ಯದಿಂದ ಕೂಡಿದ್ದು, ವಿಶೇಷವಾಗಿ ಓದುಗರಿಂದ ಸ್ವೀಕರಿಸಲಾಗಿದೆ. ಇದರ ಕನ್ನಡ ಅನುವಾದ ಹೊರಬಂದಿರುವುದು ಸಂತಸದ ಸಂಗತಿಯಾಗಿದೆ. ತೆಲುಗು ಕೃತಿಯಾದ ಶ್ರೀ ಕಾಳಹಸ್ತೀಶ್ವರ ಮಹಿಮೆಯ ಕೃತಿಯ ವ್ಯಾಖ್ಯಾನ ಕೃತಿ ಕೂಡ ಹೊರಬಂದಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ ಎಂದರು.
ವಿಶ್ವದ ಎಲ್ಲ ದೇಶಗಳೂ ಕಾಲ ಕಾಲಕ್ಕೆ ಜ್ಞಾನವನ್ನು ವಿಜ್ಞಾನವನ್ನು ವಿಶ್ವಕ್ಕೆ ಪರಿಚಯಿಸಿದೆ. ಉತ್ತಮ ಉದಾಹರಣೆಯಾಗಿ ನಮ್ಮ ಸಮಕಾಲೀನವಾದ ಗ್ರೀಕರು ಕಲೆ ಸಂಸ್ಕೃತಿಯ ಸಾಕಷ್ಟು ಕೊಡುಗೆಯನ್ನು ನೀಡಿದರು. ಹಾಗೆಯ ವೇದ ವ್ಯಾಸರ ಜನ್ಮದಿಂದ ಮಹಾಭಾರತದ ಆದಿ ಪರ್ವದಲ್ಲಿ ಉಲ್ಲೇಖಿಸಲಾಗಿರುವಂತೆ ವಿಶ್ವಕ್ಕೆ ಸಾಕಷ್ಟು ಜ್ಞಾನದ ಕೊಡುಗೆ ಸಿಕ್ಕಿದೆ ಎಂದು ತಿಳಿಸಿದರು
ತೆಲುಗು ಮೂಲದ ಲೇಖಕ ಉಪ್ಪು ಲೂರಿ ಕಾಮೇಶ್ವರ ರಾವ್ ರ ಕೃತಿಯ ಕನ್ನಡದ ಅನುವಾದ ಮಾಡಿರುವ ಗೃಹಿಣಿ 75 ವರ್ಷದ ಸುನಂದಾ ರಂಗನಾಥ ಸ್ವಾಮಿ ಶ್ರೀಮನ್ ಮಹಾಭಾರತ ವೈಶಿಷ್ಟ್ಯ ಕೃತಿಯನ್ನು ಹೊರತಂದಿರುವುದು ಶ್ಲಾಘನೀಯ ಸಂಗತಿ. ಈ ಕೃತಿ ಲೋಕಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈ ವಯಸ್ಸಿನಲ್ಲೂ ಸುನಂದಾ ಅವರ ಕಾರ್ಯತತ್ಪರತೆ, ಶ್ರಮ ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲದೆ ಇಡೀ ಹಿಂದೂ ಧರ್ಮಕ್ಕೆ ನೂತನ ಚೈತನ್ಯ ತುಂಬಲಿದೆ ಎಂದು ಹೇಳಿದರು.
ಕೃತಿಗಳ ಪರಿಚಯವನ್ನು ಭಾರತ ದರ್ಶನ ಮಾಸಪತ್ರಿಕೆಯ ಸಂಪಾದಕರಾದ ಪ್ರೊ. ಟಿ. ಎನ್ ಪ್ರಭಾಕರ್ ಮತ್ತು ನಿವೃತ್ತ ಉಪನ್ಯಾಸಕ ಕೆ.ಎಸ್. ರಾಮಮೂರ್ತಿ ನೆಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಿ. ಕುಣಿಗಲ್. ಶ್ರೀನಿವಾಸ ಶಾಸ್ತ್ರಿ, ಸಂಸ್ಕೃತ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಕೃತಿಕಾರರಾದ ಸುನಂದಾ ರಂಗನಾಥಸ್ವಾಮಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post