ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಳೆದ ಏಳು ದಶಕಗಳಿಂದ ಸರ್ಕಾರ ಮಂಗನ ಕಾಯಿಲೆಗೆ (ಕೆಎಫ್’ಡಿ) KFD ಸರಿಯಾದ ಓಷಧಿ ಕಂಡು ಹಿಡಿಯದೇ ಅದೆಷ್ಟೋ ಮಲೆನಾಡು ಕರಾವಳಿಯ ಬಡ ಜನರು ಸಾವನ್ನಪ್ಪಿದ್ದಾರೆ. ಕೊರೋನಗಿಂತ Corona ಮಾರಕವಾದ ಈ ಕಾಯಿಲೆಗೆ ಇನ್ನೂ ಓಷಧಿ ಕಂಡು ಹಿಡಿಯದೆ ಇರುವುದು ನಮ್ಮನ್ನ ಆಳುವ ಸರ್ಕಾರಗಳಿಗೆ ಸಾಮನ್ಯ ಜನರ ಮೇಲಿರುವ ಅಸಡ್ಡೆ ಎತ್ತಿ ತೋರುತ್ತದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಪ್ರದಾನ ಸಂಚಾಲಕ ಅನಿಲ್ ಹೊಸಕೊಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮದ ಯುವತಿ ಮಂಗನ ಕಾಯಿಲೆಯಿಂದ ಮೃತ ಪಟ್ಟಿರುವ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಅವರು ಸರ್ಕಾರ ಇಷ್ಟು ವರ್ಷಗಳು ತಾತ್ಕಾಲಿಕ ಓಷಧಿ ನೀಡಿದೆ ಹೊರತು ಸಂಪೂರ್ಣವಾಗಿ ಕಾಯಿಲೆ ಹರಡದೆ ಇರುವ ಬಗ್ಗೆ ಕ್ರಮ ಕೈಗೊಂಡಿಲ್ಲ. ನಗರಗಳಲ್ಲಿ ಏನಾದರೂ ಈ ಕಾಯಿಲೆ ಕಾಣಿಸಿಕೊಂಡಿದ್ದರೆ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಮತ್ತು ಔಷಧಿ ಕಂಪನಿಗಳು ಎದ್ದು ಬಿದ್ದು ಓಡಾಡುತ್ತಿದ್ದವು. ಆದರೆ ಈ ಕಾಯಿಲೆ ಹಳ್ಳಿಗಳಲ್ಲಿ ಆಗುವುದರಿಂದ ವ್ಯಾಪಾರ ಕಡಿಮೆ ಹಾಗಾಗಿ ನಿರ್ಲಕ್ಷ್ಯ ವಹಿಸಲಾಗುತ್ತದೆ ಎಂದು ದೂರಿದರು.
Also read: ಪಾಕಿಸ್ಥಾನದಲ್ಲಿದ್ದಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಸ್
ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ಮಸೀದಿ, ಮಠ, ಮಂದಿರ, ಚರ್ಚ್’ಗಳಿಗೆ ಭೇಟಿ ನೀಡುವ ಬದಲು ಇಂತಹ ಹಳ್ಳಿಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಪ್ರಯತ್ನಿಸಬೇಕು ಇದೆ ಧರ್ಮ ಎಂದರು.
ಈಗಲಾದರೂ ಈ ಕಾಯಿಲೆಯಿಂದ ಹಳ್ಳಿಯ ಜೀವಗಳನ್ನು ಬಲಿ ಪಡೆಯುವ ಮೊದಲು ಸರ್ಕಾರ ಸೂಕ್ತ ಕ್ರಮಕೈಗೊಂಡು ಕಾಯಿಲೆ ವ್ಯಾಪಕವಾಗಿ ಹರಡದಂತೆ ಕ್ರಮವಹಿಸಬೇಕು. ಹಳ್ಳಿಗರದ್ದು ಒಂದು ಜೀವ ಅಂತ ಅನ್ನಿಸುತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ ಹಾಗೂ ಅಪಘಾತವಾದಾಗ ಇನ್ಸುರೆನ್ಸ್ ಹೇಗೆ ಪರಿಹಾರ ಕೊಡುತ್ತೋ ಅದೇ ಮಾದರಿಯಲ್ಲಿ ಈ ಕೂಡಲೇ ಸರ್ಕಾರ ಮೃತಪಟ್ಟ ಯುವತಿಯ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಯಾಕೆಂದರೆ ಇದು ಸರ್ಕಾರದ ನಿರ್ಲಕ್ಷ್ಯದಿಂದ ಅಮಾಯಕ ಯುವತಿ ಬಲಿಯಾಗಿದ್ದಾಳೆ ಎಂದರು.
ಈ ಕಾಯಿಲೆ ಚಿಕ್ಕಮಗಳೂರು ಉಡುಪಿ ಹಳ್ಳಿ ಬಾಗಗಳಲ್ಲಿ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಲೆನಾಡು ಕರಾವಳಿ ಬಾಗದ ಕೃಷಿಕರು ಕಾಡು ಪ್ರಾಣಿ, ಮಂಗಗಳ ಹಾವಳಿಯಿಂದ ಬೇಸತ್ತಿದ್ದಾರೆ. ಇದರ ನಡುವೆ ಈ ಕಾಯಿಲೆ ಬೇರೆ ಜನ ಭಯದಿಂದ ಬದುಕುವ ಸ್ಥಿತಿ ಬಂದಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post