ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಲೆನಾಡು ಭಾಗದ ಜನರ ದಶಕಗಳ ಆಶಯ ಇಂದು ಸಾಕಾರಗೊಳ್ಳುತ್ತಿದ್ದು, ಶಿವಮೊಗ್ಗಕ್ಕೆ ಮೊದಲ ವಿಮಾನ ಸಂಚಾರ ಆರಂಭದ ಈ ದಿನ ಜಿಲ್ಲೆಯ ಪಾಲಿಗೆ ಐತಿಹಾಸಿದ ದಿನವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿವಮೊಗ್ಗಕ್ಕೆ Shivamogga Airport ಸಂಚಾರ ಆರಂಭಿಸಲಿರುವ ಇಂಡಿಗೋ Indigo ಮೊದಲ ವಿಮಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿವಮೊಗ್ಗದ ಜನರು ನಮ್ಮೂರಿನಿಂದಲೇ ವಿಮಾನ ಹಾರಾಡಬೇಕು ಎಂಬ ಕನಸನ್ನು ದಶಕಗಳಿಂದ ಹೊಂದಿದ್ದರು. ಇದ್ಕಕಾಗಿ ರಾಜ್ಯ ಬಿಜೆಪಿ ಸರ್ಕಾರ ಬಹಳಷ್ಟು ಶ್ರಮ ವಹಿಸಿತ್ತು. ಪ್ರಮುಖವಾಗಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಿತು. ಅತ್ಯಂತ ಪ್ರಮುಖವಾಗಿ ಸಂಸದ ಬಿ.ವೈ. ರಾಘವೇಂದ್ರ BYRaghavendra ಅವರು ಈ ಕನಸಿನ ಸಾಕಾರಕ್ಕೆ ಬಹಳಷ್ಟು ಶ್ರಮಿಸಿದ್ದಾರೆ. ಇವೆಲ್ಲವುಗಳಿಂದಾಗಿ ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಆರಂಭವಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post