ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ ಎಂದು ಕಮಲ ಪಕ್ಷವನ್ನು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತಂತೆ ಕೆಪಿಸಿಸಿ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ ಎಂದು ಕಿಚಾಯಿಸಿದೆ.
ಬಸವನಗೌಡ ಪಾಟೀಲ್ ಬಾಯಿ ತೆರೆದರೆ ಹೊಲಸು ಮಾತುಗಳು, ಆರ್. ಅಶೋಕ್ ಅವರಿಗೆ ತಾನೇನು ಮಾಡುತ್ತೇನೆ ಎಂಬ ಅರಿವು ಅವರಿಗೇ ಇರುವುದಿಲ್ಲ, ಅಶ್ವತ್ಥ್ ನಾರಾಯಣ ಅವರಿಗೆ ಬರೇ ಗಂಡಸ್ಥನದ ಚಿಂತೆ ಹಾಗೂ ಬಸವರಾಜ ಬೊಮ್ಮಾಯಿ ಪ್ರತಾಪ್ ಸಿಂಹನನ್ನೇ ಎದುರಿಸಲಾಗದವರು ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವೇ ಎಂದು ಕಿಡಿ ಕಾರಿದೆ.
Also read: ಜನಸಾಮಾನ್ಯರಿಗೆ ಬಿಗ್ ಶಾಕ್! ನಾಲ್ಕು ಪಟ್ಟು ಏರಿಕೆಯಾಗಲಿದೆ ಟೊಮೆಟೋ ಬೆಲೆ
ಸಂತೋಷ್ ವಿರುದ್ಧ ಕಿಡಿ
ಇನ್ನೊಂದು ಟ್ವೀಟ್’ನಲ್ಲಿ ಬಿ.ಎಲ್. ಸಂತೋಷ್ ವಿರುದ್ಧವೂ ಸಹ ಕಿಡಿ ಕಾರಲಾಗಿದೆ.
ಬಿಜೆಪಿಯಲ್ಲಿ ಈಗ ಸೋಲಿನ ಆತ್ಮಾವಲೋಕನದ ಹೆಸರಲ್ಲಿ. ಸಂತೋಷ ಕೂಟ ಹಾಗೂ ಬಿಎಸ್’ವೈ ಕೂಟದ ನಡುವೆ ಒಬ್ಬರನ್ನೊಬ್ಬರು ಸೋಲಿಸುವ ಅವಲೋಕನ ನಡೆಯುತ್ತಿದೆ! ಈ ಸೋಲಿನ ಅವಲೋಕನಾ ಸಭೆಗಳಿಗೆ ಜೋಶಿ, ಸಂತೋಷ್ ಅವರುಗಳು ಬಾಗವಹಿಸದೆ, ತಮ್ಮ ಶಿಷ್ಯಪಡೆಯನ್ನು ಮುಂದೆ ಬಿಟ್ಟಿರುವುದೇಕೆ. ಬಿಜೆಪಿಯ ಹೀನಾಯ ಸೋಲಿಗೆ ಅವರಿಬ್ಬರೇ ಕಾರಣರಲ್ಲವೇ, ಅವರೇ ಇಲ್ಲದಿದ್ದರೆ ಹೇಗೆ!?ಎಂದು ಟೀಕಿಸಿದೆ.
ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಕುರ್ಚಿಯ ಮೇಲೆ ಹತ್ತಾರು ಟವೆಲ್ ಗಳು ಬಿದ್ದಿವೆ! ಹುದ್ದೆಯ ಆಸೆಗಾಗಿಯೇ ಪರಸ್ಪರ ಹೊಂದಾಣಿಕೆ ರಾಜಕೀಯದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ಟೀಕಿಸಿದೆ.
ದಲಿತರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಕೂಗೆದ್ದಿದೆ,ಆದರೆ ಇದು ವಿಫಲ ಕೂಗು, ಬಿಜೆಪಿಯ ಗರ್ಭಗುಡಿಗೆ ದಲಿತರಿಗೆ ಪ್ರವೇಶವಿಲ್ಲ. ದಲಿತರಿಗೆ ಉನ್ನತ ಸ್ಥಾನ ನೀಡಿ ಬಿಜೆಪಿ ತನ್ನ ದಲಿತವಿರೋಧಿ ಕೃತ್ಯಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















